ಮಹಿಳಾ ಖೈದಿಗಳಿಗೆ ಕಾನೂನುಗಳ ಅರಿವು ಅಗತ್ಯ
ಹಾಸನ

ಮಹಿಳಾ ಖೈದಿಗಳಿಗೆ ಕಾನೂನುಗಳ ಅರಿವು ಅಗತ್ಯ

July 1, 2018

ಹಾಸನ: ಕಾರಾಗೃಹದಲ್ಲಿ ಮಹಿಳಾ ಖೈದಿಗಳಿಗಿರುವ ಮಾನಸಿಕ, ದೈಹಿಕ ಆರೋಗ್ಯದ ಸಮಸ್ಯೆಗಳ ಕುರಿತು ಪರಿಹಾರಗಳನ್ನು ಪಡೆಯಲು ಕಾನೂನು ಗಳ ಅರಿವು ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಸ್. ತಿಮ್ಮಣ್ಣಾಚಾರ್ ತಿಳಿಸಿದ್ದಾರೆ.

ಮಹಿಳಾ ಪ್ಯಾನಲ್ ವಕೀಲರು, ಮನಃ ಶಾಸ್ತ್ರಜ್ಞರು, ಮಹಿಳಾ ವೈದ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಂಧಿ ಖಾನೆ ಇಲಾಖೆ, ವೈದ್ಯಕೀಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ವಕೀಲರ ಸಂಘದ ಅಧ್ಯಕ್ಷರು ಸಹಯೋಗದಲ್ಲಿ ನಗರದ ಬಿ.ಎಂ. ರಸ್ತೆಯಲ್ಲಿರುವ ಜಿಲ್ಲಾ ಕಾರಾಗೃಹ ದಲ್ಲಿ ಮಹಿಳಾ ಖೈದಿಗಳು ಮತ್ತು ಅವರೊಂದಿ ಗಿರುವ ಮಕ್ಕಳಿಗೆ ಕಾನೂನು ಸೇವೆಗಳನ್ನು ನೀಡಲು ಹಮ್ಮಿಕೊಂಡಿದ್ದ 10 ದಿನಗಳ ಅಭಿಯಾನದ ಸಮಾರೋಪ ಸಮಾರಂಭ ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಖೈದಿಗಳಿಗೆ ಮಾನಸಿಕ, ದೈಹಿಕ ಆರೋಗ್ಯದ ಸಮಸ್ಯೆಗಳ ಕುರಿತು ಪರಿಹಾರಗಳನ್ನು ಪಡೆಯಲು ಕಾನೂನುಗಳ ಅರಿವು ಅಗತ್ಯವಾಗಿದ್ದು, ಕಾನೂನು ಸೇವೆಗಳ ಪ್ರಾಧಿಕಾರವು ಈ ನಿಟ್ಟಿನಲ್ಲಿ ಅಗತ್ಯ ನೆರವು ಒದಗಿಸುತ್ತಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಕೆ.ಬಸವರಾಜು, ವಕೀಲರ ಸಂಘದ ಅಧ್ಯಕ್ಷ ಎಂ.ಡಿ.ವೆಂಕ ಟೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಪಾಪ ಭೋವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸೋಮನಾಥ್, ಜಿಲ್ಲಾ ಕಾರಾಗೃಹ ಅಧೀಕ್ಷಕ ಓಬಳೇಶಪ್ಪ, ಪ್ಯಾನಲ್ ವಕೀಲ ಜಿ.ಎನ್.ಸುಗುಣ ಇತರರಿದ್ದರು.

Translate »