ಮುಖ್ಯಮಂತ್ರಿಗಳ ಪ್ರವಾಸ: ಪೂರ್ವ ತಯಾರಿ ಸಭೆ
ಹಾಸನ

ಮುಖ್ಯಮಂತ್ರಿಗಳ ಪ್ರವಾಸ: ಪೂರ್ವ ತಯಾರಿ ಸಭೆ

September 16, 2018

ಹಾಸನ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲಾ ಪ್ರವಾಸದ ಹಿನ್ನೆಲೆಯಲ್ಲಿ ಡಿಸಿ ಕಚೇರಿಯಲ್ಲಿಂದು ಮತ್ತೊಂದು ಸುತ್ತಿನ ಪೂರ್ವ ತಯಾರಿ ಸಭೆ ನಡೆಯಿತು.

ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹಾಗೂ ಜಿಪಂ ಪ್ರಭಾರಿ ಮುಖ್ಯಕಾರ್ಯ ನಿರ್ವಹಕ ಅಧಿಕಾರಿ ಪುಟ್ಟಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿಯವರಿಂದ ಶಿಲಾ ನ್ಯಾಸ, ಉದ್ಘಾಟನೆ ನೆರವೇರಿಸಲು ಸಿದ್ಧವಿ ರುವ 50 ಲಕ್ಷ ರೂ. ಮೇಲ್ಪಟ್ಟ ಕಾಮ ಗಾರಿ ಗಳನ್ನು ಸಭೆಯಲ್ಲಿ ಪಟ್ಟಿ ಮಾಡಲಾಯಿತು.

ಲೋಕೋಪಯೋಗಿ ಇಲಾಖೆಯ ವಿವಿಧ ಕಟ್ಟಡ ಕಾಮಗಾರಿಗಳು, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಹಾಸನಾಂಬ ಬೋಧಕ ಆಸ್ಪತ್ರೆ, ಆಯುಷ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯ ಹತ್ತಾರು ಅಭಿವೃದ್ಧಿ ಕಾಮಗಾರಿಗಳನ್ನು ಪಟ್ಟಿ ಮಾಡಿದ ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಹಾಗೂ ಜಿಪಂ ಪ್ರಭಾರಿ ಮುಖ್ಯ ಕಾರ್ಯ ನಿರ್ವಹಕಾ ಧಿಕಾರಿ ಪುಟ್ಟಸ್ವಾಮಿ ಶಿಲಾಫಲಕ ತಯಾರಿ ಸೇರಿದಂತೆ ಎಲ್ಲಾ ಪೂರ್ವ ಸಿದ್ಧತೆ ಮಾಡಿ ಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ತಿಳಿಸಿದರು.
ಈ ಮೊದಲು ಸೆ.21ರಂದು ಮುಖ್ಯ ಮಂತ್ರಿಗಳ ಕಾರ್ಯಕ್ರಮ ನಿಗದಿಯಾಗಿದ್ದು, ಅಂದು ಮೊಹರಂ ಕಡೇ ದಿನವಾಗಿರುವು ದರಿಂದ ಶೀಘ್ರವೇ ದಿನಾಂಕ ಅಂತಿಮ ಗೊಳ್ಳಲಿದೆ ಎಂದು ಪುಟ್ಟಸ್ವಾಮಿ ತಿಳಿಸಿದರು.

ಸಣ್ಣ ನೀರಾವರಿ, ನಗರಾಭಿವೃದ್ಧಿ, ಕೃಷಿ, ತೋಟಗಾರಿಕೆ ಇಲಾಖೆಗಳು ತಮ್ಮ ಇಲಾಖೆ ಕಟ್ಟಡ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾಡಳಿತದಿಂದ ಆಹ್ವಾನ ಪತ್ರ ತಯಾರಿಸಲಾಗುವುದು. ಆಯಾಯ ಇಲಾಖೆಗಳು ತಮ್ಮ ಕಾಮಗಾರಿಗಳ ಕುರಿತು ಪ್ರತೇಕ ಆಹ್ವಾನ ಪತ್ರ ಸಿದ್ಧಪಡಿಸಿ ಶಿಷ್ಠಾಚಾರ ಪಾಲಿಸುವಂತೆ ನಿರ್ದೇಶನ ನೀಡಲಾಯಿತು. ಮುಖ್ಯ ಯೋಜನಾಧಿ ಕಾರಿ ಪರಪ್ಪಸ್ವಾಮಿ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿದ್ದರು.

Translate »