ಕನ್ನಡ ಮಠದ 209ನೇ ಸಂಸ್ಥಾಪನಾ ದಿನಾಚರಣೆ
ಹಾಸನ

ಕನ್ನಡ ಮಠದ 209ನೇ ಸಂಸ್ಥಾಪನಾ ದಿನಾಚರಣೆ

July 1, 2018

ರಾಮನಾಥಪುರ: ಕನ್ನಡ ಭಾಷೆಗಾಗಿ ಕರ್ನಾಟಕದಲ್ಲಿರುವ ಮಠಗಳಲ್ಲಿ ಕೊಡಗಿನಲ್ಲಿನ ಅಮ್ಮತ್ತಿ ಕನ್ನಡ ಮಠ ವಿಶೇಷವಾದದ್ದು ಎಂದು ಶಾಸಕ ಡಾ. ಎ.ಟಿ.ರಾಮಸ್ವಾಮಿ ಹೇಳಿದರು.

ಹಾಸನ-ಮೈಸೂರು ಜಿಲ್ಲಾ ಗಡಿಯಲ್ಲಿ ರುವ ಬೆಟ್ಟದಪುರದ ಮಠದ ಶ್ರೀ ಮನ್ನಿ ರಂಜನ ಶ್ರೀ ಚಿಕ್ಕವೀರದೇಶಿಕೇಂದ್ರ ಸ್ವಾಮೀಜಿ 90ನೇ ವರ್ಷದ ಗಣಾರಾಧನೆ ಮತ್ತು ಮಿನ್ನಿರಂಜನ ಶ್ರೀ ಚೆನ್ನವೀರದೇಶಿ ಕೇಂದ್ರ ಸ್ವಾಮೀಜಿ 37ನೇ ವರ್ಷದ ಗಣಾ ರಾಧನೆ, ಕನ್ನಡ ಮಠದ 209ನೇ ಸಂಸ್ಥಾಪನಾ ದಿನಾಚರಣೆ, ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಅನೇಕ ಧಾರ್ಮಿಕ ಕೇಂದ್ರ ಗಳಿವೆ. ಅದರಲ್ಲಿ ಬೆಟ್ಟದಪುರ ಶ್ರೀಮಠಕ್ಕೆ ಸೇರಿದ ಕನ್ನಡ ಮಠವಿರುವುದು ಒಂದು ಹೆಮ್ಮೆಯ ವಿಚಾರ ಎಂದರು.

ಅರ್ಧ ಶತಮಾನದ ಕಾನೂನು ಹೋರಾಟ ದಿಂದ ಶ್ರೀಗಳು ಹಲವಾರು ಅಡೆತಡೆ ಗಳನ್ನು ಕಷ್ಟಗಳನ್ನು ಅನುಭವಿಸಿ ಕೊಡಗಿನ ಕನ್ನಡ ಮಠ ಉಳಿಸಿರುವುದು ಸಂತೋಷದ ಸಂಗತಿ. ಕೊಡಗಿನ ಬೆಟ್ಟಗೇರಿ ಗ್ರಾಮದ ಕೆಲವು ಕುಟುಂಬದವರು ಅನುಭವಿಸಿಕೊಂಡು ಬರುತ್ತಿದ್ದ 193 ಎಕರೆ ಭೂಮಿಯನ್ನು ನ್ಯಾಯಾಲಯದ ಮೂಲಕ ಬೆಟ್ಟದಪುರ ಮಠದ ಶ್ರೀ ಚನ್ನಬಸವದೇಶಿ ಕೇಂದ್ರ ಸ್ವಾಮೀಜಿ ಕೊಡಗಿನಲ್ಲಿರುವ ಕನ್ನಡ ಮಠಕ್ಕೆ ವಾಪಸ್ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಹಿಂದೆ ಕೊಡಗಿನಲ್ಲಿರುವ ಶ್ರೀ ವೀರ ರಾಜೇಂದ್ರ ಒಡೆಯರ್ 1809ರಲ್ಲಿ ಕನ್ನಡ ಮಠಕ್ಕೆ ಇನಾಮಾಗಿ ಜಮೀನು ನೀಡಿ ಮಠ ಸ್ಥಾಪಿಸಿದರು. ಅಂದಿನಿಂದ ಸರ್ಕಾರಿ ದಾಖಲೆಗಳಲ್ಲಿ ಕನ್ನಡ ಮಠವೆಂದು ದಾಖಲಾಗಿತ್ತು. 1967ರಲ್ಲಿ ಈ ಹಿಂದಿನ, ಸ್ವಾಮೀಜಿಗಳು ತಮಗೆ ಇನಾಮಾಗಿ ದೊರೆತ 197 ಎಕರೆ ಪೈಕಿ 4 ಉಳಿಸಿಕೊಂಡು 99 ವರ್ಷಗಳವರೆಗೆ 193 ಎಕರೆ ಭೂಮಿ ಯನ್ನು 40 ಸಾವಿರ ರೂ.ಗಳಿಗೆ ಚೌರೀರ ಕುಟುಂಬದವರಿಗೆ ಹಿಂದೆ ಭೋಗ್ಯಕ್ಕೆ ನೀಡಿದ್ದರು. ನಂತರದ ಈಗೀನ ಬೆಟ್ಟದಪುರ ಶ್ರೀಗಳು ಈ ಬಗ್ಗೆ ನ್ಯಾಯಲಯದಲ್ಲಿ ಕಾನೂನು ಬದ್ಧವಾಗಿ ಐತಿಹಾಸಿಕ ಭೂಸುಧಾರಣಾ ಕಾಯ್ದೆಯ ಮೂಲಕ ಹಾಗೂ ಸರ್ವೋಚ್ಚ ನ್ಯಾಯಲಯದ ಮೂಲಕ 193 ಎಕರೆ ಭೂಮಿ ಬೆಟ್ಟದಪುರದ ವ್ಯಾಪ್ತಿಯ ಕನ್ನಡ ಮಠಕ್ಕೆ ಕಾನೂನು ರೀತಿ, ಸರ್ಕಾರದ ಮುಖ್ಯಾಂತರ ವಾಪಸ್ ಪಡೆದಿದ್ದಾರೆ ಎಂದ ಅವರು, ಬೆಟ್ಟದಪುರದ ಶ್ರೀಗಳವರಿಗೆ ಅಭಿನಂದನೆ ಸಲ್ಲಿಸಿದರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡರು ಶಿವಾನುಭವ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಜಗದ್ಗುರು ಪಕೀರಸಿದ್ದ ರಾಮಮಹಾ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬೆಟ್ಟದಪುರ ಸ್ವತಂತ್ರ ಸಲೀಲಾಖ್ಯ ವಿರಕ್ತ ಮಠ ಹಾಗೂ ಕನ್ನಡ ಮಠ ಪುನ ರುತ್ಥಾನ ರೂವಾರಿಗಳಾದ ಶ್ರೀಮಠದ ಚನ್ನ ಬಸವದೇಶಿ ಕೇಂದ್ರ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅರಮೇರಿ ಮಠ ಶಾಂತ ಮಲ್ಲಿ ಕಾರ್ಜುನ ಸ್ವಾಮೀಜಿ, ಮನಕವಾಡ ದೇವಮಂದಿರ ಶ್ರೀ ಸಿದ್ದರಾಮದೇವರು, ಅರಕಲಗೂಡು ದೊಡ್ಡಮಠದ ಮಲ್ಲಿ ಕಾರ್ಜುನ ಸ್ವಾಮೀಜಿ, ಜಯದೇವ ಸ್ವಾಮೀಜಿ, ಕಲ್ಲುಮಠ ಶ್ರೀಮಹಾಂತ ಸ್ವಾಮೀಜಿ, ಪಿರಿಯಪಟ್ಟಣ ಶಾಸಕ ಕೆ.ಮಹದೇವ್ ಸೇರಿದಂತೆ ಇತರರಿದ್ದರು.

Translate »