ಕನ್ನಡದ ಸ್ಥಾನ ಕಬಳಿಸಲು ಯಾವ ಭಾಷೆಗೂ ಸಾಧ್ಯವಿಲ್ಲ
ಚಾಮರಾಜನಗರ

ಕನ್ನಡದ ಸ್ಥಾನ ಕಬಳಿಸಲು ಯಾವ ಭಾಷೆಗೂ ಸಾಧ್ಯವಿಲ್ಲ

July 1, 2018

ಚಾಮರಾಜನಗರ: – ‘ಇಂಗ್ಲಿಷ್ ಪ್ರಭಾವದಿಂದ ಕನ್ನಡದ ವ್ಯವ ಹಾರಿಕ ಸ್ಥಾನಮಾನಗಳು ಕಡಿಮೆಯಾಗಿರ ಬಹುದೇ ಹೊರತು, ಅದರ ಮನೆ ಮಾತಿನ ಸ್ಥಾನವನ್ನು ಮತ್ಯಾವ ಭಾಷೆಯೂ ಕಬಳಿಸಲು ಸಾಧ್ಯವಿಲ್ಲ’ ಎಂದು ಚಾಮ ರಾಜನಗರ ತಾಲೂಕು ಐದನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಎಂ.ಎನ್. ಮಹೇಶ್ ಹೇಳಿದರು.

ತಾಲೂಕಿನ ಅರಕಲವಾಡಿ ಗ್ರಾಮದ ಶ್ರೀಮಹದೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಚಾಮರಾಜನಗರ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಸಮ್ಮೇ ಳನಾಧ್ಯಕ್ಷ ಭಾಷಣ ಮಾಡಿದರು.
ಇಂಗ್ಲಿಷ್ ಪ್ರಭಾವದಿಂದ ಅತಿವೇಗ ವಾಗಿ ನಾಶವಾಗುತ್ತಿರುವ ಜಾಗತಿಕ ಭಾಷೆಗಳ ಸಾಲಿನಲ್ಲಿ ಕನ್ನಡ 26ನೇ ಸ್ಥಾನದಲ್ಲಿದೆ ಎಂಬ ಅಭಿಪ್ರಾಯವನ್ನು ಭಾಷಾ ತಜ್ಞರು ವ್ಯಕ್ತಪಡಿಸಿದ್ದಾರೆ. ಇದು ಪೂರ್ಣ ಪ್ರಮಾಣದ ಸತ್ಯವಲ್ಲ. ಇಂಗ್ಲಿಷ್ ಪ್ರಭಾವ ದಿಂದ ಕನ್ನಡದ ವ್ಯವ ಹಾರಿಕ ಸ್ಥಾನಮಾನಗಳು ಕಡಿಮೆಯಾಗ ಬಹುದೇ ಹೊರತು, ಅವರ ಮನೆ ಮಾತಿನ ಸ್ಥಾನವನ್ನು ಮತ್ತಾವ ಭಾಷೆಯೂ ಕಬಳಿಸಲು ಸಾಧ್ಯವಿಲ್ಲ. ನೆರೆಯ ತಮಿಳು ನಾಡಿಗೆ ನೂರಾರು ವರ್ಷಗಳ ಹಿಂದೆ ವಲಸೆ ಹೋಗಿರುವ ಕನ್ನಡಿಗರು, ಇಂದಿಗೂ ಕೂಡ ತಮ್ಮ ಮನೆಮಾತಾಗಿ ಕನ್ನಡ ವನ್ನೇ ಬಳಸುತ್ತಿದ್ದಾರೆ. ಊಟಿ ಪ್ರದೇಶದಲ್ಲಿ ಕಂಡು ಬರುವ ಕಂಬಂ ಕನ್ನಡ, ದೇವಾಂಗ ಕನ್ನಡ, ಒಕ್ಕಲಿಗ ಕನ್ನಡ ಇತ್ಯಾದಿಗಳನ್ನು ಇಲ್ಲಿ ಉದಾಹರಿಸ ಬಹುದು ಎಂದರು.

ಅನ್ಯ ರಾಜ್ಯಗಳಿಂದ ಕರ್ನಾಟಕಕ್ಕೆ ವಲಸೆ ಬಂದವರು, ಸಂಪರ್ಕ ಭಾಷೆಯಾಗಿ ಕನ್ನಡವನ್ನೇ ಬಳಸುತ್ತಾರೆ. ಕರ್ನಾಟಕಕ್ಕೆ ವಲಸಿಗರಾಗಿ ಬಂದಿರುವ ರಾಜಸ್ತಾನಿ ಗಳು, ಮರಾಠಿಗರು, ತಮಿಳರು, ತೆಲು ಗರು ಸಂಪರ್ಕ ಭಾಷೆಯಾಗಿ ಈಗ ಕನ್ನಡ ವನ್ನು ಬಳಸುತ್ತಿರುವಂತೆ ಮುಂದಿನ ದಿನಗಳಲ್ಲಿಯೂ ಅದನ್ನು ಅನಿವಾರ್ಯ ವಾಗಿ ಬಳಸಲೇಬೇಕು. ಇದು ವ್ಯವಹಾರಿಕ ಅನಿವಾರ್ಯತೆ ಎಂದರು.

ಕನ್ನಡ ಭಾಷೆ ಸಂಪೂರ್ಣವಾಗಿ ನಶಿಸಿಹೋಗುತ್ತದೆ ಎಂಬ ಹುಸಿ ಆತಂಕ ಬೇಡ. ಯಾವುದೇ ಆತಂಕ ಇಲ್ಲದೇ, ನಮ್ಮ ತಾಯ್ನುಡಿಯಾದ ಕನ್ನಡವನ್ನು ಬಳಸುತ್ತಾ, ಬೆಳೆಸುತ್ತಾ ಮುನ್ನಡೆಯೋಣ ಎಂದು ಕರೆ ನೀಡಿದರು.

ಸಮ್ಮೇಳನವನ್ನು ಹಿರಿಯ ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಉದ್ಘಾ ಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ವಿನಯ್, ತಾಲೂಕು ಅಧ್ಯಕ್ಷ ಬಿ.ಬಸವ ರಾಜು, ಅರಕಲವಾಡಿ ಗ್ರಾಮ ಪಂಚಾ ಯಿತಿ ಅಧ್ಯಕ್ಷ ಮಹದೇವಯ್ಯ, ಉಪಾಧ್ಯಕ್ಷ ಕೆಂಚಪ್ಪ, ಮುಖಂಡ ಸಿದ್ದಮಲ್ಲಯ್ಯ, ಎಪಿಎಂಸಿ ಅಧ್ಯಕ್ಷ ಬಿ.ಕೆ.ರವಿಕುಮಾರ್, ಗೌರವ ಕಾರ್ಯದರ್ಶಿ ಜಿ.ರಾಜಪ್ಪ, ನಟರಾಜು, ನಂಜುಂಡಸ್ವಾಮಿ, ಮನೋ ಜ್‍ಗೌಡ, ನಿರಂಜನ್‍ಕುಮಾರ್, ಬಂಗಾರ ಗಿರಿ ನಾಯಕ ಇತರರು ಉಪಸ್ಥಿತರಿದ್ದರು.

Translate »