ಸರಗಳ್ಳನ ಬಂಧನ
ಹಾಸನ

ಸರಗಳ್ಳನ ಬಂಧನ

September 23, 2018

ಬೇಲೂರು: ಸರಗಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪಟ್ಟಣ ಪೋಲಿಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ಕುಂಬಾರಬೀದಿ ನಿವಾಸಿ ಸುನೀಲ್(20) ಬಂಧಿತ. ಪಟ್ಟಣದ ವ್ಯಾಪ್ತಿಯಲ್ಲಿ ಹೊಂಚು ಹಾಕಿ ಮಹಿಳೆಯರ ಸರ ಕಸಿದು ಪರಾರಿಯಾಗುತ್ತಿದ್ದ ಈತನನ್ನು ಸಿಪಿಐ ಲೋಕೇಶ್, ಎಸ್‍ಐ ಜಗದೀಶ್ ಮತ್ತು ಸಿಬ್ಬಂದಿ ಜಮೃದ್ ಖಾನ್, ನಂದೀಶ್, ತಾಂಡವೇಶ್ವರನ್ನೊಳಗೊಂಡ ತಂಡ ಖದೀಮನನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದೆ. ಖದೀಮನಿಂದ ಅಂದಾಜು 1.80 ಲಕ್ಷ ರೂ. ಮೌಲ್ಯದ 48 ಗ್ರಾಂ. ಚಿನ್ನಾಭರಣ, ಹೀರೋ ಹೋಂಡಾ ಬೈಕ್ ವಶಪಡಿಸಿಕೊಳ್ಳಲಾಗಿದೆ.

Translate »