ಟೀಕೆ ಸಹಿಸಿದವ ಉನ್ನತ ಮಟ್ಟಕ್ಕೇರುವ:ಹೆಚ್‍ಡಿಡಿ
ಹಾಸನ

ಟೀಕೆ ಸಹಿಸಿದವ ಉನ್ನತ ಮಟ್ಟಕ್ಕೇರುವ:ಹೆಚ್‍ಡಿಡಿ

September 12, 2018

ಹೊಳೆನರಸೀಪುರ: ಟೀಕೆಗಳನ್ನು ಸಹಿಸಿಕೊಂಡು ವ್ಯಕ್ತಿತ್ವ ಹಾಗೂ ಗೌರವ ಉಳಿಸಿಕೊಳ್ಳುವ ವ್ಯಕ್ತಿ ಮುಂದೊಂದು ದಿನ ಉನ್ನತ ಮಟ್ಟಕ್ಕೇರುತ್ತಾನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಫೈಯಾಜ್ ಪಾಷ ರಚಿಸಿರುವ ಹೆಚ್.ಡಿ.ದೇವೇಗೌಡರ ಜೀವನ ಆಧಾರಿತ (ದೊಡ್ಡಗೌಡರ ಜೀವನಗಾಥೆ) `ನಮ್ಮೂರ ದ್ಯಾವಪ್ಪ’ ಪುಸ್ತಕ ಬಿಡುಗಡೆ ಸಮಾರಂಭ ದಲ್ಲಿ ಭಾಗವಹಿಸಿ ಅವರು ತಮ್ಮ ಜೀವನ ಅನುಭವ ಹಂಚಿಕೊಂಡರು.

ನನ್ನ ಜೀವನ ಚರಿತ್ರೆಯನ್ನು ರಚಿಸಿದ ವ್ಯಕ್ತಿ ರಾಜಕೀಯ ಜಂಜಾಟ ಮತ್ತು ಜೀವನದ ಆಗುಹೋಗುಗಳ ಬಗ್ಗೆ ಸುಧಾರಿಸಿ ಬರೆದಿ ದ್ದಾರೆ. ನಮ್ಮ ನಿತ್ಯದ ಜೀವನದಲ್ಲಿ ಹಲವಾರು ಟೀಕೆ-ಟಿಪ್ಪಣಿಗಳನ್ನು ವ್ಯಕ್ತಪಡಿಸಿ, ಸಲ್ಲದ ಅಪಪ್ರಚಾರ ಮಾಡುವುದುಂಟು. ಆದರೆ ಸಾಮಾನ್ಯ ರೈತನ ಮಗನಾಗಿ ಸೋಲು ಗೆಲುವು ಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಮಟ್ಟಿಗೆ ನನ್ನ ಗುರಿ ಸಾಧಿಸಿದ್ದೇನೆ ಎಂದರಲ್ಲದೆ, ತಮ್ಮ ಬಾಲ್ಯ, ಸ್ನೇಹಿತರು, ಶಿಕ್ಷಕರು ಹಾಗೂ ಗ್ರಾಮಸ್ಥರನ್ನು ನೆನೆದು ಭಾಹುಕರಾದರು.

ಅಂದು ನಾನು ಪ್ರಧಾನಿಯಾಗಿ 10 ತಿಂಗಳಲ್ಲಿ ಕಳಂಕ ರಹಿತ ಆಡಳಿತ ನೀಡಿದೆ. ಜಮ್ಮುಕಾಶ್ಮೀರದಲ್ಲಿ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ ಎಂದು ದೇಶದಾದ್ಯಂತ ಚರ್ಚೆಯಾಗುತ್ತಿತ್ತು. ಆದರೆ ನಾನು ಅದನ್ನೂ ಮೀರಿ ಚುನಾವಣೆ ನಡೆಸಿ ತೋರಿಸಿದೆ ಎಂದು ಹೆಮ್ಮೆಪಟ್ಟುಕೊಂಡರು.

ರಾಜ್ಯ ಜೆಡಿಎಸ್ ಅಧ್ಯಕ್ಷ ಶಾಸಕ ಎ.ಹೆಚ್. ವಿಶ್ವನಾಥ್ ಮಾತನಾಡಿ, ಸಾಮಾನ್ಯ ಕುಟುಂಬದಲ್ಲಿ ಜನಿಸಿದ ದೇವೇಗೌಡರು ಉನ್ನತ ಮಟ್ಟಕ್ಕೇರಿ ದೆಹಲಿ ಕೆಂಪುಕೋಟೆ ಯಲ್ಲಿ ಕನ್ನಡ ಹಿರಿಮೆ ಎತ್ತಿಹಿಡಿದರು. ಜಾತ್ಯಾತೀತ ಶಕ್ತಿಗಳನ್ನು ಒಂದುಗೂಡಿಸಿ ಪ್ರಧಾನಿಯಾಗಿ ಕಪ್ಪು ಚುಕ್ಕೆ ಇಲ್ಲದಂತೆ ಪ್ರಮಾಣಿಕ ಆಡಳಿತ ನೀಡಿದರು ಎಂದು ಹೊಗಳಿದರು.

ಸಾಹಿತಿ ಡಾ.ಪಿ.ಕೆ.ರಾಜಶೇಖರ್ ಮಾತ ನಾಡಿ, ದೇವೇಗೌಡರು ಜನಿಸಿದ ಜಿಲ್ಲೆ ರಾಜ ಕೀಯವಾಗಿ ಮೇರುಪರ್ವತದಲ್ಲಿದ್ದು, ವಿಧಾನ ಸೌಧದ ಎದುರು ದೇವೇಗೌಡರ ಪುತ್ಥಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಮೈಸೂರು ವಿವಿ ವಿಶ್ರಾಂತ ಕುಲಪತಿ ಡಾ.ರಂಗಪ್ಪ ಮಾತನಾಡಿದರು. ಮೈಸೂರು ವಿವಿ ಪ್ರಾಧ್ಯಾಪಕರು ಹಾಗೂ ಲೇಖಕ ಪಿ.ನಾಗಣ್ಣ ಬಿಡುಗಡೆಯಾದ ಪುಸ್ತಕದ ಬಗ್ಗೆ ವಿಶ್ಲೇಷಿಸಿದರು. ಇದೇ ಸಂದರ್ಭ ದಲ್ಲಿ ಹೆಚ್.ಡಿ.ದೇವೇಗೌಡರ ಜೀವನ ಚರಿತ್ರೆ ಆಧಾರಿತ (ದೊಡ್ಡಗೌಡರ ಜೀವನ ಗಾಥೆ) `ನಮ್ಮೂರ ದ್ಯಾವಪ್ಪ’ ಪುಸ್ತಕ ಬಿಡು ಗಡೆಗೊಳಿಸಲಾಯಿತು.

ಮುಖ್ಯಮಂತ್ರಿ ಸ್ವರ್ಣ ಪದಕ ವಿಜೇತ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ಶಹಪುರ ವಾಡ್ ಮತ್ತು ಲೇಖಕ ಫೈಯಾಜ್ ಪಾಷರನ್ನು ಸನ್ಮಾನಿಸಲಾತು. ಪ್ರಜ್ವಲ್ ರೇವಣ್ಣ, ಜೆಡಿಎಸ್ ಮುಖಂಡ ಟಿ.ಶಿವಕುಮಾರ್, ಪ್ರಾಂಶುಪಾಲ ನಿರ್ವಾಣೇಗೌಡ, ತಹಶೀಲ್ದಾರ್ ವೈ.ಎಂ.ರೇಣುಕುಮಾರ್, ಸ್ವಾಮಿವೇಕಾನಂದ ಯುವ ವೇದಿಕೆ ಅಧ್ಯಕ್ಷ ರೆಹಮಾನ್, ಕೆಂಪೇಗೌಡ ವೇದಿಕೆ ಅಧ್ಯಕ್ಷ ಲೋಕೇಶ್, ಮಾಜಿ ಪುರ ಸಭಾಧ್ಯಕ್ಷ ಸುಬ್ರಮಣ್ಯ ವೇದಿಕೆಯಲ್ಲಿದ್ದರು.

Translate »