ಅರಸೀಕೆರೆ: ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಕಾರ್ಯ ಕ್ಷಮತೆಯನ್ನು ಉಳಿಸಿ ಕೊಂಡಿರುವ ನಗರದ ಕ್ಷೇತ್ರ ಸಮನ್ವಯ ಅಧಿಕಾರಿಗಳ ಹೆಚ್ಚುವರಿ ಕೊಠಡಿಯು ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದು ವಿಷಜಂತುಗಳಿಗೆ ಆಶ್ರಯ ತಾಣವಾಗಿ ಮಾರ್ಪಟ್ಟಿದ್ದು, ಇಲಾಖೆಯ ನಿರ್ಲಕ್ಷ್ಯ ವನ್ನು ಪ್ರದರ್ಶಿಸುತ್ತಿದೆ.
ವಿವಿಧ ಸಂಘ-ಸಂಸ್ಥೆಗಳೊಂದಿಗೆ ಶಾಲಾ ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ ಈ ಇಲಾಖೆ ಹೊರ ಪ್ರಪಂಚಕ್ಕೆ ಮಾತ್ರ ಬೋಧನೆ ಮಾಡುತ್ತಾ, ತನ್ನ ಕಟ್ಟಡಗಳ ಸುತ್ತ ಮುತ್ತಲು ಬೆಳೆದು ನಿಂತಿರುವ ಗಿಡಗಂಟಿ, ತಾಜ್ಯ ತೆರವುಗೊಳಿ ಸದೆ ವಿಷ ಜಂತುಗಳಿಗೆ ಆಶ್ರಯ ಮಾಡಿ ಕೊಟ್ಟಿದೆ. ಇದನ್ನು ನೋಡಿದಾಗ ಕ್ಷೇತ್ರದ ಶಾಲೆಗಳ ಮಕ್ಕಳಿಗೆ ಯಾವ ರೀತಿ ಶಿಕ್ಷಣ ವನ್ನು ನೀಡುತ್ತಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಈ ಇಲಾಖೆಯ ಅಧಿಕಾರಿಗಳು ಮೊದಲು ತಮ್ಮ ಕಚೇರಿ ಆವರಣ ಸ್ವಚ್ಛವಾಗಿ ಇಟ್ಟುಕೊಳ್ಳುವತ್ತ ಗಮನ ಹರಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೇಂದ್ರದ ಅಕ್ಕ ಪಕ್ಕದಲ್ಲಿ ಸರ್ಕಾರಿ ಹೊಸ ಮಾಧ್ಯಮಿಕ ಶಾಲೆ ಹಾಗೂ ಕ್ಷೇತ್ರ್ರ ಶಿಕ್ಷಣಾ ಧಿಕಾರಿಗಳ ಕಚೇರಿ ಇದ್ದು, ಈ ಆವರಣ ದಲ್ಲಿ ಪರಿಸರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ ಹೆಚ್ಚುವರಿ ಕಟ್ಟಡ ಇರುವ ಬಿಆರ್‍ಸಿ ಕೇಂದ್ರ ಆವರಣಕ್ಕೆ ವಾರಕ್ಕೊಮ್ಮೆ ವಿಕಲ ಚೇತನ ಮಕ್ಕಳನ್ನು ಶಾಲೆಗಳಿಂದ ಕರೆಸಿ ಕಲಿಕಾ ಚಟುವಟಿಕೆಗಳನ್ನು ಏರ್ಪಡಿಸಲಾ ಗುತ್ತದೆ. ವೈದ್ಯಕೀಯ ಪರೀಕ್ಷೆಯೂ ಇಲ್ಲಿ ನಡೆಯುತ್ತದೆ. ಆದರೆ ಇದರ ಸುತ್ತಲ ಪರಿಸರಕ್ಕೆ ಗಮನ ನೀಡದಿರುವುದರಿಂದ ವಿಷ ಜಂತುಗಳ ಹಾವಳಿಗೆ ಬರುವ ಮಕ್ಕಳು ತುತ್ತಾಗುವ ಸಂಭವವನ್ನೂ ಅಲ್ಲಗೆಳೆಯುವಂತಿಲ್ಲ.
ಈ ಕೇಂದ್ರಕ್ಕೆ ಕ್ಷೇತ್ರ ಸಮನ್ವಯ ಅಧಿಕಾರಿ ಸೇರಿದಂತೆ 36 ಜನ ಸಿಆರ್‍ಪಿ ಮತ್ತು ಬಿಆರ್‍ಪಿಗಳು ಪ್ರತಿದಿನ ಬಂದು ಹೋಗುತ್ತಾರೆ. ಇವರೆಲ್ಲರೂ ತಾಲೂಕಿನ ಎಲ್ಲಾ ಶಾಲೆಗಳನ್ನು ತಪಾಸಣೆ ಮಾಡುವುದರ ಮೂಲಕ ಆಯಾ ಶಾಲೆಗಳ ಆವರಣ ಸ್ವಚ್ಛತೆ ಮತ್ತು ಪರಿಸರ ನಿರ್ವಹಣೆಯನ್ನೂ ಗಮನಿಸಿ ವರದಿ ನೀಡುತ್ತಾರೆ. ಇಂತಹ ಸಿಬ್ಬಂದಿಯೇ ಸ್ವತಃ ಕಾರ್ಯ ನಿರ್ವಹಿಸುವ ಕಟ್ಟಡ ಸುತ್ತ ಮುತ್ತಲಿನ ಪರಿಸರ ಮಾಲಿನ್ಯ ಕಾಣದಿರುವುದು ಮಾತ್ರ ವಿಪರ್ಯಾಸ.
ತಾಲೂಕಿನ ಶಾಲೆಗಳಿಗೆ ಮಾದರಿಯಾಗಿರ ಬೇಕಿದ್ದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಈ ಅವಸ್ಥೆಯಲ್ಲಿದ್ದರೂ ಯಾವ ಹಿರಿಯ ಅಧಿಕಾರಿಗಳೂ ಆಸಕ್ತಿ ವಹಿಸದೇ ಜನರಲ್ಲಿ ಪರಿಸರ ಜಾಗೃತಿ ಮೂಡಿಸಲು ಹೊರಟಿರುವುದು ಮಾತ್ರ ಸಾರ್ವಜನಿಕ ವಲಯಗಳಲ್ಲಿ ನಗೆ ಪಾಟಲಾಗಿದೆ.