ಟೆಂಪೋ ಉರುಳಿ ಮೂವರಿಗೆ ಗಾಯ
ಚಾಮರಾಜನಗರ

ಟೆಂಪೋ ಉರುಳಿ ಮೂವರಿಗೆ ಗಾಯ

October 3, 2018

ಕಾಮಗೆರೆ:  ಚಾಲಕನ ನಿಯಂತ್ರಣ ತಪ್ಪಿ ಈಚರ್ ಟೆಂಪೆÇ ಉರುಳಿಬಿದ್ದ ಪರಿಣಾಮ ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ನಡೆದಿದ್ದು, ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಮರಾಜನಗರ ಮೂಲದ ಹೆಗ್ಗವಾಡಿ ಗ್ರಾಮದ ಮಹೇಶ್ ಎಂಬುವರ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಕೊಳ್ಳೇಗಾಲ ಮಲ್ಲರಾಜು, ಯಳಂದೂರು ಶ್ರೀನಿವಾಸ್ ಗಾಯಗೊಂಡವರು. ಪೆÇನ್ನಾಚಿ ಗ್ರಾಮ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ರೇಷನ್ ವಿತರಣೆ ಮಾಡಲು ಈಚರ್ ಟೆಂಪೆÇ ಹೋಗುತ್ತಿದ್ದಾಗ ಬೆಟ್ಟಗಳ ಪ್ರದೇಶದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು ನೂರು ಮೀಟರ್ ಆಳಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ. ತಾಳು ಬೆಟ್ಟದಿಂದ ಪೆÇನ್ನಾಚ್ಚಿ ಗ್ರಾಮದ ಮಾರ್ಗವಾಗಿ ಸಂಜೆ ಸಮಯದಲ್ಲಿ ಯಾವುದೇ ವಾಹನ ಗಳ ಸಂಚಾರ ಇರದಿರುವುದು ಹಾಗೂ ಮೊಬೈಲ್ ಸಿಗ್ನಲ್ ಸಿಗದೆ ಇಲ್ಲದಿರುವ ಕಾರಣ ವಾಹನ ಹಳ್ಳಕ್ಕೆ ಬಿದ್ದಿರುವುದು ತಡವಾಗಿ ತಿಳಿದಿದೆ. ನಂತರ ಗ್ರಾಮದ ಕೆಲವರು ಗಮ ನಿಸಿ ಗಾಯಾಳುಗಳನ್ನು ಕಾಮಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

Translate »