ಕೃಷಿ ಕ್ಷೇತ್ರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರ್ಯಾಲಿ
Uncategorized, ಹಾಸನ

ಕೃಷಿ ಕ್ಷೇತ್ರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ರ್ಯಾಲಿ

July 9, 2019

ಹಾಸನ,ಜು.8- ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ಧಿಗೆ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕ ವತಿಯಿಂದ ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾ ಯಿತು. ಬಳಿಕ ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಸೋಮವಾರ ಬೆಳಿಗ್ಗೆ ನಗರದ ಹೇಮಾ ವತಿ ಪ್ರತಿಮೆ ಬಳಿಯಿಂದ ಹೊರಟ ರೈತರ ಪ್ರತಿಭಟನಾ ಮೆರವಣಿಗೆ ಡಿಸಿ ಕಚೇರಿ ಆವರಣ ತಲುಪಿತು. ಅಲ್ಲಿ ಮಾತನಾಡಿದ ರೈತ ಮುಖಂಡರು, ಕೃಷಿ, ಹೈನುಗಾರಿಕೆ ಅಭಿವೃದ್ಧಿ ಸಾಲ, ಚಿನ್ನದ ಅಡವು ಸಾಲ, ಟ್ರ್ಯಾಕ್ಟರ್, ಟ್ರಿಲ್ಲರ್, ಹೊಸಮನೆ ಸಾಲ ಸೇರಿದಂತೆ ರೈತರ ಎಲ್ಲ ಬಗೆಯ ಸಾಲ ಗಳನ್ನೂ ಮನ್ನಾ ಮಾಡಬೇಕು. ಕೃಷಿ ಚಟು ವಟಿಕೆಗೆ ಮತ್ತೆ ಹೊಸ ಸಾಲ ನೀಡಬೇಕು ಎಂದು ಆಗ್ರಹಿಸಿದರು. ಒಟ್ಟು 12 ಬೇಡಿಕೆ ಗಳನ್ನು ಒಳಗೊಂಡ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದರು.

ಜಿಲ್ಲೆಯು ಭೌಗೋಳಿಕವಾಗಿ 3 ಬಗೆಯ ದಾಗಿದೆ. ಬಯಲು ಸೀಮೆ, ಅರೆ ಮಲೆ ನಾಡು ಹಾಗೂ ಮಲೆನಾಡು ಪ್ರದೇಶ ಒಳಗೊಂಡಿದೆ. ಬಹುತೇಕ ತಾಲೂಕು ಗಳಲ್ಲಿ ಆಲೂಗಡ್ಡೆ, ಜೋಳ, ಭತ್ತದ ಬೇಸಾಯ ಪ್ರಮುಖ ಜೀವನಾಧಾರ ಬೆಳೆಯಾಗಿದೆ. ಸಕಲೇಶಪುರ ಹಾಗೂ ಬೇಲೂರು ತಾಲೂಕು ಗಳಲ್ಲಿ ಕಾಫಿ, ಕಾಳುಮೆಣಸು ಪ್ರಮುಖ ಬೆಳೆಯಾಗಿವೆ. ಹೈನುಗಾರಿಕೆ ವ್ಯಾಪಕವಾ ಗಿದೆ. ಆದರೆ, ಕಳೆದ 3 ವರ್ಷಗಳಿಂದ ಬರ ಆವರಿಸಿದೆ. ಈ ಸಾಲಿನಲ್ಲಿಯೂ ಮುಂಗಾರು ಬಹಳ ತಡವಾಗಿದೆ. ಜಿಲ್ಲೆಗೆ ಯಾವುದೇ ನೀರಾವರಿ ಯೋಜನೆಗಳ ಅನುಷ್ಠಾನ ಆಗಿಲ್ಲ. ಏತ ನೀರಾವರಿ ಯೋಜನೆ 20 ವರ್ಷ ಗಳಿಂದ ನೆನೆಗುದಿಗೆ ಬಿದ್ದಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷ ಜಿ.ಟಿ.ರಾಮಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಶಂಕರಪ್ಪ, ಜಿಲ್ಲಾಧ್ಯಕ್ಷ ಹೆಚ್.ಕೆ.ರಘು, ಜಿಲ್ಲಾ ಕಾರ್ಯಾಧಕ್ಷ ಎಂ.ಎಲ್.ಹರೀಶ್, ಗೌರವಾಧ್ಯಕ್ಷ ಮಹಮದ್ ಇಮ್ರಾನ್ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

Translate »