ಬಡವರು, ರೈತ ಪರ ಸಿಎಂ ಕಾರ್ಯಕ್ರಮ; ಆಹಾರ ಮಣ್ಣುಪಾಲು, ಜಿಲ್ಲಾ ಕ್ರೀಡಾಂಗಣ ಪ್ರಾಸ್ಟಿಕ್‍ಮಯ
ಹಾಸನ

ಬಡವರು, ರೈತ ಪರ ಸಿಎಂ ಕಾರ್ಯಕ್ರಮ; ಆಹಾರ ಮಣ್ಣುಪಾಲು, ಜಿಲ್ಲಾ ಕ್ರೀಡಾಂಗಣ ಪ್ರಾಸ್ಟಿಕ್‍ಮಯ

September 25, 2018

ಹಾಸನ: ರೈತರು, ಬಡವರು, ಅಸಹಾಯಕರ ಪರ ಕಾಳಜಿ ವ್ಯಕ್ತಪಡಿ ಸುವ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಕಾರ್ಯಕ್ರಮದಲ್ಲೇ ಅದಕ್ಕೆ ತದ್ವಿ ರುದ್ಧವಾಗಿ ಹಸಿದವರ ಹೊಟ್ಟೆ ತಣಿಸ ಬೇಕಿದ್ದ ಆಹಾರ ಎಲ್ಲೆಂದರಲ್ಲಿ ಚೆಲ್ಲಾಡುವ ಮೂಲಕ ಮಣ್ಣುಪಾಲಾಗಿದೆ.

ನಗರದಲ್ಲಿ ಏರ್ಪಡಿಸಿದ್ದ 1,650 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬಡವರು, ರೈತರು ಅಸಹಾಯಕರ ಪರ ಕಾಳಜಿ ವ್ಯಕ್ತಪಡಿಸಿ ದ್ದರು. ಆದರೆ ಅದೇ ಬಡವರು, ಅಸಹಾ ಯಕರು, ಹಸಿದವರ ಹೊಟ್ಟೆ ತುಂಬಿಸ ಬೇಕಿದ್ದ ಕ್ವಿಂಟಾಲ್‍ಗಟ್ಟಲೇ ಆಹಾರ ವ್ಯರ್ಥವಾಗಿದೆ. ಭಾನುವಾರ ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು 81 ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕಾರ್ಯಕ್ರಮಕ್ಕೆ ಬಂದಿದ್ದ ಸಾವಿರಾರು ಮಂದಿಗೆ ಮೊಸರನ್ನ, ಬಿಸಿಬೇಳೆ ಬಾತ್, ತರಕಾರಿ ಪಲಾವ್ ಮಾಡಿಸಲಾಗಿತ್ತು.

ಕ್ವಿಂಟಾಲ್‍ಗಟ್ಟಲೇ ಉಳಿದ ಆಹಾರ: ಕಾರ್ಯಕ್ರಮದ ನಂತರ ಆಗಮಿಸಿದ್ದವರು ಊಟ ಮಾಡಿದರೂ ಇನ್ನೂ ಸಾವಿರಕ್ಕೂ ಅಧಿಕ ಮಂದಿ ಊಟ ಮಾಡುವಷ್ಟು ಆಹಾರ ಹಾಗೇ ಉಳಿದಿತ್ತು. ಅದನ್ನು ಯಾವುದಾ ದರೂ ಅನಾಥಾಶ್ರಮ, ವೃದ್ಧಾಶ್ರಮ ಅಥವಾ ಬಡವರುಗಾದರೂ ನೀಡಬಹುದಾಗಿತ್ತು. ಹಾಗೇ ಮಾಡಿದರೆ ಮುಖ್ಯಮಂತ್ರಿಗಳು ಮಾಡಿದ ಭಾಷಣಕ್ಕೆ ಒಂದಷ್ಟೂ ಅರ್ಥ ವಾದರೂ ಬರುತ್ತಿತ್ತೇನೋ? ಆದರೆ ಆಯೋ ಜಕರ ನಿರ್ಲಕ್ಷ್ಯ ಹಾಗೂ ಸಂಬಂಧಪಟ್ಟ ವರ ಬೇಜವಾಬ್ದಾರಿಯಿಂದಾಗಿ ಅಷ್ಟೂ ಆಹಾರ ಮಣ್ಣುಪಾಲಾಗಿದೆ.

ಜಿಲ್ಲಾ ಕ್ರೀಡಾಂಗಣ ಸೇರಿದಂತೆ ಚರಂಡಿ, ಗಿಡ-ಮರಗಳ ಪೊದೆಗಳಲ್ಲಿ ಕ್ವಿಂಟಾಲ್ ಗಟ್ಟಲೇ ಉಳಿದ ಆಹಾರ ಸುರಿದಿದ್ದು, ಹಳಸಿ ನಾರುತ್ತಿದೆ. ಆಹಾರ ಮಾತ್ರವಲ್ಲಾ ಟೊಮೆಟೋ, ಈರುಳ್ಳಿಯಂತಹ ತರಕಾರಿಗಳೂ ಸಹ ಮಣ್ಣು ಪಾಲಾಗಿದೆ.
ಕ್ರೀಡಾಂಗಣ ಪ್ಲಾಸ್ಟಿಕ್ ಮಯ: ಇತ್ತೀ ಚೆಗೆ ಮುಖ್ಯಂತ್ರಿಗಳೇ ಸರ್ಕಾರಿ ಕಾರ್ಯಕ್ರಮ ಗಳಲ್ಲಿ ಪ್ಲಾಸ್ಟಿಕ್ ನಿಷೇಧಿಸಲು ಪ್ಲಾಸ್ಟಿಕ್ ಕುಡಿ ಯುವ ನೀರಿನ ಬಾಟಲ್, ಪ್ಲಾಸ್ಟಿಕ್ ಸಾಮಗ್ರಿ ಗಳನ್ನು ಬಳಸದಂತೆ ಸರ್ಕಾರಿ ಇಲಾಖೆ ಗಳು, ಅಧಿಕಾರಿಗಳಿಗೆ ಸೂಚನೆ ನೀಡಿ ಆದೇಶ ಹೊರಡಿಸಿದ್ದರು. ಇದು ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಆದರೆ ಇದಕ್ಕೂ ವ್ಯತಿರಿಕ್ತವಾಗಿ ನಗರದಲ್ಲಿ ನಡೆದ ಕಾರ್ಯ ಕ್ರಮದ ಪರಿಣಾಮ ಕ್ರೀಡಾಂಗಣದ ತುಂಬೆಲ್ಲಾ ಮೊಸರು, ಮಜ್ಜಿಗೆ, ನೀರಿನ ಪ್ಲಾಸ್ಟಿಕ್ ಪ್ಯಾಕೆಟ್ ರಾಶಿಯೇ ಬಿದ್ದಿದ್ದು, ಕಣ್ಣಿಗೆ ರಾಚುತ್ತಿವೆ.

ಸ್ವಚ್ಛತೆ ಯಾರಿಂದ?: ಹಾಲು, ನೀರು, ಮೊಸರು ಪೂರೈಕೆ ಮಾಡಿದ ಹಾಸನ ಹಾಲು ಒಕ್ಕೂಟದವರು, ಬೆಳಿಗ್ಗೆಯೇ ಬಂದು ಚೆಲ್ಲಾಪಿಲ್ಲಿಯಾಗಿದ್ದ ಟ್ರೇಗಳನ್ನು ಜೋಡಿಸಿಕೊಂಡು ಕೊಂಡೊಯ್ದದರು. ಆದರೆ ಅವ್ಯವಸ್ಥೆಯ ಆಗರವಾಗಿರುವ ಜಿಲ್ಲಾ ಕ್ರೀಡಾಂಗಣವನ್ನು ಸ್ವಚ್ಛತೆ ಮಾಡುವವರು ಯಾರು ಎಂಬ ಪ್ರಶ್ನೆಗೆ ಸಂಬಂಧ ಪಟ್ಟವರೇ ಉತ್ತರಿಸಬೇಕಿದೆ. ಜವಾಬ್ದಾರಿ ಸ್ಥಾನದಲ್ಲಿರುವವ ಕಾರ್ಯ ಕ್ರಮದಲ್ಲೇ ಹೀಗೆ ನಡೆದರೆ ಸ್ವಚ್ಛತೆ ಹಾಗೂ ನಿಯಮ ಪಾಲನೆ ಮಾಡುವ ವರು ಯಾರು ಎಂದು ಸಾರ್ವ ಜನಿಕರು ಪ್ರಶ್ನೆ ಕೇಳಿಬರುತ್ತಿದೆ.

Translate »