Tag: Hassan

ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಹಾಸನ

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

July 9, 2019

ಹಾಸನ: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ (ಎಐಯು ಟಿಯುಸಿ) ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಸೋಮವಾರ ಬೆಳಿಗ್ಗೆ ನಗರದ ಕಲಾಭವನದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಆಶಾ ಕಾರ್ಯಕರ್ತೆಯರು ಎನ್.ಆರ್.ವೃತ್ತ ಮೂಲಕ ಡಿಸಿ ಕಚೇರಿ ಆವರಣಕ್ಕೆ ಬಂದರು. ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರೋತ್ಸಾಹಧನ ಒಟ್ಟು ಸೇರಿಸಿ ಮಾಸಿಕ 12 ಸಾವಿರ ರೂ. ಗೌರವಧನ ನಿಗದಿಪಡಿಸಬೇಕು. ಆಶಾ ಸಾಫ್ಟ್ ಇಲ್ಲವೇ ಆರ್.ಸಿ.ಹೆಚ್ ಪೋರ್ಟಲ್‍ಗೆ ಆಶಾ ಪ್ರೋತ್ಸಾಹಧನ…

ಕೃಷಿ ಕ್ಷೇತ್ರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರ್ಯಾಲಿ
Uncategorized, ಹಾಸನ

ಕೃಷಿ ಕ್ಷೇತ್ರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರ್ಯಾಲಿ

July 9, 2019

ಹಾಸನ,ಜು.8- ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿಗೆ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾ ಯಿತು. ಬಳಿಕ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಲಾಯಿತು. ಸೋಮವಾರ ಬೆಳಿಗ್ಗೆ ನಗರದ ಹೇಮಾ ವತಿ ಪ್ರತಿಮೆ ಬಳಿಯಿಂದ ಹೊರಟ ರೈತರ ಪ್ರತಿಭಟನಾ ಮೆರವಣಿಗೆ ಡಿಸಿ ಕಚೇರಿ ಆವರಣ ತಲುಪಿತು. ಅಲ್ಲಿ ಮಾತನಾಡಿದ ರೈತ ಮುಖಂಡರು, ಕೃಷಿ, ಹೈನುಗಾರಿಕೆ ಅಭಿವೃದ್ಧಿ…

ಜಲಸಂರಕ್ಷಣೆಗೆ ಆಂದೋಲನದ ರೂಪ ನೀಡಿ: ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿರ್ದೇಶನ
ಹಾಸನ

ಜಲಸಂರಕ್ಷಣೆಗೆ ಆಂದೋಲನದ ರೂಪ ನೀಡಿ: ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿರ್ದೇಶನ

July 9, 2019

ಹಾಸನ,ಜು.8- ಜಿಲ್ಲೆಯಾದ್ಯಂತ, ಮುಖ್ಯವಾಗಿ ಅಂತ ರ್ಜಲ ಮಟ್ಟ ಕುಸಿದಿರುವ ತಾಲೂಕುಗಳಲ್ಲಿ ಮುಂದಿನ 3 ತಿಂಗಳಲ್ಲಿ ಜಲಸಂರಕ್ಷಣೆ ಜನ ಜಾಗೃತಿ ಚಟುವಟಿಕೆ ಗಳನ್ನು ಆಂದೋಲನ ರೂಪದಲ್ಲಿ ಹಮ್ಮಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶೈಕ್ಷಣಿಕ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುಶೀಲ್ ಕುಮಾರ್ ಸೂಚನೆ ನೀಡಿದರು. ಡಿಸಿ ಕಚೇರಿ ಸಭಾಂಗಣದಲ್ಲಿ ಅರಸೀಕರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಜಲಶಕ್ತಿ ಅಭಿ ಯಾನ ಅನುಷ್ಠಾನ ಕುರಿತು ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಅವರು, ಜಲ ಸಂವರ್ಧನೆ…

ಮಹಾ ರಥೋತ್ಸವ: ಖಜಾನೆಯಿಂದ ದೇಗುಲಕ್ಕೆ ಆಭರಣ
ಹಾಸನ

ಮಹಾ ರಥೋತ್ಸವ: ಖಜಾನೆಯಿಂದ ದೇಗುಲಕ್ಕೆ ಆಭರಣ

July 9, 2019

ಅಲಂಕೃತ ಎತ್ತಿನ ಗಾಡಿಯಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅರಸೀಕೆರೆ, ಜು.8- ನಗರದ ಖಜಾನೆಯಲ್ಲಿದ್ದ ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವರ ಆಭರಣಗಳನ್ನು ಮಹಾರಥೋತ್ಸವ ಪ್ರಯುಕ್ತ ಸೋಮವಾರ ಹೊರತೆಗೆದಿದ್ದು, ಅಲಂಕೃತ ಎತ್ತಿನ ಗಾಡಿಯಲ್ಲಿ ಸಾಂಪ್ರದಾಯಿಕವಾಗಿ ಶ್ರೀಕ್ಷೇತ್ರಕ್ಕೆ ಕೊಂಡೊಯ್ಯಲಾಯಿತು. ಪ್ರತಿ ವರ್ಷದ ಆಷಾಢ ಮಾಸದಲ್ಲಿ ನಡೆಯುವ ಜಾತ್ರಾ ಮಹೋತ್ಸವ ವೇಳೆ ದೇವರಿಗೆ ಅಮೂಲ್ಯ ಆಭರಣಗಳಿಂದ ಅಲಂಕರಿಸಲಾಗುತ್ತದೆ. ತಹಸಿಲ್ದಾರ್ ಸಂತೋಷ್ ಕುಮಾರ್ ಅವರು ದೇವರ ಆಭರಣಗಳನ್ನು ಜಾತ್ರಾ ಸಮಿತಿ ಪದಾಧಿಕಾರಿ ಗಳಿಗೆ ಸೋಮವಾರ ಹಸ್ತಾಂತರಿಸುವ ಮೂಲಕ ವಿಜೃಂಭಣೆಯ ಜಾತ್ರಾ…

ಮುಂದೆ ಬೇಲೂರು ಪುರಸಭೆ ಅಧಿಕಾರ ಬಿಜೆಪಿಗೆ: ರೇಣುಕುಮಾರ್
ಹಾಸನ

ಮುಂದೆ ಬೇಲೂರು ಪುರಸಭೆ ಅಧಿಕಾರ ಬಿಜೆಪಿಗೆ: ರೇಣುಕುಮಾರ್

July 9, 2019

ಬೇಲೂರು, ಜು.8- ಮುಂದಿನ ಬಾರಿ ಪುರ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿ ಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರೇಣುಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು. ಪಟ್ಟಣದ ಜಯಮೌರ್ಯ ಕಲ್ಯಾಣ ಮಂದಿರದಲ್ಲಿ ತಾಲೂಕು ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಪುರಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಂಟಿಯಾಗಿಯೇ ಭ್ರಷ್ಟಾಚಾರ ನಡೆಸಿವೆ. ಬೇಲೂರು ಪುರಸಭೆ ಭ್ರಷ್ಟಾಚಾರದ ಕೂಪ ವಾಗಿದೆ ಎಂದು ಆರೋಪಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಕೊರಟಿಕೆರೆ ಪ್ರಕಾಶ್ ಮಾತನಾಡಿ,…

ಬಗರ್ ಹುಕುಂ ಸೌಲಭ್ಯ ರೈತರಿಗೆ ನೀಡದೇ ವಂಚನೆ: ಆಕ್ರೋಶ
ಹಾಸನ

ಬಗರ್ ಹುಕುಂ ಸೌಲಭ್ಯ ರೈತರಿಗೆ ನೀಡದೇ ವಂಚನೆ: ಆಕ್ರೋಶ

July 8, 2019

ತಾಲೂಕು ಆಡಳಿತ ವಿರುದ್ಧ ಚ.ಪಟ್ಟಣದಲ್ಲಿ ರೈತ ಸಂಘ, ಹಸಿರು ಸೇನೆ ಧರಣಿ ಚನ್ನರಾಯಪಟ್ಟಣ, ಜು.7- ಕೃಷಿಕರಿಗೆ ಅನುಕೂಲ ಆಗಲೆಂದು ರಾಜ್ಯ ಸರ್ಕಾರ ಬಗರ್ ಹುಕುಂ ಯೋಜನೆ ಜಾರಿಗೆ ತಂದಿ ದ್ದರೆ, ಕಂದಾಯ ಇಲಾಖೆ ಅಧಿಕಾರಿಗಳು ಹಣದ ಆಸೆಯಿಂದ ಭೂಮಾಫಿಯಾದ ವರಿಗೆ ಖಾತೆ ಮಾಡಿಕೊಡುತ್ತಿದ್ದಾರೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಆಕ್ರೋಶ ವ್ಯಕ್ತಪಡಿಸಿವೆ. ಪಟ್ಟಣದಲ್ಲಿ ನಡೆದ ತಾಲೂಕು ಆಡಳಿ ತದ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘ ಮತ್ತು ಹಸಿರು ಸೇವೆ ಜಿಲ್ಲಾಧ್ಯಕ್ಷ ಕೊಟ್ಟೂರು…

ವಿದ್ಯಾರ್ಥಿಗಳು ಸಂಶೋಧನೆಯಲ್ಲೂ ತೊಡಗಿಸಿಕೊಳ್ಳಿ
ಹಾಸನ

ವಿದ್ಯಾರ್ಥಿಗಳು ಸಂಶೋಧನೆಯಲ್ಲೂ ತೊಡಗಿಸಿಕೊಳ್ಳಿ

July 8, 2019

ವಿಜ್ಞಾನ ಕಾಲೇಜು ಕಾರ್ಯಕ್ರಮದಲ್ಲಿ ಶ್ರೀ ಶಂಭುನಾಥ ಸ್ವಾಮೀಜಿ ಹಿತವಚನ ಬೇಲೂರು, ಜು.7- ಇಂದಿನ ದಿನಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಓದುವು ದಕ್ಕಷ್ಟೇ ಸೀಮಿತವಾಗಿದ್ದಾರೆ. ಹೊಸ ಸಂಶೋಧನೆಗಳಿಗೆ ಮುಂದಾಗುತ್ತಿಲ್ಲ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಮಹಾ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಆದಿಚುಂಚನಗಿರಿ ಬೇಲೂರು ಸಂಸ್ಥೆಯ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆದ ಮೊದಲ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಕಳೆದ ವರ್ಷ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ…

ರಾಮನಾಥಪುರ ಡಿಪೊದಲ್ಲಿ ಹಳೆ ಬಸ್ ಸಮಸ್ಯೆ
ಹಾಸನ

ರಾಮನಾಥಪುರ ಡಿಪೊದಲ್ಲಿ ಹಳೆ ಬಸ್ ಸಮಸ್ಯೆ

July 8, 2019

ಹೊಸ ಬಸ್, ಮಿನಿ ಡಿಲಕ್ಸ್‍ಗೆ ಬೇಡಿಕೆ; ವೇಗದೂತ ಕಡಿಮೆ ನಿಲುಗಡೆಗೆ ಪ್ರಯಾಣಿಕರ ಒತ್ತಾಯ ರಾಮನಾಥÀಪುರ,ಜು.7- ರಾಮನಾಥ ಪುರ ಬಸ್ ಡಿಪೊದಲ್ಲಿ ಹಳೆಯ ಬಸ್ ಗಳೇ ಇದ್ದು, ಈ ಭಾಗದ ಪ್ರಯಾಣಿಕ ರಿಗೆ ಬಸ್ ಪ್ರಯಾಣ ಬಹಳ ಕಷ್ಟಕರ ವಾಗಿದೆ. ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹೊಸ ಬಸ್‍ಗಳನ್ನು ಒದಗಿಸಬೇಕು ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಸಂಚಾಲಕ ಬೆಟ್ಟಸೋಗೆ ಬಿ.ಪಿ.ವೀರೇಶ್ ಒತ್ತಾಯಿಸಿದ್ದಾರೆ. ಪಟ್ಟಣದಲ್ಲಿನ ಕೆಎಸ್‍ಆರ್‍ಟಿಸಿ ಡಿಪೋಗೆ ಭೇಟಿ ನೀಡಿದ ಅವರು, ಸದ್ಯ ವೇಗ ದೂತ ಬಸ್‍ಗಳು ರಾಮನಾಥಪುರ-ಹಾಸನ ಮಧ್ಯದ ಎಲ್ಲಾ…

ಕಾದು ನೋಡುತ್ತೇವೆ ಎಂದ ಬಿಎಸ್‍ವೈ
ಹಾಸನ

ಕಾದು ನೋಡುತ್ತೇವೆ ಎಂದ ಬಿಎಸ್‍ವೈ

July 8, 2019

ಹಾಸನ, ಜು.7- ಮೈತ್ರಿ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜೀನಾಮೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿ ರುವ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು, ಪಕ್ಷ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ. ಕಾದು ನೋಡುತ್ತೇನೆ. ಹೈಕಮಾಂಡ್ ಸೂಚನೆ ಯಂತೆ ನಡೆಯುತ್ತೇವೆ ಎಂದಿದ್ದಾರೆ. ಚನ್ನರಾಯಪಟ್ಟಣ ತಾಲೂಕು ಬಾಗೂರಿನಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ಸಾಧ್ಯತೆ ಇಲ್ಲವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಡಿಕೆಶಿ ಉಚ್ಚಾಟನೆ ಆಗ್ರಹ: ಸ್ಪೀಕರ್…

ಅಪಘಾತ ವಲಯ ತನಿಖೆಗೆ ಸಮಿತಿ ರಚನೆ: ಜಿಲ್ಲಾಧಿಕಾರಿ
ಹಾಸನ

ಅಪಘಾತ ವಲಯ ತನಿಖೆಗೆ ಸಮಿತಿ ರಚನೆ: ಜಿಲ್ಲಾಧಿಕಾರಿ

July 8, 2019

ಹಾಸನ, ಜು.7- ರಾಜ್ಯದಲ್ಲಿ 2018ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳನ್ನು ಗಮನಿಸಿ ಸರ್ವೋಚ್ಛ ನ್ಯಾಯಾಲಯವು ರಸ್ತೆ ಸುರಕ್ಷತಾ ಸಮಿತಿಯನ್ನು ರಚಿಸಿದ್ದು, ಆ ಸಮಿತಿ ನೀಡಿರುವ ಶಿಫಾರಸುಗಳ ಮೇರೆಗೆ ಸರ್ಕಾರಿ ಸುತ್ತೋಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯುವ ಸಂಬಂಧ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮೋಟಾರು ವಾಹನಗಳ ಕಾಯ್ದೆ 1988ರ ಪರಿಚ್ಛೇದ 135ರಂತೆ ಗಂಭೀರ ಗಾಯಗಳು ಅಥವಾ ಮರಣ ಸಂಭವಿಸಿದರೆ ಆ ರಸ್ತೆ ಅಪಘಾತದ ಸ್ಥಳವನ್ನು ಲೋಕೋಪಯೋಗಿ, ಪೊಲೀಸ್ ಮತ್ತು ಸಾರಿಗೆ ಇಲಾಖೆ ಪ್ರತಿನಿಧಿಗಳನ್ನೊಳಗೊಂಡ ತಂಡವು ವೈಜ್ಞಾನಿಕವಾಗಿ ಪರಿಶೀಲಿಸಿ ತನಿಖೆ ನಡೆಸಬೇಕು ಎಂದು ಜಿಲ್ಲಾಧಿಕಾರಿ…

1 7 8 9 10 11 103
Translate »