ಜಲಸಂರಕ್ಷಣೆಗೆ ಆಂದೋಲನದ ರೂಪ ನೀಡಿ: ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿರ್ದೇಶನ
ಹಾಸನ

ಜಲಸಂರಕ್ಷಣೆಗೆ ಆಂದೋಲನದ ರೂಪ ನೀಡಿ: ಜಿಲ್ಲಾಡಳಿತಕ್ಕೆ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿರ್ದೇಶನ

July 9, 2019

ಹಾಸನ,ಜು.8- ಜಿಲ್ಲೆಯಾದ್ಯಂತ, ಮುಖ್ಯವಾಗಿ ಅಂತ ರ್ಜಲ ಮಟ್ಟ ಕುಸಿದಿರುವ ತಾಲೂಕುಗಳಲ್ಲಿ ಮುಂದಿನ 3 ತಿಂಗಳಲ್ಲಿ ಜಲಸಂರಕ್ಷಣೆ ಜನ ಜಾಗೃತಿ ಚಟುವಟಿಕೆ ಗಳನ್ನು ಆಂದೋಲನ ರೂಪದಲ್ಲಿ ಹಮ್ಮಿಕೊಳ್ಳಿ ಎಂದು ಕೇಂದ್ರ ಸರ್ಕಾರದ ಕೃಷಿ ಸಂಶೋಧನೆ ಮತ್ತು ಶೈಕ್ಷಣಿಕ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಸುಶೀಲ್ ಕುಮಾರ್ ಸೂಚನೆ ನೀಡಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಅರಸೀಕರೆ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಜಲಶಕ್ತಿ ಅಭಿ ಯಾನ ಅನುಷ್ಠಾನ ಕುರಿತು ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆ ನಡೆಸಿದ ಅವರು, ಜಲ ಸಂವರ್ಧನೆ ಮತ್ತು ಜಲ ಸಾಕ್ಷರತೆಗೆ ಆದ್ಯತೆ ನೀಡಬೇಕು ಎಂದರು.

ಮೊದಲ ಹಂತದಲ್ಲಿ ಜಲಶಕ್ತಿ ಯೋಜನೆಯನ್ನು ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕಿನಲ್ಲಿ ಆರಂಭಿಸ ಲಾಗಿದೆ. ಸರ್ಕಾರ, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರ, ಸಹಯೋಗದೊಂದಿಗೆ ಎಲ್ಲಾ ಗ್ರಾಮಗಳಲ್ಲಿ ಜಲ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ತಾಲೂಕುಗಳಲ್ಲಿನ ಎಲ್ಲಾ ಕಲ್ಯಾಣಿಗಳನ್ನು ಆಂದೋಲನ ರೂಪದಲ್ಲಿ ಸ್ವಚ್ಛಗೊಳಿಸಬೇಕು. ಒಂದೆರಡು ಹೊಸ ಕಲ್ಯಾಣಿಗಳನ್ನೂ ನಿರ್ಮಿಸಬೇಕು ಎಂದÀರು.

ಬರಪೀಡಿತ ತಾಲೂಕುಗಳಲ್ಲಿ ಕೊಳವೆ ಬಾವಿ ಕೊರೆ ಯುವುದನ್ನು ನಿಯಂತ್ರಿಸಬೇಕು. ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು. ನಿಯಮ ಉಲ್ಲಂಘಿಸಿ ದವರಿಗೆ ಶಿಕ್ಷೆ ವಿಧಿಸಬೇಕು. ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಗೆ ಯೋಜನೆ ರೂಪಿಸಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಬಹು ಕಮಾನು ಅಣೆಕಟ್ಟುಗಳನ್ನು ನಿರ್ಮಿಸಿ ಹರಿಯುವ ನೀರನ್ನು ತಡೆದು, ಇಂಗಿಸಬೇಕು. ಕೊಳವೆ ಬಾವಿಗಳ ಮರುಪೂರಣ ಮಾಡಬೇಕು. ಉದ್ಯೋಗ ಖಾತರಿ ಯೋಜನೆಯಡಿ ಅಗತ್ಯವಿದ್ದರೆ ಹೆಚ್ಚಿನ ಅನುದಾನ ನೀಡಲಾಗುವುದು. ನಿಯಮಗಳಲ್ಲಿ ಕೆಲವು ವಿನಾಯಿತಿ ನೀಡಲಾಗುವುದು ಎಂದು ಸುಶೀಲ್ ಕುಮಾರ್ ಹೇಳಿದರು.

ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಕೆ ಕಡ್ಡಾಯಗೊಳಿಸಬೇಕು. ಸರ್ಕಾರಿ ಕಚೇರಿಗಳಲ್ಲಿಯೂ ಜಾರಿಗೆ ತರಬೇಕು ಎಂದರು.

ಕೇಂದ್ರದ ಕಂಪನಿ ವ್ಯವಹಾರಗಳ ಇಲಾಖೆ ಉಪ ಕಾರ್ಯದರ್ಶಿ ವಿವೇಕ್ ಕುಮಾರ್ ಮಾತನಾಡಿ, ಜಿಲ್ಲೆ ಯಲ್ಲಿ ಕೆರೆಗಳ ಸಂರಕ್ಷಣೆಗೆ ವಿಶೇಷ ಗಮನ ಹರಿಸಬೇಕು. ಹೂಳು ತೆಗೆಯುವುದು, ಒತ್ತುವರಿ ತೆರವು ಕಾರ್ಯಗಳನ್ನು ಆದ್ಯತೆ ಮೇರೆಗೆ ಮಾಡಬೇಕು. ಮಳೆ ನೀರು ಹರಿದು ಹೋಗುವುದನ್ನು ತಡೆದು ಸಂಗ್ರಹಿಸಲು ವ್ಯವಸ್ಥಿತ ಯೋಜನೆ ಯಾಗಬೇಕು. ಮನೆಗಳಲ್ಲಿ ಅಡುಗೆ ಕೋಣೆ ಹಾಗೂ ಸ್ನಾನದ ಮನೆಯಲ್ಲಿ ಬಳಸುವ ನೀರು ವ್ಯರ್ಥ ಹರಿದು ಹೋಗುತ್ತಿದೆ. ಈ ನೀರನ್ನು ಕಡಿಮೆ ವೆಚ್ಚದಲ್ಲಿ ಶುದ್ಧೀಕರಿಸಿ ಕೈತೋಟ, ಅಂಗಳ ಶುಚಿಗೊಳಿಸುವುದು, ಹಳ್ಳಿಗಳಲ್ಲಾದರೆ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಬಳಸಬಹುದಾಗಿದೆ ಎಂದು ತಿಳಿಸಿಕೊಟ್ಟರು.

ಕೇಂದ್ರ ಜಲಶಕ್ತಿ ಸಚಿವಾಲಯದ ವಿಜ್ಞಾನಿ ರಾಜೇಂದ್ರ ಅವರು, ಜಲ ಸಂರಕ್ಷಣೆ ಮಾದರಿಗಳು, ಅಂತರ್ಜಲ ವೃದ್ಧಿಗೆ ಮಾಡಬಹುದಾದ ಪರಿಣಾಮಕಾರಿ ಯೋಜನೆಗಳ ಬಗ್ಗೆ ವಿವರಿಸಿದರು.

ಜಿಲ್ಲೆಯಲ್ಲಿ ಜಲ ಸಂರಕ್ಷಣೆ, ಜಲ ಸಾಕ್ಷರತೆ, ಜಲ ಮರುಪೂರಣ ಯೋಜನೆಯಡಿ ಕೈಗೊಂಡಿರುವ ಕ್ರಮ ಗಳು, ಸಂಘ ಸಂಸ್ಥೆಗಳು- ಸಾರ್ವಜನಿಕರ ಪ್ರತಿಸ್ಪಂದನೆ ಬಗ್ಗೆ ಜಿಲ್ಲ್ಲಾಧಿಕಾರಿ ಅಕ್ರಂ ಪಾಷ ವಿವರಿಸಿದರು. ಇತ್ತೀಚೆಗೆ ಜಲಸಂರಕ್ಷಣೆ ಕಾರ್ಯವನ್ನು ಸಮುದಾಯದ ಪಾಲ್ಗೊಳ್ಳುವಿಕೆ ಮೇಲೆ ಅಭಿವೃದ್ಧಿಪಡಿಸಲಾಗುತ್ತಿದೆ. ಮುಂದಿನ 3 ತಿಂಗಳಲ್ಲಿ ಆಂದೋಲನದ ಯಶಸ್ಸಿಗೆ ಜಿಲ್ಲಾಡಳಿತ ಎಲ್ಲಾ ನೆರವು ನೀಡಲಿದೆ ಎಂದರು.

ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಕೈಗೊಂಡ ಜಲ ಸಂರಕ್ಷಣಾ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ, ವೈಜ್ಞಾನಿಕ ರೀತಿ ವೇದಾವತಿ ನದಿ ಪುನಶ್ಚೇತನದ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಆನಂದ್ ವಿವರಿಸಿದರು.

ಜಿಲ್ಲೆಯಲ್ಲಿ ಈವರೆಗೆ ಕೈಗೊಂಡಿರುವ ಕೆರೆಗಳ ಅಭಿವೃದ್ಧಿ, ಜಲ ಸಂರಕ್ಷಣೆ ಪ್ರಯತ್ನಗಳಿಗೆ ಕೇಂದ್ರದ ಇಬ್ಬರೂ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಪಂ ಪ್ರಭಾರಿ ಸಿಇಒ ಎಂ.ಎಲ್.ವೈಶಾಲಿ, ಯೋಜನಾ ನಿರ್ದೇಶಕ ಅರುಣ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಎಸಿ ಹೆಚ್.ಎಲ್. ನಾಗರಾಜ್, ಕೃಷಿ ಕಾಲೇಜು ಡೀನ್ ದೇವಕುಮಾರ್, ಜಂಟಿ ಕೃಷಿ ನಿರ್ದೇಶಕ ಮದುಸೂಧನ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಹಿರಿಯ ಭೂ ವಿಜ್ಞಾನಿ ಸುಧಾ ಸಭೆಯಲ್ಲಿ ಮಾಹಿತಿ ನೀಡಿದರು. ವಿವಿಧ ಇಲಾಖಾ ಅಧಿಕಾರಿಗಳು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.

Translate »