ಎಸ್‍ಸಿ, ಎಸ್‍ಟಿ ಗುತ್ತಿಗೆದಾರರ ಪ್ರತಿಭಟನೆ
ಹಾಸನ

ಎಸ್‍ಸಿ, ಎಸ್‍ಟಿ ಗುತ್ತಿಗೆದಾರರ ಪ್ರತಿಭಟನೆ

June 28, 2018

ಹಾಸನ: ಮೀಸಲಾತಿ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯುವ ಮೂಲಕ ಇಂಜಿನಿಯರ್ ಪುಟ್ಟರಾಜು ದಲಿತ ವಿರೋಧಿ ನೀತಿ ಅನುಸರಿಸಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಎಸ್‍ಸಿ, ಎಸ್‍ಟಿ. ಗುತ್ತಿಗೆದಾರರ ಸಂಘದಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕಾವೇರಿ ನೀರಾವರಿ ನಿಗಮ, ಹೇಮಾವತಿ ಬಲದಂಡೆ ನಾಲಾ ವಿಭಾಗ ಹೊಳೇನರಸೀ ಪುರ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಪುಟ್ಟರಾಜು ಅವರು ಹೂಳು ತೆಗೆಯುವ ಕಾಮಗಾರಿಗಳನ್ನು ಮೀಸಲಾತಿಗೆ ಬರದ ಹಾಗೆ ಅಂದಾಜು ಪಟ್ಟಿ ತಯಾರಿಸಿ, ಮೀಸಲಾತಿ ನಿಯಮ ಉಲ್ಲಂಘನೆ ಮಾಡಿ ಟೆಂಡರ್ ಕರೆದು ದಲಿತ ವಿರೋಧಿ ನೀತಿ ಅನುಸರಿಸಿದ್ದಾರೆ. ಸರ್ಕಾರದ ನಿಯಮದ ಪ್ರಕಾರ ಶೇ.24.01 ಮೀಸಲಾತಿ ಅಳವಡಿಸಿ ಟೆಂಡರ್ ಕರೆಯಬೇಕಾಗುತ್ತದೆ ಎಂದು ಪುಟ್ಟರಾಜು ಅವರು ಉದ್ದೇಶಪೂರ್ವಕವಾಗಿ ದಲಿತರಿಗೆ ಅನ್ಯಾಯ ಮಾಡುವ ದೃಷ್ಟಿಯಲ್ಲಿ 4 ಕೋಟಿ 65 ಲಕ್ಷ ರೂ. ಅನುದಾನವನ್ನು ಆರು ಕಾಮಗಾರಿಗಳಾಗಿ ರೂಪಿಸಿ ಟೆಂಡರ್ ಪ್ರಕಟಿಸಿದ್ದಾರೆ ಎಂದು ದೂರಿದರಲ್ಲದೆ, ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಐ.ಕೆ.ರಾಮಚಂದ್ರ, ಕೆಡಿಸಿಸಿ ರಾಜ್ಯ ಸಂಚಾಲಕ ಹಾಗೂ ಗುತ್ತಿಗೆದಾರ ಎಂ.ಸೋಮ ಶೇಖರ್, ಲಕ್ಷ್ಮಣ್, ಕುಮಾರ್, ಮೋಹನ್, ಸುನೀಲ್ ಇತರರಿದ್ದರು.

Translate »