ವಿವಿಧ ಬೇಡಿಕೆ ಈಡೇರಿಕೆಗೆ ಜನತೆಯ ಆಗ್ರಹ
ಹಾಸನ

ವಿವಿಧ ಬೇಡಿಕೆ ಈಡೇರಿಕೆಗೆ ಜನತೆಯ ಆಗ್ರಹ

September 16, 2018

ಬೇಲೂರು:  ಇಂದು ತಾಲೂಕಿನ ಚೀಕನಹಳ್ಳಿಯಲ್ಲಿ ಶಾಸಕ ಕೆ.ಎಸ್. ಲಿಂಗೇಶ್ ನಡೆಸಿದ ಗ್ರಾಮ ಸಭೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದರು.

ಸ್ಮಶಾನದ ಸ್ಥಳ ಒತ್ತುವರಿಯಾಗಿ ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ. ಕುಡಿ ಯುವ ನೀರಿಗೂ ಸಾಕಷ್ಟು ತೊಂದರೆ ಯಾಗಿದೆ ಎಂದು ಶಿರಗೂರು ಗ್ರಾಮಸ್ಥರು ತಮ್ಮೂರಿನ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಿದರು.

ಹುನುಗನಹಳ್ಳಿಯ ಗ್ರಾಪಂ ಅಧ್ಯಕ್ಷರ ವಿವಾದವು ನ್ಯಾಯಾಲಯದಲ್ಲಿ ಇರುವು ದರಿಂದ ಅಲ್ಲಿನ ಅಧ್ಯಕ್ಷ ಹುದ್ದೆ ಖಾಲಿ ಯಿದೆ. ಇದರಿಂದ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ ಎಂದು ಗ್ರಾಮಸ್ಥರು ದೂರಿದರು. ಕುಡಿಯುವ ನೀರಿನ ಸಮಸ್ಯೆಯು ದಿನೇ ದಿನೇ ಉಲ್ಪಣ ಗೊಳ್ಳುತ್ತಿದೆ ಎಂದು ಅಲವತ್ತುಕೊಂಡರು.

ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಗ್ರಾಮಸ್ಥರು, ತಮ್ಮ ಗ್ರಾಮಗಳಲ್ಲಿನ ನೀರಿನ ಸಮಸ್ಯೆ, ರಸ್ತೆ ಅವ್ಯವಸ್ತೆ, ತಹಶೀಲ್ದಾರ್ ಕಚೇರಿಯ ಬಗರ್ ಹುಕುಂ ಸಾಗುವಳಿ ಹಕ್ಕುಪತ್ರದ ವಿತರಣೆಯಲ್ಲಿನ ಭ್ರಷ್ಟಾ ಚಾರದ ಕುರಿತು ಅಗತ್ಯ ಕ್ರಮ ಕೈಗೊಳ್ಳಲು ಒಕ್ಕೊರಲಿನಿಂದ ಶಾಸಕರಲ್ಲಿ ಆಗ್ರಹಿಸಿದರು.

ತಾಪಂ ಮಾಜಿ ಸದಸ್ಯ ಮಹೇಶ್ ಮಾತ ನಾಡಿ, ಮಲೆನಾಡು ಭಾಗದಲ್ಲಿ ಮಳೆ ಯಿಂದ ಅಪಾರ ಹಾನಿಯಾಗಿದೆ. ಬೆಳೆನಷ್ಟ ವಾಗಿದೆ. ಕಾಫಿ, ಮೆಣಸು ಬೆಳೆ ನಷ್ಟವಾಗಿದೆ. ಕೇಂದ್ರ ದಿಂದ ತಂಡವೊಂದು ಆಗಮಿಸಿ ಸಕಲೇಶ ಪುರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೇಂದ್ರ ತಂಡವು ಬೇಲೂರು ತಾಲೂಕಿ ಗೂ ಆಗಮಿಸಿ ಹಾನಿಯನ್ನು ಪರಿಶೀಲಿಸಿ ವರದಿ ನೀಡಲು ಕ್ರಮ ವಹಿಸುವಂತೆ ಶಾಸಕರಲ್ಲಿ ಎಂದು ಕೋರಿದರು.

ಗ್ರಾಮಸ್ಥರ ಅಹವಾಲನ್ನು ಸ್ವೀಕರಿಸಿ ಮಾತನಾಡಿದ ಶಾಸಕ ಕೆ.ಎಸ್.ಲಿಂಗೇಶ್, ಗ್ರಾಮಗಳಲ್ಲಿನ ಹಾಗೂ ಜನರ ಕುಂದು ಕೊರತೆಗಳನ್ನು ತಹಶೀಲ್ದಾರ್, ಹಿರಿಯ ಅಧಿಕಾರಿಗಳೊಂದಿಗೆ ಆಯಾಯ ಗ್ರಾಮ ಗಳಿಗೆ ಭೇಟಿ ನೀಡಿ ನೀಗಿಸುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಶಾಸಕರನ್ನು ಚೀಕನ ಹಳ್ಳಿ ಗ್ರಾಪಂನಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಪಂ ಸದಸ್ಯೆ ರತ್ಮಮ್ಮ ಐಸಾಮಿಗೌಡ, ತಾಪಂ ಅಧ್ಯಕ್ಷ ಹರೀಶ್, ಉಪಾಧ್ಯಕ್ಷೆ ಕಮಲಾ, ಚೀಕನಹಳ್ಳಿ ಗ್ರಾಪಂ ಅಧ್ಯಕ್ಷ ಕೇಶವಮೂರ್ತಿ, ಉಪಾಧ್ಯಕ್ಷೆ ನಂದಿನಿ, ಸದಸ್ಯ ರಮೇಶ್, ತಾಪಂ ಸದಸ್ಯ ತಮ್ಮಣ್ಣಗೌಡ, ಕುಮಾರ್, ತಾಪಂ ಸದಸ್ಯ ಸೋಮಯ್ಯ, ನವಿಲಹಳ್ಳಿ ಶಶಿ ಕುಮಾರ್, ಉಸ್ತುವಾರಿ ಅಧಿಕಾರಿ ಕಾಂತ ರಾಜು, ಪಿಡಿಓ ಅಶೋಕುಮಾರ್ ಮತ್ತಿತರರಿದ್ದರು.

Translate »