ಖಾಸಗಿ ವಾಹನ, ಟ್ಯಾಕ್ಸಿ ಚಾಲಕರ ಪ್ರತಿಭಟನೆ
ಮೈಸೂರು

ಖಾಸಗಿ ವಾಹನ, ಟ್ಯಾಕ್ಸಿ ಚಾಲಕರ ಪ್ರತಿಭಟನೆ

September 26, 2018

ಹಾಸನ: ವಾಹನವನ್ನು ನಿಲುಗಡೆ, ಡಿಎಲ್, ವಿಮೆ ಸಮಸ್ಯೆ ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಖಾಸಗಿ ವಾಹನ ಹಾಗೂ ಟ್ಯಾಕ್ಸಿ ಚಾಲಕರ ಸಂಘದಿಂದ ಪ್ರತಿಭಟಿಸಲಾಯಿತು.

ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿದರು. ಖಾಸಗಿ ವಾಹನ ಮತ್ತು ಟ್ಯಾಕ್ಸಿ ನಿಲುಗಡೆಗೆ ನಿಲ್ದಾಣದ ಕೊರತೆ ಇದ್ದು, ಚಾಲಕರ ಪರವಾನಗಿ ಪಡೆಯಲು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗಿದೆ ಎಂದು ಅಲವತ್ತು ಕೊಂಡ ಪ್ರತಿಭಟನಾಕಾರರು, ಚಾಲಕರು ಅಪಘಾತಕ್ಕೀಡಾದಾಗ ಸರ್ಕಾರ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡ ಬೇಕು. ಹಾಸನ ಜಿಲ್ಲೆಯಲ್ಲಿ ಚಾಲಕರ ಭವನ ನಿರ್ಮಾಣ ಮಾಡಿ, ಎಲ್ಲಾ ವಾಹನ ಚಾಲಕರಿಗೆ ಸಂಘದ ಪರವಾಗಿ ವಾಹನ ಸೌಲಭ್ಯ ಒದಗಿಸಬೇಕು. ಚಾಲಕರ ಮಕ್ಕಳಿಗೆ ಶಾಲೆ ಗಳಲ್ಲಿ ವಿಶೇಷ ಮೀಸಲಾತಿ ನೀಡಿ, ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿ ಸುತ್ತಿರುವ ಚಾಲಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಹೆದ್ದಾರಿ ಟೋಲ್ ರಸ್ತೆಯಲ್ಲಿ ಸಂಚರಿ ಸುವ ನಮ್ಮ ಸಂಘದ ಐಡಿ ಕಾರ್ಡ್ ಹೊಂದಿದ ಪದಾಧಿಕಾರಿಗಳಿಗೆ ಟೋಲ್ ಶುಲ್ಕದಲ್ಲಿ ಶೇ.50ರಷ್ಟು ವಿನಾಯಿತಿ ನೀಡಿ, ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ರಿಯಾಯಿತಿ ನೀಡಬೇಕು ಎಂದು ಇದೇ ವೇಳೆ ಆಗ್ರಹಿಸಿದರಲ್ಲದೆ, ತಮ್ಮ ನ್ಯಾಯ ಯುತ ಬೇಡಿಕೆ ಈಡೇರಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾ ಡಳಿತಕ್ಕೆ ಮನವಿ ಸಲ್ಲಿಸಿದರು. ಈಸಂದರ್ಭ ದಲ್ಲಿ ಕರ್ನಾಟಕ ರಾಜ್ಯ ಖಾಸಗಿ ಹಾಗೂ ಟ್ಯಾಕ್ಸಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಮೈಸೂರು ವಿಭಾಗ ಸಂಘ ಟನಾ ಕಾರ್ಯದರ್ಶಿ ಎ.ವಿ.ಲೋಹಿತ್, ಶಿವಕುಮಾರ್, ಕೆ.ರಾಜು, ಶಿವಪ್ಪ, ಆಲೀ ಖಾನ್, ಮೆಹಬೂಬ, ಜಗದೀಶ್, ದೇವಾನಂದ್, ಚಂದ್ರು ಇತರರಿದ್ದರು.

Translate »