Tag: Hassan

ಪತ್ನಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು
ಹಾಸನ

ಪತ್ನಿ ವಿರುದ್ಧ ಡೆತ್ ನೋಟ್ ಬರೆದಿಟ್ಟು ವಿಷ ಸೇವಿಸಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

July 3, 2018

ಹಾಸನ: ತನ್ನ ಸಾವಿಗೆ ಪತ್ನಿಯೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ವಿಷ ಸೇವಿಸಿದ್ದ ವ್ಯಕ್ತಿವೋರ್ವ ಚಿಕಿತ್ಸೆ ಫಲಿಸದೆ ಅಸುನೀಗಿರುವ ಘಟನೆ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ತಾಲೂಕಿನ ಮರ್ಕುಲಿ ಗ್ರಾಮದ ನಿವಾಸಿ ರಾಘವೇಂದ್ರ(45) ಮೃತರು. ನನ್ನ ಸಾವಿಗೆ ನನ್ನ ಹೆಂಡತಿಯೇ ಕಾರಣವೆಂದು ಡೆತ್‍ನೋಟ್ ಬರೆದಿಟ್ಟು ವಿಷ ಸೇವಿಸಿದ್ದ. ಬಳಿಕ ಆತನನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ಹಲವು ವರ್ಷಗಳಿಂದ ಪತಿ -ಪತ್ನಿ ನಡುವೆ ಕೌಟುಂಬಿಕ ಕಲಹ ಗಳಿತ್ತು ಎನ್ನಲಾಗಿದ್ದು, ಡೆತ್‍ನೋಟ್ ಆಧರಿಸಿ ರಾಘವೇಂದ್ರನ ಪತ್ನಿ ವಿರುದ್ಧ ಶಾಂತಿ…

ಪೇದೆ ಪತಿಯ ಮೃಗೀಯ ವರ್ತನೆಗೆ  ಸಾವು-ಬದುಕಿನ ನಡುವೆ ಪತ್ನಿ ಹೋರಾಟ
ಹಾಸನ

ಪೇದೆ ಪತಿಯ ಮೃಗೀಯ ವರ್ತನೆಗೆ  ಸಾವು-ಬದುಕಿನ ನಡುವೆ ಪತ್ನಿ ಹೋರಾಟ

July 2, 2018

ಹಾಸನ: ಪೊಲೀಸ್ ಪೇದೆಯೋರ್ವ ತನ್ನ ಪತ್ನಿ ಯೊಂದಿಗೆ ಮೃಗೀಯವಾಗಿ ವರ್ತಿಸಿದ್ದು, ಮುಖ, ದೇಹದ ಇತರ ಭಾಗಗಳಿಗೆ ಖಾರದ ಪುಡಿ ಹಾಕಿ ಹಿಂಸಿಸಿ, ಚಾಕುವಿ ನಿಂದ ಹಲ್ಲೆ ನಡೆಸಿದ್ದಲ್ಲದೆ, ನಂತರ ವಿಷ ಕುಡಿಸಿ ನಾಟಕೀಯ ವಾಗಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ನಡೆದಿದೆ. ಅರಕಲಗೂಡು ತಾಲೂಕಿನ ಕೊಣನೂರು ಠಾಣೆ ಪೇದೆ ಮಸವತ್ತೂರು ಗ್ರಾಮದ ನಿವಾಸಿ ಅರುಣ್ ಕುಮಾರ್ ಈ ಕೃತ್ಯ ಎಸಗಿದ್ದು, ಪತ್ನಿ ರೂಪಾ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೇ ಹೋರಾಟ ನಡೆಸುತ್ತಿದ್ದಾರೆ. ಘಟನೆ ವಿವರ: ಅರಕಲಗೂಡು ತಾಲೂಕು ಮಸವತ್ತೂರು…

ಮಹಿಳಾ ಖೈದಿಗಳಿಗೆ ಕಾನೂನುಗಳ ಅರಿವು ಅಗತ್ಯ
ಹಾಸನ

ಮಹಿಳಾ ಖೈದಿಗಳಿಗೆ ಕಾನೂನುಗಳ ಅರಿವು ಅಗತ್ಯ

July 1, 2018

ಹಾಸನ: ಕಾರಾಗೃಹದಲ್ಲಿ ಮಹಿಳಾ ಖೈದಿಗಳಿಗಿರುವ ಮಾನಸಿಕ, ದೈಹಿಕ ಆರೋಗ್ಯದ ಸಮಸ್ಯೆಗಳ ಕುರಿತು ಪರಿಹಾರಗಳನ್ನು ಪಡೆಯಲು ಕಾನೂನು ಗಳ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ತಿಮ್ಮಣ್ಣಾಚಾರ್ ತಿಳಿಸಿದ್ದಾರೆ. ಮಹಿಳಾ ಪ್ಯಾನಲ್ ವಕೀಲರು, ಮನಃ ಶಾಸ್ತ್ರಜ್ಞರು, ಮಹಿಳಾ ವೈದ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಂಧಿ ಖಾನೆ ಇಲಾಖೆ, ವೈದ್ಯಕೀಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಕೀಲರ ಸಂಘದ ಅಧ್ಯಕ್ಷರು ಸಹಯೋಗದಲ್ಲಿ ನಗರದ ಬಿ.ಎಂ. ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹ ದಲ್ಲಿ ಮಹಿಳಾ…

ಮ್ಯುಟೇಷನ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಡಿಸಿ ಸೂಚನೆ
ಹಾಸನ

ಮ್ಯುಟೇಷನ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಡಿಸಿ ಸೂಚನೆ

June 30, 2018

ಹಾಸನ; ಬಾಕಿ ಇರುವ ವಿವಾದಗಳಿಲ್ಲದ ಎಲ್ಲಾ ಮ್ಯುಟೇಷನ್‍ಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.ತಮ್ಮ ಕಚೇರಿಯಲ್ಲಿ ಕಂದಾಯ ಅಧಿಕಾರಿ ಗಳ ಸಭೆ ನಡೆಸಿದ ಅವರು, ಅರ್ಜಿ ಹಾಗೂ ಪ್ರಕರಣಗಳ ವಿಲೇವಾರಿಯಲ್ಲಿ ಆಗುತ್ತಿ ರುವ ವಿಳಂಬ ಧೋರಣೆ ಸಹಿಸಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು ಕೆಲಸ ಚುರುಕುಗೊಳಿಸಿ: ಭೂಮಿ ಹಾಗೂ ಸಕಾಲ ಯೋಜನೆಯಡಿ ಸ್ವೀಕರಿಸುವ ಅರ್ಜಿಗಳು ಕಾಲಮಿತಿಯೊಳಗೆ ವಿಲೇವಾರಿ ಯಾಗಬೇಕು. ತಕರಾರು ಇರದ ಪ್ರಕರಣ ಗಳು ನಿಯಮಿತವಾಗಿ ಮುಕ್ತಾಯಗೊಳ್ಳ ಬೇಕು. ಈ ಬಗ್ಗೆ ಗ್ರಾಮ ಲೆಕ್ಕಿಗರು ಹಾಗೂ…

ಮಲೇರಿಯಾ, ಡೆಂಗ್ಯೂ ತಡೆಗೆ ಅರಿವು ಮೂಡಿಸಿ: ಸಿಇಓ
ಹಾಸನ

ಮಲೇರಿಯಾ, ಡೆಂಗ್ಯೂ ತಡೆಗೆ ಅರಿವು ಮೂಡಿಸಿ: ಸಿಇಓ

June 30, 2018

ಹಾಸನ: ಸೊಳ್ಳೆಗಳಿಂದ ಹರಡುವ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಪಂ ಸಿಇಓ ಜಿ.ಜಗದೀಶ್ ಆರೋಗ್ಯ ಇಲಾಖಾಧಿಕಾರಿ ಗಳಿಗೆ ಸೂಚನೆ ನೀಡಿದರು. ನಗರದ ಜಿಪಂ ಸಭಾಂಗಣದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ವಿರೋಧ ಮಾಸಾಚರಣೆಗಳ ಹಿನ್ನೆಲೆಯಲ್ಲಿ ನಡೆದ ಜಿಲ್ಲಾ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ರೋಗ ಗಳು ಸೊಳ್ಳೆಗಳಿಂದ ಹರಡುವುದರಿಂದ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ವಹಿಸಲು ಜನರಿಗೆ ತಿಳುವಳಿಕೆ ನೀಡಬೇಕು. ಜಿಲ್ಲೆಯಲ್ಲಿ 2023ರ ವೇಳೆಗೆ ಮಲೇರಿಯಾ ನಿರ್ಮೂ ಲನೆ…

ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹ
ಹಾಸನ

ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹ

June 30, 2018

ಹಾಸನ: ಸ್ಥಳೀಯರಿಗೆ ಉದ್ಯೋಗ ದಲ್ಲಿ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿ ಬಿಯರ್ ಕಂಪನಿ ಎದುರು ಜೆಡಿಎಸ್ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಲಾಯಿತು. ನಗರದ ಹೊರ ವಲಯ ಹೊಳೆನರ ಸೀಪುರ ರಸ್ತೆಯಲ್ಲಿರುವ ವುಡ್ಪೇಕರ್ ಡಿಸ್ಟಲರೀಸ್ ಮತ್ತು ಬ್ರೇವರೀನ್ ಪ್ರೈವೇಟ್ ಲಿಮಿಟೆಡ್‍ನಿಂದ ನಿರ್ಮಿಸಿರುವ ಬಿಯರ್ ಕಂಪನಿಯಲ್ಲಿ ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ, ಹೊರ ರಾಜ್ಯ ಗಳಿಂದ ಕಾರ್ಮಿಕರನ್ನು ಕರೆಯಿಸಿ ದುಡಿಸಿ ಕೊಳ್ಳಲಾಗುತ್ತಿದೆ ಎಂದು ಸ್ಥಳೀಯರು ದೂರಿದರು. ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿ, ಕೌಶಿಕ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಕಾರ್ಖಾನೆ…

ವಿಜೃಂಭಣೆಯ ಕನ್ನಂಬಾಡಿಯಮ್ಮ, ಕೆಂಚಮ್ಮ ಜಾತ್ರಾ ಮಹೋತ್ಸವ
ಹಾಸನ

ವಿಜೃಂಭಣೆಯ ಕನ್ನಂಬಾಡಿಯಮ್ಮ, ಕೆಂಚಮ್ಮ ಜಾತ್ರಾ ಮಹೋತ್ಸವ

June 29, 2018

ಹಾಸನ: ನಗರದ ಗಾಣಿಗರ ಬೀದಿಯಲ್ಲಿರುವ ಕನ್ನಂಬಾಡಿಯಮ್ಮ, ಕೆಂಚಮ್ಮ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಗುರುವಾರ ನಡೆಯಿತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಪ್ರೀತಮ್ ಜೆ.ಗೌಡ ಅವರು ದೇವರ ಅಡ್ಡ ಪಲ್ಲಕ್ಕಿಯನ್ನು ಹೊತ್ತು ಗಮನ ಸೆಳೆದರು. ಬೆಳಿಗ್ಗೆ ಶ್ರೀಜವೇನಹಳ್ಳಿ ಮಠದ ಸಂಗ ಮೇಶ್ವರ ದೇವಸ್ಥಾನದಲ್ಲಿ ಕಳಸ ಪ್ರತಿಷ್ಠಾ ಪಿಸಿ ಜಿಲ್ಲೆಯ ಪ್ರಮುಖ ಧಾರ್ಮಿಕ ಸ್ಥಳ ಗಳಾದ ರಾಮದೇವರಹಳ್ಳ, ರಾಮನಾಥ ಪುರ, ಗೊರೂರು, ಪಶ್ಚಿಮವಾಹಿನಿ ಮತ್ತು ಯಗಚಿ ನದಿಗಳಿಂದ ತರಲಾಗಿರುವ ಪವಿತ್ರ ಗಂಗಾಜಲದಿಂದ ಪುಣ್ಯಹಾನಂದಿಗೊಳಿ ಸಿದ ಬಳಿಕ ಕಳಸಕ್ಕೆ ಮಹಾ ಪೂಜೆ ಸಲ್ಲಿಸ…

ರಾಜ್ಯ ಬೀದಿನಾಟಕ ಕಲಾತಂಡ ಒಕ್ಕೂಟದಿಂದ ಪ್ರತಿಭಟನೆ
ಹಾಸನ

ರಾಜ್ಯ ಬೀದಿನಾಟಕ ಕಲಾತಂಡ ಒಕ್ಕೂಟದಿಂದ ಪ್ರತಿಭಟನೆ

June 29, 2018

ಹಾಸನ: ಜಾರ್ಖಂಡ್‍ನ ಚೋಚಾಂಗ್ ಜಿಲ್ಲೆಯಲ್ಲಿ ಬೀದಿನಾಟಕ ಕಲಾವಿದೆಯರ ಮೇಲೆ ನಡೆಸಿದ ಅತ್ಯಾ ಚಾರವನ್ನು ವಿರೋಧಿಸಿ ನಗರದಲ್ಲಿ ಗುರು ವಾರ ರಾಜ್ಯ ಬೀದಿನಾಟಕ ಕಲಾ ತಂಡಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು. ಹೇಮಾವತಿ ಪ್ರತಿಮೆ ಬಳಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಲ್ಲಿಂದ ಬಿ.ಎಂ.ರಸ್ತೆ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಸಿದರು. ಬಳಿಕ, ಆರೋಪಿ ಗಳನ್ನು ಬಂಧಿಸುವಂತೆ ಘೋಷಣೆ ಕೂಗಿದರು. ಜಾರ್ಖಂಡ್‍ನ ಚೋಚಾಂಗ್ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕುರಿತು ಬೀದಿನಾಟಕ ಪ್ರದರ್ಶಿಸುತ್ತಿದ್ದ 11 ಜನ ಕಲಾವಿದರಲ್ಲಿ 5…

ನಾಡು ಕಟ್ಟಿದವರಲ್ಲಿ ಕೆಂಪೇಗೌಡ ಪ್ರಮುಖರು: ಸಚಿವ ಹೆಚ್.ಡಿ.ರೇವಣ್ಣ
ಹಾಸನ

ನಾಡು ಕಟ್ಟಿದವರಲ್ಲಿ ಕೆಂಪೇಗೌಡ ಪ್ರಮುಖರು: ಸಚಿವ ಹೆಚ್.ಡಿ.ರೇವಣ್ಣ

June 28, 2018

ಹಾಸನ: ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆಂಪೇಗೌಡರ ಸಾಮಾಜಿಕ ಸೇವೆಯನ್ನು ಎಲ್ಲರೂ ಸ್ಮರಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿ ವರೂ ಆದ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಉದ್ಘಾಟಿಸಿ ಮಾತನಾಡಿದ ಸಚಿವರು, ದೇಶಕ್ಕಾಗಿ ಕೊಡುಗೆ ನೀಡಿದವರನ್ನು ಗುರುತಿಸುವುದು, ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು. ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣದ ಮೂಲಕ ರಾಜ್ಯದ ಸರ್ವ ತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿ ದ್ದಾರೆ….

ಎಸ್‍ಸಿ, ಎಸ್‍ಟಿ ಗುತ್ತಿಗೆದಾರರ ಪ್ರತಿಭಟನೆ
ಹಾಸನ

ಎಸ್‍ಸಿ, ಎಸ್‍ಟಿ ಗುತ್ತಿಗೆದಾರರ ಪ್ರತಿಭಟನೆ

June 28, 2018

ಹಾಸನ: ಮೀಸಲಾತಿ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯುವ ಮೂಲಕ ಇಂಜಿನಿಯರ್ ಪುಟ್ಟರಾಜು ದಲಿತ ವಿರೋಧಿ ನೀತಿ ಅನುಸರಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಎಸ್‍ಸಿ, ಎಸ್‍ಟಿ. ಗುತ್ತಿಗೆದಾರರ ಸಂಘದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಾವೇರಿ ನೀರಾವರಿ ನಿಗಮ, ಹೇಮಾವತಿ ಬಲದಂಡೆ ನಾಲಾ ವಿಭಾಗ ಹೊಳೇನರಸೀ ಪುರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪುಟ್ಟರಾಜು ಅವರು ಹೂಳು ತೆಗೆಯುವ ಕಾಮಗಾರಿಗಳನ್ನು ಮೀಸಲಾತಿಗೆ ಬರದ ಹಾಗೆ ಅಂದಾಜು ಪಟ್ಟಿ ತಯಾರಿಸಿ, ಮೀಸಲಾತಿ ನಿಯಮ ಉಲ್ಲಂಘನೆ ಮಾಡಿ ಟೆಂಡರ್…

1 92 93 94 95 96 103
Translate »