ಕೂಲಿ ಹಣದ ಜಗಳ ಕೊಲೆಯಲ್ಲಿ ಅಂತ್ಯ
ಚಾಮರಾಜನಗರ

ಕೂಲಿ ಹಣದ ಜಗಳ ಕೊಲೆಯಲ್ಲಿ ಅಂತ್ಯ

September 25, 2018

ಚನ್ನರಾಯಪಟ್ಟಣ: ಕೂಲಿ ಹಣ ಹಂಚಿಕೆ ಹಿನ್ನೆಲೆ ಆರಂಭವಾದ ಜಗಳ ಕೊಲೆ ಯಲ್ಲಿ ಅಂತ್ಯ ಕಂಡಿರುವ ಘಟನೆ ತಾಲೂಕಿನ ಕಾರೇಹಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ಅರಸಿಕೆರೆ ತಾಲೂಕಿನ ತಿಪ್ಪಘಟ್ಟ ಗ್ರಾಮದ ಮಂಜು ನಾಯ್ಕ(50) ಹತ್ಯಗೀಡಾ ದವರು. ಆರೋಪಿಗಳಾದ ಸಹೋದರ ಮೂರ್ತಿ ನಾಯ್ಕ ಮತ್ತು ಅಳಿಯ ರಂಗನಾಥ್‍ರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕೃತ್ಯದಲ್ಲಿ ಭಾಗಿಯಾದ ಮೂವರು ಸಹಚರರು ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆದಿದೆ.

ವಿವರ: ಹತ್ಯಗೀಡಾದ ಮಂಜು ನಾಯ್ಕ ಸೇರಿದಂತೆ ಆರು ಮಂದಿ ಬಾಳೆ ತೋಟ ದಲ್ಲಿ ಕೂಲಿಗೆಂದು ಅರಸೀಕೆರೆಯ ತಿಪ್ಪಘಟ್ಟ ಗ್ರಾಮದಿಂದ ಚನ್ನರಾಯಪಟ್ಟಣದ ಕಾರೆ ಹಳ್ಳಿಗೆ ಬಂದಿದ್ದರು. ಭಾನುವಾರ ರಾತ್ರಿ ವಾರದ ಕೂಲಿ ಹಂಚಿಕೊಳ್ಳುವ ಹಿನ್ನೆಲೆ ಒಂದೆಡೆ ಸೇರಿದ್ದರು ಎನ್ನಲಾಗಿದೆ. ಈ ವೇಳೆ ಹಣದ ವ್ಯತ್ಯಾಸದಿಂದ ಸಹೋದರ, ಅಳಿಯ ಹಾಗೂ ಮಾವ ಮಂಜುನಾಯ್ಕರ ನಡುವೆ ಸಂಭವಿಸಿದ ಮಾತಿನ ಚಕಮಕಿ ತಾರಕಕ್ಕೇರಿ, ಆರೋಪಿಗಳು ಗುದ್ದಲಿಯಿಂದ ಬಲವಾಗಿ ಮಂಜನಾಯ್ಕನ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ಪರಿಣಾಮ ಮಂಜುನಾಯ್ಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಘಟನೆಯಿಂದ ಭಯಭೀತರಾದ ಐವರೂ ಮೃತದೇಹವನ್ನು ಯಾರಿಗೂ ತಿಳಿಯ ದಂತೆ ಕಾರೇಹಳ್ಳಿಯಿಂದ ಇಂದು ಬೆಳಗಿನ ಜಾವ ಅರಸೀಕೆರೆ ತಾಲೂಕು ತಿಪ್ಪಘಟ್ಟಕ್ಕೆ ತಂದು ಅಲ್ಲಿನ ಅಂಗನವಾಡಿ ಜಗಲಿ ಮೇಲೆ ಹಾಕಿ ಹೋಗಿದ್ದರು. ಶವವನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ವಿಚಾರ ಮುಟ್ಟಿಸಿದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಆರೋಪಿಗಳಾದ ಮೂರ್ತಿ ನಾಯ್ಕ ಮತ್ತು ಅಳಿಯ ರಂಗನಾಥ್‍ರನ್ನು ವಶಕ್ಕೆ ಪಡೆದರು. ಇನ್ನು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಗಂಗಣ್ಣ, ಸುಮಿತ್ರಾಬಾಯಿ, ಸೋಮೇಶ್ ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ನುಗ್ಗೇಹಳ್ಳಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Translate »