ಅರಸೀಕೆರೆ ನಗರಸಭೆ ಎದುರು ವಿನೂತನ ಪ್ರತಿಭಟನೆ
ಮೈಸೂರು

ಅರಸೀಕೆರೆ ನಗರಸಭೆ ಎದುರು ವಿನೂತನ ಪ್ರತಿಭಟನೆ

September 25, 2018

ಅರಸೀಕೆರೆ: ದಾರಿಹೋಕರ ಮೇಲೆ ಮಾರಣಾಂತಿಕ ದಾಳಿ ನಡೆಸಿ ಗಾಯಗೊಳಿ ಸುತ್ತಿರುವ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗದಿರುವ ಸ್ಥಳೀಯ ಆಡಳಿತ, ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸಮಾ ಜಿಕ ಹೋರಾಟಗಾರ ರಾಘವೇಂದ್ರ ನೇತೃತ್ವದಲ್ಲಿ ನಗರಸಭೆ ಎದುರು ವಿನೂತನವಾಗಿ ಪ್ರತಿಭಟಿಸಲಾಯಿತು.

ನಗರದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಸ್ಥಾನದಿಂದ ದನ, ಕುರಿ, ಮೇಕೆ ಮತ್ತು ನಾಯಿಮರಿಗಳೊಂದಿಗೆ ವಿನೂತನ ವಾಗಿ ಮೆರವಣಿಗೆ ಹೊರಟ ಪ್ರತಿಭಟನಾರರು, ನಗರಸಭೆ ಆವರಣದಲ್ಲಿ ಜಮಾಯಿಸಿ ಪ್ರತಿಭಟಿ ಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಮಾತ ನಾಡಿ, ನಗರಸಭೆ ಚುನಾವಣೆ ನಡೆದ ನಂತರ ಸ್ಥಳೀಯ ಆಡಳಿತ ಮಂಡಲಿ ತಾಂತ್ರಿಕ ತೊಂದರೆಗಳಿಂದ ರಚನೆ ಯಾಗಿಲ್ಲವಾದರೂ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಗರದಲ್ಲಿ ಇತ್ತೀಚೆಗೆ ಬೀದಿ ನಾಯಿ ಗಳು, ಬಿಡಾದಿ ದನಗಳು ಸೇರಿದಂತೆ ಇನ್ನಿತರೆ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದ್ದು, ನಾಗರಿಕರ ಮೇಲೆ ದಾಳಿ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಡಾಡಿ ಪ್ರಾಣಿಗಳಲ್ಲಿ ನಾಯಿಗಳ ಸಂಖ್ಯೆ ವಿಪರೀತವಾಗಿದ್ದು ಮಾರುತಿ ನಗರ, ಬಸ ವೇಶ್ವರ ನಗರ, ಸಾಯಿನಾಥ ರಸ್ತೆ, ಲಕ್ಷ್ಮೀ ಪುರ ಮಾತ್ರವಲ್ಲದೆ, ನಗರದ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿವೆ. ರಸ್ತೆಯಲ್ಲಿ ಸಂಚರಿಸುವ ಮಕ್ಕಳು, ವೃದ್ಧರು ಸೇರಿದಂತೆ ದಾರಿ ಹೋಕರ ಮೇಲೆ ಏಕಾಏಕಿ ದಾಳಿ ಮಾಡುತ್ತಿವೆ. ಇದರಿಂದ ನಗರದ ನಾಗರಿಕರು ಭಯಪಡವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿನ ಮಾಂಸಹಾರಿ ಹೋಟೇಲ್ ಗಳು ಮತ್ತು ಬೀದಿಬದಿಯ ಮಾಂಸಹಾರಿ ಅಂಗಡಿಗಳ ಮಾಲೀಕರು ತ್ಯಾಜ್ಯಗಳನ್ನು ಎಲ್ಲಂದರೆಲ್ಲಿ ಬೀಸಾಡುವುದರಿಂದ ರುಚಿ ನೋಡಿರುವ ಬೀದಿ ನಾಯಿಗಳು, ಆಹಾರ ಸಿಗದಿದ್ದಾಗ ನಾಗರಿಕರ ಮೇಲೆ ಎರಗುತ್ತವೆ. ಇಂತಹ ಪ್ರಕರಣಗಳು ಸಂಭವಿಸಿಲು ನಗರ ಸಭೆ ಅಧಿಕಾರಿಗಳು ಬೀದಿ ನಾಯಿಗಳ ತಡೆಗೆ ಗಮನ ನೀಡದಿರುವುದೇ ಕಾರಣ ಎಂದು ಕಿಡಿಕಾರಿದರಲ್ಲದೆ, ರಸ್ತೆಗಳಲ್ಲಿ ಬಿಡಾಡಿ ದನಗಳು ರಾಜರೋಷವಾಗಿ ಅಡ್ಡಾದಿಡ್ಡಿ ಮಲಗುವುದು, ಸಂಚರಿಸುತ್ತಿರುವುದರಿಂದ ವಾಹನಗಳ ಅಪಘಾತಗಳೂ ಸಂಭವಿಸು ತ್ತಿದ್ದರೂ ಅಧಿಕಾರಿಗಳು ಕೈಕಟ್ಟಿ ಕುಳಿತಿ ದ್ದಾರೆ. ಕೂಡಲೇ ಎಚ್ಚೆತ್ತು ಬೀಡಾಡಿ ಪ್ರಾಣಿ ಗಳ ನಿಯಂತ್ರಣ ಮಾಡದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ನಗರಸಭೆ ವ್ಯವಸ್ಥಾಪಕ ಮಹಾತ್ಮ ಅವರಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು, ಸಾರ್ವಜನಿಕರ ಸಮಸ್ಯೆ ಸದಾ ನೆನಪಿನಲ್ಲಿರ ಲೆಂದು ಸಾಂಕೇತಿಕವಾಗಿ ಮುದ್ದಾದ ನಾಯಿ ಮರಿಯನ್ನು ಅರ್ಪಿಸಿದರು. ಪ್ರತಿಭಟನೆಯಲ್ಲಿ ನಂದೀಶ್, ರೇಣುಕುಮಾರ್, ಪುಟ್ಟರಾಜು, ಅನಿಲ್, ರಮೇಶ್, ರಂಗನಾಥ್ ಸೇರಿ ದಂತೆ ಅನೇಕ ಭಾಗವಹಿಸಿದ್ದರು.

Translate »