ರಂಗಮಂದಿರ ಪೂರಕ ಕಾಮಗಾರಿಗೆ ಚಾಲನೆ
ಚಾಮರಾಜನಗರ

ರಂಗಮಂದಿರ ಪೂರಕ ಕಾಮಗಾರಿಗೆ ಚಾಲನೆ

July 1, 2018

ಚಾಮರಾಜನಗರ: ನಗರದ ರಂಗಮಂದಿರಕ್ಕೆ ಪೂರಕವಾಗಿರುವ 125 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಸಮೀಪವಿರುವ ರಂಗಮಂದಿರಕ್ಕೆ ಹೊಂದಿಕೊಂಡಂತೆ ಚರಂಡಿ, ಮಳೆ ನೀರಿನ ಚರಂಡಿ, ಕಾಂಪೌಂಡ್, ವಾಹನ ನಿಲುಗಡೆ ಪ್ರದೇಶ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಸಚಿವರು, 7.50ಮೀ. ಅಗಲಕ್ಕೆ ಅಡ್ಡಮೋರಿ ನಿರ್ಮಾಣ ಮಾಡಲಾಗುತ್ತದೆ. 90ಮೀ. ಉದ್ದದಷ್ಟು ಮಳೆ ನೀರಿನ ಕಾಂಕ್ರೀಟ್ ಚರಂಡಿ, 315ಮೀ. ಉದ್ದದ ಕಾಂಪೌಂಡನ್ನು ಸಹ ನಿರ್ಮಾಣ ಮಾಡಲಾಗುತ್ತದೆ. ಅಲ್ಲದೆ ರಂಗಮಂದಿರಕ್ಕೆ ಬರುವ ವಾಹನಗಳ ನಿಲುಗಡೆ ಪ್ರದೇಶದ ಕಾಮಗಾರಿಯನ್ನು ಸಹ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಒಟ್ಟು ಟೆಂಡರ್ ಅವಧಿ 6 ತಿಂಗಳು ಇದ್ದು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಸೂಚಿ ಸಲಾಗುತ್ತಿದೆ. ರಂಗಮಂದಿರಕ್ಕೆ ಅನುಕೂಲವಾಗಿರುವ ಕಾಮಗಾರಿಯನ್ನು ನಿರ್ವಹಿ ಸಲಾಗುತ್ತದೆ ಎಂದರು. ಇದಕ್ಕೂ ಮೊದಲು ರಂಗಮಂದಿರ ಒಳ ಆವರಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು ಉಳಿದ ಕೆಲಸಗಳಿಗೆ ಮಾಡಲಾಗಿರುವ ಪ್ರಕ್ರಿಯೆ ಕುರಿತು ಶೀಘ್ರವಾಗಿ ಅನುಮೋದನೆ ಪಡೆಯಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈಗಾ ಗಲೇ ರಂಗಮಂದಿರದಲ್ಲಿ ನೆಲ ಅಂತಸ್ತು ಹಾಗೂ ಮೇಲಿನ ಗ್ಯಾಲರಿ ಸೇರಿದಂತೆ ಒಟ್ಟು 500 ಆಸನಗಳನ್ನು ಕಲ್ಪಿಸಲು ಅವಕಾಶವಿದೆ. ರಂಗಮಂದಿರದ ಒಳಾಂಗಣಕ್ಕೆ ಕಲ್ಪಿಸ ಬೇಕಿರುವ ಸೌಲಭ್ಯ ಕೆಲಸ ನಿರ್ವಹಣೆಗೆ ಸಿದ್ಧಪಡಿಸಿರುವ ಕಡತದ ಬಗ್ಗೆ ತುರ್ತಾಗಿ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ತಾವು ಉನ್ನತಮಟ್ಟದಲ್ಲಿ ಗಮನಕ್ಕೆ ತಂದು ಅಗತ್ಯ ಮಂಜೂರಾತಿಗೆ ಮುಂದಾಗಲಿದ್ದೇನೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಶೋಭ, ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಮುಖಂಡರಾದ ಚಿಕ್ಕ ಮಹದೇವು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಹದೇವಯ್ಯ, ಲೋಕೋ ಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಮಹಾಂತೇಶ್ ಹಾಜರಿದ್ದರು.

Translate »