ಗಿರಿಜನರೊಂದಿಗೆ ಗಲಾಟೆ ಬೇಡ, ಕಾನೂನು ಹೋರಾಟ ಮಾಡಿ
ಚಾಮರಾಜನಗರ

ಗಿರಿಜನರೊಂದಿಗೆ ಗಲಾಟೆ ಬೇಡ, ಕಾನೂನು ಹೋರಾಟ ಮಾಡಿ

July 1, 2018
  • ಸುತ್ತೂರು ಇರಸವಾಡಿ ಗ್ರಾಮಸ್ಥರಿಗೆ ಸಿಪಿಐ ರಾಜೇಶ್ ಸಲಹೆ

ಯಳಂದೂರು: ಬಿಳಿಗಿರಿರಂಗನಾಥ ಸ್ವಾಮಿ ಬೆಟ್ಟದ ಅರಣ್ಯದಂಚಿನಲ್ಲಿರುವ ಕೆ.ದೇವ ರಹಳ್ಳಿ ಗ್ರಾಮದಲ್ಲಿ ಸುಮಾರು 57ಕ್ಕೂ ಹೆಚ್ಚು ಗಿರಿಜನ ಕುಟುಂಬಗಳು ವಾಸ ವಾಗಿದ್ದು, ಅವರ ಮೇಲೆ ಕೃಷಿ ಜಮೀನಿನ ವಿಚಾರವಾಗಿ ಇರಸವಾಡಿ ಹಾಗೂ ಸುತ್ತೂರು ಗ್ರಾಮಸ್ಥರು 2017ರ ಅಕ್ಟೋಬರ್‍ನಲ್ಲಿ ಗಲಾಟೆ ಮಾಡಿದ್ದರು. ಈ ಸಂಬಂಧ ಗಿರಿ ಜನರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನೆಲೆ ಸಿಪಿಐ ರಾಜೇಶ್ ನೇತೃ ತ್ವದಲ್ಲಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಗ್ರಾಮಸ್ಥರ ಸಭೆ ನಡೆಸಲಾಯಿತು.

ಸಿಪಿಐ ರಾಜೇಶ್ ಮಾತನಾಡಿ, ಕೃಷಿ ಜಮೀನಿನ ವಿಚಾರವಾಗಿ ಕೆ.ದೇವರಹಳ್ಳಿ ಗ್ರಾಮದಲ್ಲಿ ವಾಸವಿರುವ ಗಿರಿಜನರ ಮೇಲೆ ಸುತ್ತೂರು, ಇರಸವಾಡಿ ಗ್ರಾಮಸ್ಥರು ಗಲಾಟೆ ಮಾಡದೆ ಕಾನೂನು ಹೋರಾ ಟದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಚಲುವಾದಿ ರಂಗೇಗೌಡ ಮಾತ ನಾಡಿ, ನಮ್ಮ ಪೂರ್ವಜರ ಕಾಲದಿಂ ದಲೂ ಕೆ.ದೇವರಹಳ್ಳಿ ಗ್ರಾಮದಲ್ಲೇ ನಾವು ವಾಸವಾಗಿದ್ದೇವೆ. ನಮಗೆ ಸರ್ಕಾರ ಮನೆ, ಮಕ್ಕಳಿಗೆ ಶಿಕ್ಷಣ ಪಡೆಯಲು ಶಾಲೆ ಸೇರಿದಂತೆ ರಸ್ತೆ, ಕುಡಿಯುವ ನೀರು ಸೇರಿ ದಂತೆ ಎಲ್ಲಾ ಮೂಲ ಸೌಲಭ್ಯ ಕಲ್ಪಿಸಿ ದ್ದಾರೆ. ಇದರ ಜತೆಯಲ್ಲಿ ಅರಣ್ಯ ಇಲಾ ಖೆಯಿಂದ ಗ್ಯಾಸ್ ಸಿಲಿಂಡರ್ ನೀಡಲಾ ಗಿದೆ. ಆದರೆ, ಇರಸವಾಡಿ ಮತ್ತು ಸುತ್ತೂರು ಗ್ರಾಮದ ಕೆಲವರು ಟ್ರಾಕ್ಟರ್, ಟೆಂಪೋ ಗಳಲ್ಲಿ ಬಂದು ಗ್ರಾಮದಲ್ಲಿ ರಸ್ತೆ, ಚರಂಡಿ, ಶೌಚಾಲಯ ಒಡೆದು ಹಾಕಿದ್ದರು. ಆ ಸಂದರ್ಭದಲ್ಲಿ ನಮಗೆ ನ್ಯಾಯ ಕೊಡಿ ಸುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೆ.ದೇವರಹಳ್ಳಿ ಗ್ರಾಮದ ಗಿರಿಜನರ ತಂಟೆಗೆ ಯಾರೂ ಬಾರದಂತೆ ನೋಡಿಕೊಂಡು ಗಿರಿಜನರಿಗೆ ರಕ್ಷಣೆ ನೀಡಬೇಕು ಎಂದು ವೃತ್ತ ನೀರಿಕ್ಷಕ ರಾಜೇಶ್ ಅವರಿಗೆ ಮನವಿ ಮಾಡಿದರು.

ಸುತ್ತೂರು, ಇರಸವಾಡಿ ಗ್ರಾಮದ ಮುಖಂಡ ಆರ್.ಅಶೋಕ್ ಮಾತನಾಡಿ, ಗಿರಿಜನರು ಮನೆ ನಿರ್ಮಿಸಿಕೊಂಡಿರುವ ಜಾಗ ಚಾಮರಾಜನಗರ ತಾಲೂಕಿನ ಇರಸವಾಡಿ ಮತ್ತು ಸುತ್ತೂರು ಗ್ರಾಮದ ರೈತರಿಗೆ ಸೇರಿದ್ದು, ಈ ಹಿಂದೆ ಬಿ.ರಾಚಯ್ಯ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭ ದಲ್ಲಿ ಗ್ರಾಮಸ್ಥರಿಗೆ ತಲಾ ಎರಡು ಎಕರೆ ಜಮೀನು ಹಂಚಿಕೆ ಮಾಡಿದ್ದರು. ಆ ಸಂದ ರ್ಭದಲ್ಲಿ ಕಾಡುಪ್ರಾಣ ಗಳ ಹಾವಳಿಯಿಂದ ರೈತರು ಬೆಳೆದಿದ ಫಸಲು ನಾಶವಾಗಿ ರೈತ ರಿಗೆ ನಷ್ಟ ಸಂಭವಿಸಿತ್ತು. ಹಾಗಾಗಿ, ರೈತರು ಜಮೀನು ಬಿಟ್ಟು ಹೋಗಿದ್ದರು ಎಂದರು.

ಖಾಲಿ ಬಿದ್ದ ಕೃಷಿ ಜಮೀನಿನಲ್ಲಿ ಗಿರಿ ಜನರು ಮನೆ, ಶಾಲೆ ನಿರ್ಮಿಸಿಕೊಂಡಿ ದ್ದಾರೆ. ಆದರೆ, ಗಿರಿಜನರನ್ನು ಒಕ್ಕಲೆಬ್ಬಿ ಸುವುದು ಬೇಡಾ ಎಂದು 4 ಎಕರೆ ಜಮೀನು ಬಿಟ್ಟು ಉಳಿದ ಜಮೀನು ರೈತರು ವ್ಯವ ಸಾಯ ಮಾಡುತ್ತಿದ್ದರು. ಈಗ ಗಿರಿಜನರು ಅದನ್ನು ಒತ್ತುವರಿ ಮಾಡಿಕೂಂಡು ರೈತ ರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ವೃತ್ತ ನೀರಿಕ್ಷಕ ರಾಜೇಶ್ ಅವರಿಗೆ ಸರ್ಕಾರ ದಿಂದ ನೀಡಿರುವ ದಾಖಲಾತಿ, ಕಂದಾಯ ಪಾವತಿಸಿದ ರಶೀದಿ ಸೇರಿ ದಂತೆ ವಿವಿಧ ದಾಖಲಾತಿ ನೀಡಿದರು.

ವೃತ್ತ ನೀರಿಕ್ಷಕ ರಾಜೇಶ್ ಅವರು ಗ್ರಾಮ ಸ್ಥರು ನೀಡಿದ ದಾಖಲಾತಿ ಹಾಗೂ ಗಿರಿ ಜನರ ಮನವಿಯನ್ನು ಪರಿಶೀಲಿಸಿ ಗ್ರಾಮ ಸ್ಥರು ಜಮೀನಿನ ವಿಚಾರವಾಗಿ ಗಲಾಟೆ ಮಾಡಬಾರದು. ಗಿರಿಜನರು ಹಾಲಿ ವಾಸ ಮಾಡುತ್ತಿರುವ ಜಾಗ ಬಿಟ್ಟು ಯಾವುದೇ ಒತ್ತುವರಿ ಮಾಡಿಕೊಳ್ಳಬಾರದು. ಜೊತೆಗೆ, ನಿಮ್ಮ ಬಳಿ ಯಾವುದೇ ದಾಖಲಾತಿ ಇದ್ದರೂ ಅದನ್ನು ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸ ಬೇಕು ಎಂದು ಗಿರಿಜನರಿಗೆ ತಿಳಿಸಿದರು.

ಇರಸವಾಡಿ, ಸುತ್ತೂರು ಗ್ರಾಮಸ್ಥರು ಜಿಲ್ಲಾ ಧಿಕಾರಿಗಳು ಹಾಗೂ ನ್ಯಾಯಾಲಯದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಳ್ಳ ಬೇಕು ಎಂದು ಸೂಚಿಸಿದರು. ಸಭೆಯಲ್ಲಿ ಕೆ.ದೇವರಹಳ್ಳಿ, ಸುತ್ತೂರು, ಇರಸವಾಡಿ ಗ್ರಾಮದ ಮುಖಂಡರು ಹಾಜರಿದ್ದರು.

Translate »