ಮಹಿಳೆ ಮೇಲೆ ಹಲ್ಲೆ ಪ್ರಕರಣ: ಮತ್ತಿಬ್ಬರ ಸೆರೆ
ಮೈಸೂರು

ಮಹಿಳೆ ಮೇಲೆ ಹಲ್ಲೆ ಪ್ರಕರಣ: ಮತ್ತಿಬ್ಬರ ಸೆರೆ

July 1, 2018

ಮೈಸೂರು: ಪಬ್ ಬಳಿ ಮಹಿಳೆ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡಿದ ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಆರೋಪಿಗಳನ್ನು ಜಯಲಕ್ಷ್ಮೀಪುರಂ ಠಾಣೆ ಪೊಲೀಸರು ತಮಿಳುನಾಡಿನ ಊಟಿಯಲ್ಲಿ ಬಂಧಿಸಿದ್ದಾರೆ.

ಉಮೇಶ್ ಹಾಗೂ ವಿವೇಕ್ ಬಂಧಿತರಾಗಿದ್ದು, ಮೈಸೂರಿಗೆ ಕರೆತಂದು ವಿಚಾರಣೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದಷ್ಟೇ ದಿನೇಶ್‍ಗೌಡ ಎಂಬುವನನ್ನು ಬಂಧಿಸಿದ್ದ ಪೊಲೀಸರು, ಆತ ನೀಡಿದ ಸುಳಿವಿನ ಜಾಡು ಹಿಡಿದು ಇಂದು ಬೆಳಿಗ್ಗೆ ಊಟಿಯಲ್ಲಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾಲಕ್ಷ್ಮಿ ಎಂಬುವರ ಮೇಲೆ ಕಾಳಿದಾಸ ರಸ್ತೆಯ ಪಬ್‍ವೊಂದರ ಬಳಿ ನಾಲ್ವರು ಆರೋಪಿಗಳು ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದು, ಪೊಲೀಸರು ಮೂವರನ್ನು ಬಂಧಿಸಿದಂತಾಗಿದ್ದು, ಮತ್ತೋರ್ವನ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Translate »