Tag: Hassan

ಕಾರದ ಪುಡಿ ಎರಚಿ ರೌಡಿಶೀಟರ್ ಬರ್ಬರ ಹತ್ಯೆ
ಹಾಸನ

ಕಾರದ ಪುಡಿ ಎರಚಿ ರೌಡಿಶೀಟರ್ ಬರ್ಬರ ಹತ್ಯೆ

September 20, 2018

ಹಾಸನ:  ರೌಡಿ ಶೀಟರ್ ಓರ್ವ ಮನೆಯವರ ಎದುರೇ ಬರ್ಬರಬಾಗಿ ಕೊಲೆಗೀಡಾಗಿರುವ ಘಟನೆ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.ನಗರದ ಬಂಬೂ ಬಜಾರ್‍ನಲ್ಲಿರುವ ಕಿರಣ್@ಗುಂಡ ಕೊಲೆಗೀಡಾಗಿರುವ ರೌಡಿಶೀಟರ್. ಬಂಬೂ ಬಜಾರ್ ನಿವಾಸಿಗಳಾದ ಸೀನ, ನಾಗ, ಮಂಜ, ತಿಮ್ಮಣ್ಣ ಮತ್ತು ಸುಶೀಲೇಗೌಡ ಹತ್ಯೆ ಮಾಡಿದವರು ಎನ್ನಲಾಗಿದೆ. ತಡರಾತ್ರಿ ಕಾರಿನಲ್ಲಿ ಬಂದು ಮನೆಗೆ ನುಗ್ಗಿದ್ದ ಇವರು ಏಕಾಏಕಿ ಮನೆ ಮಂದಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ನಂತರ ಕಿರಣ್‍ಗೆ ಇಟ್ಟಿಗೆಯಿಂದ ತಲೆ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಗೈದಿದ್ದಾರೆ ಎಂದು ತಿಳಿದುಬಂದಿದೆ….

ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ
ಹಾಸನ

ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸಿ: ನವೀನ್ ರಾಜ್‍ಸಿಂಗ್ ಸೂಚನೆ

September 18, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಸೆ.23ರಂದು ವಿವಿಧ ಇಲಾಖೆಗಳ ಹತ್ತಾರು ಕಾಮಗಾರಿ ಗಳ ಶಿಲಾನ್ಯಾಸ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಸಂಘಟಿಸುವಂತೆ ರಾಜ್ಯ ಮಿನರಲ್ ಕಾರ್ಪೋರೇಷನ್ ಲಿ. ವ್ಯವಸ್ಥಾಪಕ ನಿರ್ದೇಶಕರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್ ಸಿಂಗ್ ಅಧಿಕಾರಿಗಳಿಗೆ ಸೂಚಿಸಿದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸೆ.23ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತೆ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಕಟ್ಟಡಗಳು ಹಾಗೂ ರಸ್ತೆಗಳು,…

ವಯೋವೃದ್ಧ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ
ಹಾಸನ

ವಯೋವೃದ್ಧ ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ

September 18, 2018

ಬೇಲೂರು: ವೃದ್ಧನೋರ್ವ ಪತ್ನಿಯನ್ನೇ ಹತ್ಯೆಗೈದಿರುವ ಘಟನೆ ತಾಲೂಕಿನ ಕಲ್ಲು ಶೆಟ್ಟಿಹಳ್ಳಿಯಲ್ಲಿ ನಡೆದಿದೆ. ಗ್ರಾಮದ ರಾಮಮ್ಮ(60) ಹತ್ಯೆಗೀಡಾದವರು. ಹಂತಕ ಪತಿ ಮೂಡ್ಲುಗಿರಿ ಬೋವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಸಾರದಲ್ಲಿ ಮೂರ್ನಾಲ್ಕು ತಿಂಗಳಿಂದಲೂ ಜಗಳ ನಡೆಯುತ್ತಿತ್ತು. ಇಂದು ಸಂಭವಿಸಿದ ಮಾತಿನ ಚಕಮಕಿ ತಾರಕ್ಕೇರಿ ವೃದ್ಧ ಮೂಡ್ಲುಗಿರಿ ಮಚ್ಚಿನಿಂದ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಹಳೇಬಿಡು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು
ಹಾಸನ

ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು

September 18, 2018

ಚನ್ನರಾಯಪಟ್ಟಣ: ತುಂಡಾಗಿ ಬಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಮೃತಪಟ್ಟ ಘಟನೆ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವರಾಜು(55) ಮೃತರು. ಪತ್ನಿ ಜತೆಯಲ್ಲಿ ಮಧ್ಯಾಹ್ನ ತೋಟದ ಕೆಲಸ ಮಾಡುತ್ತಿದ್ದ ವೇಳೆ ಮರದ ರೆಂಬೆ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ತುಂಡಾಗಿ ದೇವರಾಜು ಅವರ ಮೇಲೆ ಬಿದ್ದಿದೆ. ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಅಸುನೀಗಿದರು. ಹಿರೀಸಾವೆ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯರಾಜ್ಯದಲ್ಲಿ-7ನೇ-ತರಗತಿವರೆಗದಲ್ಲಿ 7ನೇ ತರಗತಿವರೆಗೆ ಸಿಬಿಎಸ್‌ಸಿ ಜಾರಿಗೆ ಚಿಂತನೆ
ಹಾಸನ

ರಾಜ್ಯರಾಜ್ಯದಲ್ಲಿ-7ನೇ-ತರಗತಿವರೆಗದಲ್ಲಿ 7ನೇ ತರಗತಿವರೆಗೆ ಸಿಬಿಎಸ್‌ಸಿ ಜಾರಿಗೆ ಚಿಂತನೆ

September 17, 2018

ಹಾಸನ: ರಾಜ್ಯದ ಪ್ರತಿ ತಾಲೂಕಿನಲ್ಲೂ 1ರಿಂದ 7ನೇ ತರಗತಿವರೆಗೆ ಕನಿಷ್ಠ ಒಂದು ಶಾಲೆಯಲ್ಲಿ ಸಿಬಿಎಸ್‌ಸಿ ಪಠ್ಯಕ್ರಮ ಜಾರಿಗೊಳಿಸಲು ಚಿಂತಿಸಲಾಗಿದ್ದು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಅಗತ್ಯ ನೆರವು ನೀಡಲಾಗುವುದು ಎಂದು ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮಾಹಿತಿ ನೀಡಿದರು. ರವೀಂದ್ರ ನಗರದಲ್ಲಿ ಈಡಿಗರ ಸಂಘದ ನೂತನ ವಿದ್ಯಾರ್ಥಿ ನಿಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಚಿವ ಜಾಲಪ್ಪ ಸೇರಿ ಈ ಸಮಾಜದ ವಿದ್ಯಾರ್ಥಿನಿಲಯಕ್ಕೆ ಬೆಂಗಳೂರಿನ ಬಳಿ 14 ಎಕರೆ ಜಾಗ…

ಅರಸೀಕೆರೆ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ
ಹಾಸನ

ಅರಸೀಕೆರೆ ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ಹಾವಳಿ

September 16, 2018

ಅರಸೀಕೆರೆ: ನಗರದ ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಕಾರು ಬಾರು ಹೆಚ್ಚಿದ್ದು, ಅಧಿಕಾರಿಗಳು ಕಂಡೂ ಕಾಣದಂತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಅಸಹಾಯಕರಾಗಿ ಕೈ ಚೆಲ್ಲುವುದರ ಮೂಲಕ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಸನ ಜಿಲ್ಲೆ ಅರಸೀಕೆರೆ ತಾಲೂಕು ಅತೀ ಹೆಚ್ಚು ಕಂದಾಯ ವಸೂಲಿಯಾಗುವ ಪ್ರದೇಶವಾಗಿದ್ದು, ಇದಕ್ಕಾಗಿ ನಗರದಲ್ಲಿರುವ ತಾಲೂಕು ಕಚೇರಿಯಲ್ಲಿ ಇತ್ತೀಚೆಗೆ ಮಧ್ಯವರ್ತಿಗಳ ಕಾರುಬಾರು ಹೆಚ್ಚುವ ಮೂಲಕ ಜನ ಸಾಮಾನ್ಯರು ಅಧಿಕಾರಿ ಗಳ ಬಳಿ ಸರ್ಕಾರಿ ಕೆಲಗಳನ್ನು ಮಾಡಿಕೊಳ್ಳು ವುದೇ ದುಸ್ಸಾಹಸ. ರಾಜ್ಯ ಮತ್ತು ಕೇಂದ್ರ…

ಮುಖ್ಯಮಂತ್ರಿಗಳ ಪ್ರವಾಸ: ಪೂರ್ವ ತಯಾರಿ ಸಭೆ
ಹಾಸನ

ಮುಖ್ಯಮಂತ್ರಿಗಳ ಪ್ರವಾಸ: ಪೂರ್ವ ತಯಾರಿ ಸಭೆ

September 16, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಡಿಸಿ ಕಚೇರಿಯಲ್ಲಿಂದು ಮತ್ತೊಂದು ಸುತ್ತಿನ ಪೂರ್ವ ತಯಾರಿ ಸಭೆ ನಡೆಯಿತು. ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹಾಗೂ ಜಿಪಂ ಪ್ರಭಾರಿ ಮುಖ್ಯಕಾರ್ಯ ನಿರ್ವಹಕ ಅಧಿಕಾರಿ ಪುಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರಿಂದ ಶಿಲಾ ನ್ಯಾಸ, ಉದ್ಘಾಟನೆ ನೆರವೇರಿಸಲು ಸಿದ್ಧವಿ ರುವ 50 ಲಕ್ಷ ರೂ. ಮೇಲ್ಪಟ್ಟ ಕಾಮ ಗಾರಿ ಗಳನ್ನು ಸಭೆಯಲ್ಲಿ ಪಟ್ಟಿ ಮಾಡಲಾಯಿತು. ಲೋಕೋಪಯೋಗಿ ಇಲಾಖೆಯ ವಿವಿಧ ಕಟ್ಟಡ ಕಾಮಗಾರಿಗಳು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ…

ಹಾಸನ ನೂತನ ಎಸ್ಪಿಯಾಗಿ ಎ.ಎನ್.ಪ್ರಕಾಶ್‍ಗೌಡ
ಹಾಸನ

ಹಾಸನ ನೂತನ ಎಸ್ಪಿಯಾಗಿ ಎ.ಎನ್.ಪ್ರಕಾಶ್‍ಗೌಡ

September 16, 2018

ಹಾಸನ: ಜಿಲ್ಲಾ ಪೆÇಲೀಸ್ ವರಿ ಷ್ಠಾಧಿಕಾರಿ ರಾಹುಲ್ ಕುಮಾರ್ ಶಹ ಪುರವಾಡ್ ಅವರನ್ನು ರಾಜ್ಯ ಸರ್ಕಾರ ಶನಿವಾರ ವರ್ಗಾವಣೆಗೊಳಿಸಿ ಎ.ಎನ್. ಪ್ರಕಾಶ್‍ಗೌಡನ್ನು ಆ ಸ್ಥಾನಕ್ಕೆ ನೇಮಿಸಿ ಆದೇಶ ಹೊರಡಿಸಿದೆ. ಎ.ಎನ್.ಪ್ರಕಾಶ್‍ಗೌಡ ಅವರು ಬೆಂಗಳೂರಿನ ಮೆಟ್ರೋ ಪಾಲಿಟಿನ್ ಟಾಸ್ಕ್ ಪೆÇೀರ್ಸ್‍ನ ಪೆÇಲೀಸ್ ವರಿಷ್ಠಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಕಳೆದ ಎರಡೂವರೇ ವರ್ಷಗಳಿಂದ ಹಾಸನ ಜಿಲ್ಲಾ ಪೆÇಲೀಸ್ ವರಿಷ್ಠಾಧಿ ಕಾರಿಯಾಗಿ ಸೇವೆ ಸಲ್ಲಿಸಿದ ರಾಹುಲ್ ಕುಮಾರ್ ಶಹಪುರ ವಾಡ್ ಅವರಿಗೆ ಯಾವುದೇ ಹುದ್ದೆಯನ್ನು ತೋರಿಸದೇ ಖಾಲಿ ಉಳಿಸಲಾಗಿದೆ.

ಹಾಸನ:ಆರೋಗ್ಯ ಕರ್ನಾಟಕ ಜಾರಿ
ಹಾಸನ

ಹಾಸನ:ಆರೋಗ್ಯ ಕರ್ನಾಟಕ ಜಾರಿ

September 13, 2018

ಹಾಸನ: ಹಲವು ಯೋಜನೆಗಳ ವಿಲೀನದೊಂದಿಗೆ ಪ್ರಸ್ತುತ ಆರೋಗ್ಯ ಕರ್ನಾ ಟಕ ಯೋಜನೆ ಜಾರಿಗೆ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸತೀಶ್ ತಿಳಿಸಿದರು. ನಗರದ ಸಾಲಗಾಮೆ ರಸ್ತೆ ಬಳಿಯ ಜಿಲ್ಲಾ ಆರೋಗ್ಯ ಇಲಾಖೆ ಸಭಾಂಗಣ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶಸ್ವಿನಿ, ವಾಜಪೇಯಿ ಆರೋ ಗ್ಯಶ್ರೀ, ರಾಜೀವ್ ಆರೋಗ್ಯ ಭಾಗ್ಯ, ಹಿರಿಯ ನಾಗರಿಕರಿಗೆ ರೆಸ್ಬಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ, ರಾಷ್ಟ್ರೀಯ ಬಾಲ ಸ್ವಾಸ್ಥ್ಯಾ ಯೋಜನೆ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆ ಸೇರಿದಂತೆ ಇಂದಿರಾ ಸುರಕ್ಷಾ ಯೋಜನೆಗಳೊಂದಿಗೆ ಪ್ರಸ್ತುತ…

ಟೀಕೆ ಸಹಿಸಿದವ ಉನ್ನತ ಮಟ್ಟಕ್ಕೇರುವ:ಹೆಚ್‍ಡಿಡಿ
ಹಾಸನ

ಟೀಕೆ ಸಹಿಸಿದವ ಉನ್ನತ ಮಟ್ಟಕ್ಕೇರುವ:ಹೆಚ್‍ಡಿಡಿ

September 12, 2018

ಹೊಳೆನರಸೀಪುರ: ಟೀಕೆಗಳನ್ನು ಸಹಿಸಿಕೊಂಡು ವ್ಯಕ್ತಿತ್ವ ಹಾಗೂ ಗೌರವ ಉಳಿಸಿಕೊಳ್ಳುವ ವ್ಯಕ್ತಿ ಮುಂದೊಂದು ದಿನ ಉನ್ನತ ಮಟ್ಟಕ್ಕೇರುತ್ತಾನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಫೈಯಾಜ್ ಪಾಷ ರಚಿಸಿರುವ ಹೆಚ್.ಡಿ.ದೇವೇಗೌಡರ ಜೀವನ ಆಧಾರಿತ (ದೊಡ್ಡಗೌಡರ ಜೀವನಗಾಥೆ) `ನಮ್ಮೂರ ದ್ಯಾವಪ್ಪ’ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಭಾಗವಹಿಸಿ ಅವರು ತಮ್ಮ ಜೀವನ ಅನುಭವ ಹಂಚಿಕೊಂಡರು. ನನ್ನ ಜೀವನ ಚರಿತ್ರೆಯನ್ನು ರಚಿಸಿದ ವ್ಯಕ್ತಿ ರಾಜಕೀಯ ಜಂಜಾಟ ಮತ್ತು ಜೀವನದ ಆಗುಹೋಗುಗಳ…

1 79 80 81 82 83 103
Translate »