ಜುಲೈ 14 ರಂದು ಲೋಕ್ ಅದಾಲತ್ ರಾಜೀ, ಸಂಧಾನದಿಂದ ಪ್ರಕರಣ ಇತ್ಯರ್ಥಕ್ಕೆ ಸಲಹೆ
ಚಾಮರಾಜನಗರ

ಜುಲೈ 14 ರಂದು ಲೋಕ್ ಅದಾಲತ್ ರಾಜೀ, ಸಂಧಾನದಿಂದ ಪ್ರಕರಣ ಇತ್ಯರ್ಥಕ್ಕೆ ಸಲಹೆ

July 1, 2018
  • ಜಿಲ್ಲೆಯಲ್ಲಿ 8,909 ಸಿವಿಲ್, 8,365 ಕ್ರಿಮಿನಲ್ ಪ್ರಕರಣ ಬಾಕಿ: ನ್ಯಾ.ಜಿ.ಬಸವರಾಜ

ಚಾಮರಾಜನಗರ:  ‘ಜಿಲ್ಲೆ ಯಲ್ಲಿ ರಾಜೀ ಸಂಧಾನದ ಮೂಲಕ ಒಮ್ಮತವಾಗಿ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಸಲುವಾಗಿ ಜು. 14ರಂದು ರಾಷ್ಟ್ರೀಯ ಲೋಕ್ ಅದಾಲತನ್ನು ಹಮ್ಮಿ ಕೊಳ್ಳಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಿ. ಬಸವರಾಜ ಹೇಳಿದರು.

ನಗರದ ಜಿಲ್ಲಾ ವ್ಯಾಜ್ಯಪೂರ್ವ ಪರಿ ಹಾರ ಕೇಂದ್ರದಲ್ಲಿ ಶನಿವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲಾ ನ್ಯಾಯಾಧೀಶರು ಚಾಮರಾಜ ನಗರ, ಗುಂಡ್ಲುಪೇಟೆ, ಯಳಂದೂರು ಮತ್ತು ಕೊಳ್ಳೇಗಾಲದ ನ್ಯಾಯಾಲಯದಲ್ಲಿ ಒಟ್ಟು 10 ಬೈಟಕ್‍ಗಳಿಗೆ ಸಂಧಾನಕಾರರನ್ನು ನೇಮಿಸಿ ರಾಜೀ ಆಗಬಹುದಾದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಜು. 14ರಂದು ಇತ್ಯರ್ಥಪಡಿಸಲಾಗುತ್ತದೆ ಎಂದರು.

ಲೋಕ್ ಅದಾಲತ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಹೊರತುಪಡಿಸಿ ಸಿವಿಲ್ ಪ್ರಕರಣಗಳಾದ ದಾಂಪತ್ಯ ಹಕ್ಕು ಗಳ ಪುನರ್‍ಸ್ಥಾಪನೆ, ಜೀವನಾಂಶ, ಮೋಟಾರು ವಾಹನ ಅಪಘಾತ ಪ್ರಕರಣಗಳು, ಕೈಗಾರಿಕಾ ವಿವಾದ ಕಾಯ್ದೆ ಪ್ರಕರಣಗಳು, ದಂಡ ಪ್ರಕ್ರಿಯಾ ಸಂಹಿತೆ ಕಲಂ 320(1), 320(2)ರ ಅಡಿ ರಾಜೀ ಮಾಡಿಕೊಳ್ಳಬಹುದಾದ ಅಪರಾಧ ಪ್ರಕರಣಗಳು, ಚೆಕ್ಕು ಅಮಾನ್ಯ, ಕಾರ್ಮಿಕ ಕಾಯ್ದೆ, ವಿದ್ಯುತ್ ಕಾಯ್ದೆ, ಅಕ್ರಮ ಕಲ್ಲು, ಮರಳು ಸಾಗಾಣಿಕೆಯಂತಹ ಅಪರಾಧ ಪ್ರಕರಣಗಳೂ ಸೇರಿದಂತೆ ರಾಜಿ ಆಗಬ ಹುದಾದ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ತೀರ್ಮಾನಿಸಲಾಗುತ್ತದೆ ಎಂದರು.

ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳ ಪೈಕಿ ಸಂಬಂಧಪಟ್ಟ ಪಕ್ಷಕಾ ರರು ಲೋಕ್ ಅದಾಲತ್‍ನಲ್ಲಿ ಪ್ರಕರಣ ಇತ್ಯರ್ಥಕ್ಕೆ ಮನವಿ ಮಾಡಿಕೊಂಡಲ್ಲಿ ಪರಿಗಣಿಸಿ ಸಂಧಾನಕಾರರ ಮುಂದೆ ಕಳುಹಿಸಿ ಕೊಡಲಾಗುತ್ತದೆ. ಉಭಯ ಪಕ್ಷಗಾರರ ಸಮ್ಮತಿಯ ಮೇರೆಗೆ ರಾಜೀ ಸಂಧಾನದ ಪ್ರಕಾರ ಅವಾರ್ಡ್ ಮಾಡಲಾಗುತ್ತದೆ. ಇಂತಹ ತೀರ್ಪಿಗೆ ಸಿವಿಲ್ ನ್ಯಾಯಾಲ ಯದ ಡಿಕ್ರಿಯಂತೆಯೇ ಜಾರಿಗೊಳಿಸ ಲಾಗುತ್ತದೆ ಎಂದು ತಿಳಿಸಿದರು.

ಯಾವುದೇ ಸಿವಿಲ್ ವ್ಯಾಜ್ಯಗಳಿದ್ದಾಗ ದಾವೆ ದಾಖಲು ಮಾಡುವ ಮೊದಲು ನ್ಯಾಯಾಲಯದ ಶುಲ್ಕವಿಲ್ಲದೆ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ದಾಖಲಿಸುವ ವ್ಯವಸ್ಥೆ ಇದೆ. ಇಂತಹ ಪ್ರಕರಣಗಳು ದಾಖ ಲಾದಾಗ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ರುವ ಕಾನೂನು ಸೇವಾ ಪ್ರಾಧಿಕಾರ ಇಲ್ಲವೆ ಸಮಿತಿಗಳು ಸಂಬಂಧಪಟ್ಟ ಪಕ್ಷಗಾರರಿಗೆ ನೋಟಿಸ್ ಕಳುಹಿಸಿ ಲೋಕ್ ಅದಾಲತ್ ಮುಂದೆ ಹಾಜರಾಗಲು ತಿಳಿಸಲಿದೆ. ರಾಜೀ ಸೂತ್ರದ ಮೂಲಕ ಪ್ರಕರಣ ತೀರ್ಮಾನವಾಗು ವುದರಿಂದ ನ್ಯಾಯಾಲಯ ಶುಲ್ಕವಿಲ್ಲದೆ ವ್ಯಾಜ್ಯ ಇತ್ಯರ್ಥವಾದಂತಾಗುತ್ತದೆ ಎಂದರು.

ಮುಂದಿನ ವ್ಯಾಜ್ಯಗಳಿಗೆ ಆಸ್ಪದ ಕೊಡದೆ ಸಮಾಜದಲ್ಲಿ ಅನ್ಯೋನ್ಯ ಹಾಗೂ ಸಹ ಕಾರದ ಸಹಬಾಳ್ವೆ ನಡೆಸಲು ಪೂರಕ ವಾತಾವರಣವನ್ನು ಲೋಕ್ ಅದಾಲತ್ ಕಲ್ಪಿಸಿಕೊಡಲಿದೆ. ಹೀಗಾಗಿ ಅತ್ಯಂತ ಪ್ರಯೋ ಜನಕಾರಿಯಾಗಿರುವ ಲೋಕ್ ಅದಾಲತ್ ಅವಕಾಶವನ್ನು ಸದುಪಯೋಗ ಮಾಡಿ ಕೊಳ್ಳಬೇಕು. ರಾಜೀ ಸಂಧಾನದ ಮೂಲಕ ಹೆಚ್ಚು ಪ್ರಕರಣಗಳ ಇತ್ಯರ್ಥಕ್ಕೆ ಮುಂದಾ ಗಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಒಟ್ಟು 8,909 ಸಿವಿಲ್ ಪ್ರಕ ರಣಗಳು, 8,365 ಕ್ರಿಮಿನಲ್ ಪ್ರಕರಣಗಳು ಇತ್ಯರ್ಥವಾಗಲು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿವೆ. ಯಾವುದೇ ವ್ಯಾಜ್ಯ ಅಥವಾ ವ್ಯಾಜ್ಯಪೂರ್ವ ಪ್ರಕರಣಗಳಿಗೆ ಕಾನೂನು ಸೇವಾ ಪ್ರಾಧಿಕಾರವು ಉಚಿತವಾಗಿ ವಕೀಲ ರನ್ನು ನೇಮಕ ಮಾಡಿ ಪರಿಹಾರ ಪಡೆ ಯಲು ಅವಕಾಶ ಕಲ್ಪಿಸಿಕೊಡಲಿದೆ ಎಂದರು.

ಪರಿಶಿಷ್ಟ ಜಾತಿ, ವರ್ಗ, ವಿಕಲಚೇತ ನರು, ಮಹಿಳೆಯರು, ಪ್ರವಾಹ ಸಂತ್ರಸ್ಥರು, ಅಲ್ಪವ್ಯಯಿಗಳಿಗೆ ಈ ಉಚಿತ ಕಾನೂನು ನೆರವು ಲಭಿಸಲಿದೆ. ಅಲ್ಲದೆ 1 ಲಕ್ಷ ರೂ. ಆದಾಯಕ್ಕಿಂತ ಕಡಿಮೆ ಇರುವ ಯಾವುದೇ ಜಾತಿಗೆ ಸೇರಿದ ಜನರಿಗೆ ಉಚಿತ ಕಾನೂನು ಸೇವೆ ವಕೀಲರ ನೇಮಕ, ನ್ಯಾಯಾಲಯ ಶುಲ್ಕ ಪಾವತಿಯಂತಹ ಸೌಲಭ್ಯ ಕಲ್ಪಿಸಿ ಪರಿಹಾರ ಕೊಡಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಇಂದುಶೇಖರ್, ಕಾರ್ಯ ದರ್ಶಿ ಅರುಣ್‍ಕುಮಾರ್ ಹಾಜರಿದ್ದರು.

ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ವಾಗುವ ಪ್ರಕರಣಗಳ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಅದಾಲತ್‍ನಲ್ಲಿ ನೀಡುವ ತೀರ್ಪು ಅಂತಿಮವಾಗಿದ್ದು, ಪ್ರಕರಣ ಇತ್ಯರ್ಥಪಡಿಸಿಕೊಂಡರೆ ಸಂದಾಯ ಮಾಡಿದ ಶೇ.75ರಷ್ಟು ನ್ಯಾಯಾಲಯ ಶುಲ್ಕವನ್ನು ವಾಪಸ್ಸು ಪಕ್ಷಗಾರರಿಗೆ ನೀಡಲಾಗುತ್ತದೆ.
-ಜಿ. ಬಸವರಾಜ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು

Translate »