ಮುಂದೆ ಬೇಲೂರು ಪುರಸಭೆ ಅಧಿಕಾರ ಬಿಜೆಪಿಗೆ: ರೇಣುಕುಮಾರ್
ಹಾಸನ

ಮುಂದೆ ಬೇಲೂರು ಪುರಸಭೆ ಅಧಿಕಾರ ಬಿಜೆಪಿಗೆ: ರೇಣುಕುಮಾರ್

July 9, 2019

ಬೇಲೂರು, ಜು.8- ಮುಂದಿನ ಬಾರಿ ಪುರ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಧಿ ಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ರೇಣುಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಜಯಮೌರ್ಯ ಕಲ್ಯಾಣ ಮಂದಿರದಲ್ಲಿ ತಾಲೂಕು ಬಿಜೆಪಿ ಮಂಡಲ ಹಮ್ಮಿಕೊಂಡಿದ್ದ ಸಂಘಟನಾ ಪರ್ವ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಪುರಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಜಂಟಿಯಾಗಿಯೇ ಭ್ರಷ್ಟಾಚಾರ ನಡೆಸಿವೆ. ಬೇಲೂರು ಪುರಸಭೆ ಭ್ರಷ್ಟಾಚಾರದ ಕೂಪ ವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಕೊರಟಿಕೆರೆ ಪ್ರಕಾಶ್ ಮಾತನಾಡಿ, ಸದಸ್ಯತ್ವ ಅಭಿ ಯಾನದಲ್ಲಿ ಬೇಲೂರು ಮಂಡಲ ಹೆಚ್ಚು ಕಾರ್ಯಶೀಲವಾಗÀುವ ಮೂಲಕ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕೇಸರಿ ಬಾವುಟ ಹಾರಿಸಲಿದೆ ಎಂದರು.

ರಾಜ್ಯದ ಜನತೆ 2018ರ ಚುನಾವಣೆ ಯಲ್ಲಿ ಬಿಜೆಪಿಗೆ ಜನಾದೇಶ ನೀಡಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು, ಜನಾದೇಶವನ್ನು ತುಳಿದಿದ್ದವು. ಅದಕ್ಕೆ ಜನತೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಿದರು. ಸದ್ಯ ಜೆಡಿಎಸ್, ಕಾಂಗ್ರೆಸ್ ಶಾಸಕರ ಸರಣಿ ರಾಜೀನಾಮೆ ನಿಜಕ್ಕೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಮುನ್ನುಡಿ ಬರೆದಿದೆ. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹುಲ್ಲಹಳ್ಳಿ ಸುರೇಶ್, ಎ.ಎಸ್.ಬಸರಾಜು, ತಾಪಂ ಸದಸ್ಯ ಶಶಿಕುಮಾರ್, ಸಂಘಟನಾ ಸಂಚಾಲಕ ಗಂಗೂರು ಶಿವಕುಮಾರ್, ಸಹ ಸಂಚಾಲಕ ಚೇತನ್, ಪರ್ವತಯ್ಯ, ದರ್ಶನ್, ರಾಜು ಕೇಳಹಳ್ಳಿ, ವಿರೂಪಾಕ್ಷ ಮತ್ತಿತರರಿದ್ದರು.

Translate »