ಆರೋಗ್ಯವಂತ ಮಹಿಳೆ-ಸಂತಸದ ಮನೆ: ಸೆ.16ರಂದು `ಸೀರೆ ನಡಿಗೆ’ ಸ್ಪರ್ಧೆ
ಮೈಸೂರು

ಆರೋಗ್ಯವಂತ ಮಹಿಳೆ-ಸಂತಸದ ಮನೆ: ಸೆ.16ರಂದು `ಸೀರೆ ನಡಿಗೆ’ ಸ್ಪರ್ಧೆ

September 12, 2018

ಮೈಸೂರು:`ಆರೋಗ್ಯವಂತ ಮಹಿಳೆ-ಸಂತಸದ ಮನೆ’ ವಿಷಯ ಕುರಿತಂತೆ ಮೈಸೂರಿನ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ವತಿಯಿಂದ ಸೆ.16ರಂದು ಬೆಳಿಗ್ಗೆ 6 ಗಂಟೆಗೆ ಮಹಿಳೆಯರಿಗಾಗಿ `ಸೀರೆ ನಡಿಗೆ’ (ಸ್ಯಾರಿ ವಾಕಥಾನ್) ಏರ್ಪಡಿಸಿದೆ.
ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಸೀರೆ ಉಟ್ಟು ನಡೆಯುವ ಸ್ಪರ್ಧೆ ಏರ್ಪಡಿಸಿದೆ.

ಮೂರು ಕಿ.ಮೀ ಉದ್ದದ ಈ ನಡಿಗೆ ಬೆಳಿಗ್ಗೆ 6 ಗಂಟೆಗೆ ಮೈಸೂರಿನ ಮಹಾರಾಜ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ. ಮಹಾರಾಜ ಜೂನಿಯರ್ ಕಾಲೇಜು ಮೈದಾನದಿಂದ ಜೆಎಲ್‍ಬಿ ರಸ್ತೆ, ಜಾವಗಲ್ ಶ್ರೀನಾಥ್ ವೃತ್ತ, ಎಂ.ಎನ್.ಜೋಯಿಸ್ ವೃತ್ತ, ಸೀತಾವಿಲಾಸ ರಸ್ತೆ, ರಮಾವಿಲಾಸ ರಸ್ತೆ, ಸಂತೆಪೇಟೆ ಕೂಡು ರಸ್ತೆ, ದೇವರಾಜ ಅರಸು ರಸ್ತೆ ಮೂಲಕ ಮತ್ತೆ ಆರಂಭಿಕ ಸ್ಥಳ ಸೇರಲಿದೆ.

ನಡಿಗೆಯಿಂದ ಮಹಿಳೆಯ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದು, ಕರ್ನಾಟಕ ಸಿಲ್ಕ್ ಸ್ಯಾರೀಸ್ ಸೇರಿದಂತೆ ಇನ್ನಿತರ ಹಲವು ಸಂಸ್ಥೆಗಳು ಸಹಯೋಗ ನೀಡಿವೆ. ಕಾರ್ಯಕ್ರಮದ ಬಳಿಕ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

ನಡಿಗೆ ಆರಂಭಕ್ಕೆ ಮೊದಲು ಮಹಿಳೆಯರ ಆರೋಗ್ಯ ಕುರಿತಂತೆ ನಾರಾಯಣ ಹೃದಯಾಲಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರು ವಿಷಯ ಕುರಿತು ಸ್ಪರ್ಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿಗೆ ಮೊ- 9880059345 ಅಥವಾ 9945279675 ಸಂಪರ್ಕಿಸುವಂತೆ ಕಾರ್ಯಕ್ರಮದ ಸಂಚಾಲಕಿ ಸೌಜನ್ಯ ಅತಾವರ್ ತಿಳಿಸಿದ್ದಾರೆ.

Translate »