ನೆರೆಯಿಂದ ಧರೆಗುರುಳಿದ ಮರಗಳ ಮಾಲೀಕತ್ವದ ಬಗ್ಗೆ ಜಟಾಪಟಿ
ಕೊಡಗು

ನೆರೆಯಿಂದ ಧರೆಗುರುಳಿದ ಮರಗಳ ಮಾಲೀಕತ್ವದ ಬಗ್ಗೆ ಜಟಾಪಟಿ

September 25, 2018

ಮಡಿಕೇರಿ:  ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಹಲವು ಗ್ರಾಮಗಳಲ್ಲಿ ಸಹಸ್ರ ಸಂಖ್ಯೆಯ ಮರಗಳು ಉರಳಿ ಬಿದ್ದಿದ್ದು, ಅವುಗಳ ತೆರವಿಗೆ ಅರಣ್ಯ ಇಲಾಖೆ ಮುಂದಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಮತ್ತು ಜಿಲ್ಲಾಧಿಕಾರಿಗಳು ಮರಗÀಳ ತೆರವಿಗೆ ಅರಣ್ಯ ಇಲಾಖೆಗೆ ಸೂಚಿಸಿದ್ದು, ಮರ ತೆರವು ಕಾರ್ಯಾ ಚರಣೆ ಅರಣ್ಯ ಇಲಾಖೆಯ ಪಾಲಿಗೆ ತಲೆನೋವಾಗಿ ಪರಿಣಮಿಸಿದೆ. ಖಾಸಗಿ ಜಮೀನು, ನದಿ, ತೊರೆಗಳು ಮತ್ತು ಭತ್ತದ ಗದ್ದೆಗಳಲ್ಲಿ ಬುಡಮೇಲಾಗಿ ಉರುಳಿ ಬಿದ್ದಿರುವ ಮರಗಳನ್ನು ತೆಗೆಯಲು ಜಮೀನುಗಳ ಮಾಲೀಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮರಗಳ ನಾಟ, ಬಿಲ್ಲೆಟ್ಟ್, ಸೌದೆಗಳನ್ನಾಗಿ ಪರಿ ವರ್ತಿಸಿ ಕುಶಾಲನಗರದ ಆನೆಕಾಡು ಡಿಪೋಗೆ ಸ್ಥಳಾಂ ತರಿಸಲಾಗುತ್ತಿದ್ದು, ಈಗಾಗಲೇ ದುರಸ್ಥಿಪಡಿಸಿರುವ ರಸ್ತೆಗಳು ಮತ್ತೊಮ್ಮೆ ಕುಸಿದರೆ ಸಂಚಾರ ವ್ಯವಸ್ಥೆ ಏರುಪೇರಾಗುತ್ತದೆ ಎಂದು ಗ್ರಾಮಸ್ಥರು ಆತಂಕ ಹೊರಗೆಡವುತ್ತಿದ್ದಾರೆ. ಮಾತ್ರ ವಲ್ಲದೆ ಜಮೀನಿನಲ್ಲಿ ಬಿದ್ದಿರುವ ಮರಗಳ ಮಾಲೀಕತ್ವ ಕೂಡ ಮುನ್ನಲೆಗೆ ಬಂದಿದ್ದು, ತಮ್ಮ ಜಮೀನಿನಲ್ಲಿ ಉರುಳಿ ಬಿದ್ದಿರುವ ಮರಗಳ ಮಾಲೀಕತ್ವವನ್ನು ಜಮೀನು ಮಾಲೀಕರಿಗೆ ಬಿಡಬೇಕೆಂಬ ವಾದವೂ ಕೇಳಿ ಬಂದಿದೆ.
ಆದರೆ ಬೆಟ್ಟ ಕುಸಿದು ಉರುಳಿ ಬಿದ್ದಿರುವ ಮರಗಳ ಮಾಲೀಕತ್ವವನ್ನು ಜಮೀನುಗಳ ಮಾಲೀಕರಿಗೆ ಒಪ್ಪಿಸಲು ಸಾಧ್ಯವಿಲ್ಲ. ಮರಗಳು ತಮ್ಮದೆಂದು ಹೇಳಲು ಕೂಡ ಸಾಧ್ಯವಿಲ್ಲ. ಹೀಗಾಗಿ ಪ್ರವಾಹ ಭೂ ಕುಸಿತದಿಂದ ಬಿದ್ದಿರುವ ಮರಗಳನ್ನು ಅರಣ್ಯ ಇಲಾಖೆಯೇ ವಶಕ್ಕೆ ಪಡೆಯಬೇಕೆಂಬುದು ಅರಣ್ಯ ಇಲಾಖೆ ನಿಯಮ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ಇದು ಅರಣ್ಯ ಇಲಾಖೆ ಮತ್ತು ಜಮೀನುಗಳ ಮಾಲೀಕರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.

ಈ ಹಿಂದೆ ಜೋಡುಪಾಲದಲ್ಲಿ ಜಮೀನಿನಲ್ಲಿ ಬಿದ್ದಿದ್ದ ಮರವನ್ನು ಅರಣ್ಯ ಇಲಾಖೆ ತೆರವು ಮಾಡುವ ಸಂದರ್ಭ ಜಮೀನುಗಳ ಮಾಲೀಕರು ಮತ್ತು ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ಟಿಂಬರ್ ವರ್ತಕರಿಗೆ ಮರಗಳನ್ನು ಮಾರುತ್ತಿರುವ ಆರೋಪವೂ ವ್ಯಕ್ತಗೊಂಡಿತ್ತು. ಇದನ್ನು ನಿರಾಕರಿಸಿದ ಅರಣ್ಯ ಅಧಿಕಾರಿ ಗಳು ಟಿಂಬರ್ ವರ್ತಕರಿಗೆ ಮರಗಳನ್ನು ತುಂಡರಿಸಿ ಆನೆಕಾಡು ಡಿಪೋಗೆ ಸಾಗಿಸಿ ಸಂಗ್ರಹಿಸಲು ಮಾತ್ರವೇ ಪರವಾನಗಿ ಮತ್ತು ರಹದಾರಿ ನೀಡಲಾಗುತ್ತಿದೆ.

ಹೀಗೆ ಸಂಗ್ರಹವಾಗುವ ಮರಗಳನ್ನು ಪ್ರತ್ಯೇಕವಾಗಿರಿಸಿ ಅದರ ಮೌಲ್ಯ ಮತ್ತು ದಾಸ್ತಾನಾದ ಮರದ ಪ್ರಮಾಣವನ್ನು ಜಿಲ್ಲಾಡಳಿತ ಮತ್ತು ರಾಜ್ಯ ಅರಣ್ಯ ಇಲಾಖೆಗೂ ವರದಿ ನೀಡಲಾಗುತ್ತದೆ ಎಂದು ಅರಣ್ಯ ಇಲಾಖೆ ಮೂಲ ಗಳು ಮಾಹಿತಿ ನೀಡಿದೆ. ಈಗಾಗಲೇ ರಸ್ತೆ ಬದಿಯಲ್ಲಿ ಬಿದ್ದಿರುವ ಮರಗಳನ್ನು ತೆರವು ಮಾಡಲಾಗಿದ್ದು, ನದಿಗಳು ಭತ್ತದ ಗದ್ದೆಯಲ್ಲಿ ಬಿದ್ದಿರುವ ಮರಗಳನ್ನು ಹಂತ-ಹಂತವಾಗಿ ತೆಗೆಯ ಲಾಗುತ್ತದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಮರ ಸಾಗಾಟದ ಸಂದರ್ಭ ಅಗತ್ಯ ಪೊಲೀಸ್ ಭದ್ರತೆ ಒದಗಿಸು ವಂತೆ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ.

Translate »