ದಶಕದಿಂದ ನೆನೆಗುದಿಗೆ ಬಿದ್ದಿರುವ ಮಡಿಕೇರಿ, ವಿರಾಜಪೇಟೆ ವಿದ್ಯುತ್ ಸಂಪರ್ಕ ಯೋಜನೆ
ಕೊಡಗು

ದಶಕದಿಂದ ನೆನೆಗುದಿಗೆ ಬಿದ್ದಿರುವ ಮಡಿಕೇರಿ, ವಿರಾಜಪೇಟೆ ವಿದ್ಯುತ್ ಸಂಪರ್ಕ ಯೋಜನೆ

July 1, 2018

ಮಡಿಕೇರಿ: ವೀರಾಜಪೇಟೆ- ಮಡಿಕೇರಿ ನಡುವಿನ ಸುಮಾರು ರೂ.7 ಕೋಟಿ ವೆಚ್ಚದ 66 ಕೆ.ವಿ.ವಿದ್ಯುತ್ ಮಾರ್ಗದ ಕಾಮಗಾರಿ ಕಳೆದ 10 ವರ್ಷದಿಂದಲೂ ಆರಂಭಗೊಂಡಿಲ್ಲ. ಕೆಪಿಟಿಸಿಎಲ್ ಅಧಿಕಾರಿ ಗಳು ನೆಪ ಹೇಳುತ್ತಾ ಕಾಲಹರಣ ಮಾಡಿ ದರೇ ಹೊರತು ಹೊಸ ಟೆಂಡರ್ ಪ್ರಕ್ರಿಯೆ ಆರಂಭಕ್ಕೆ ಇಂದಿಗೂ ಮನಸ್ಸು ಮಾಡಿಲ್ಲ.

ಈ ಹಿಂದೆ ಸುಮಾರು ರೂ.6.75 ಕೋಟಿ ವೆಚ್ಚದ ವೀರಾಜಪೇಟೆಯಿಂದ ಮಡಿಕೇರಿ ವರೆಗೆ ಸುಮಾರು 172 ವಿದ್ಯುತ್ ಗೋಪುರ ನಿರ್ಮಾಣಕ್ಕೆ ‘ಶಿವಮೊಗ್ಗ ಸ್ಟೀಲ್ ಕಂಪೆನಿ’ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಗೋಪುರ ನಿರ್ಮಾಣಕ್ಕೆ ಗುತ್ತಿಗೆದಾರ ಕಂಪೆನಿ ಅಗತ್ಯ ಸಾಮಾನುಗಳನ್ನು ಖರೀದಿ ಮಾಡಿತ್ತು. ಮಡಿಕೇರಿ ಸಮೀಪ ಕರ್ಣಂಗೇರಿ ಅರಣ್ಯ ಪ್ರದೇಶದ ಅಂದಾಜು 3 ಕಿ.ಮೀ.ವ್ಯಾಪ್ತಿಯಲ್ಲಿ 8-10 ಗೋಪುರ ಅಳವಡಿಕೆಗೆ ಅರಣ್ಯ ಇಲಾ ಖೆಯ ತಕರಾರಿನಿಂದ ಗುತ್ತಿಗೆದಾರ ಕಾಮ ಗಾರಿ ನಡೆಸಲು ಹಿಂದೇಟು ಹಾಕಿದ್ದು ಕಾಮ ಗಾರಿ ನೆನೆಗುದಿಗೆ ಬೀಳಲು ಕಾರಣವಾಗಿದೆ. ಕರ್ಣಂಗೇರಿ ಅರಣ್ಯ ಪ್ರದೇಶ ಮಾರ್ಗ ವಿದ್ಯುತ್ ಗೋಪುರ ಅಳವಡಿಕೆಗೆ ರೂ.34 ಲಕ್ಷ ಮೊತ್ತವನ್ನು ಅರಣ್ಯ ಇಲಾಖೆಗೆ ಪಾವ ತಿಸಿ, ಅನುಮತಿ ಪಡೆದುಕೊಂಡು ಮೂರು ವರ್ಷ ಕಳೆದು ಹೋಗಿದ್ದು, ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ.

ಕಾಮಗಾರಿ 10 ವರ್ಷ ದೀರ್ಘ ಕಾಲ ನೆನೆ ಗುದಿಗೆ ಬಿದ್ದಿರುವ ಹಿನ್ನೆಲೆ ಹೊಸ ಟೆಂಡರ್ ಪ್ರಕ್ರಿಯೆ ಇನ್ನಷ್ಟೆ ಆರಂಭವಾಗಬೇಕಿದೆ. ಉದ್ದೇಶಿತ ಕಾಮಗಾರಿ ಈ ಹಿಂದೆ ಕುಮಾರ ಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ ಆರಂಭಗೊಂಡಿತ್ತು. ಇದೀಗ ಅವರೇ ಮುಖ್ಯಮಂತ್ರಿಯಾಗಿರುವುದು ದಕ್ಷಿಣ ಕೊಡ ಗಿನ ವಿದ್ಯುತ್ ಗ್ರಾಹಕರಲ್ಲಿ ಹೊಸ ಆಶಾಭಾವನೆಗೆ ಕಾರಣವಾಗಿದೆ. ಈ ಬಾರಿಯಾ ದರೂ ಉದ್ಧೇಶಿತ ಕಾಮಗಾರಿ ಮುಗಿದಲ್ಲಿ ದಕ್ಷಿಣ ಕೊಡಗಿನ ಬಹುಭಾಗ ಗ್ರಾಮ ಗಳಿಗೆ ಮಳೆ- ಗಾಳಿ ಸಂದರ್ಭ ಅನಿಯ ಮಿತ ವಿದ್ಯುತ್ ಸರಬರಾಜು, ಪವರ್‍ಕಟ್ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

ಕುಶಾಲನಗರ 220 ಕೆ.ವಿ.ವಿದ್ಯುತ್ ಕೇಂದ್ರಕ್ಕೆ ಮೈಸೂರು ಸಮೀಪ ಬಸ್ತಿಪುರ ಹಾಗೂ ಹೂಟಗಳ್ಳಿ ವಿದ್ಯುತ್ ಲೇನ್ ಮಾರ್ಗ ‘ಪವರ್ ಗ್ರಿಡ್ ಕಾಪೆರ್Çೀರೇಷನ್’ ಮೂಲಕ ವಿದ್ಯುತ್ ಸರಬರಾಜಾಗುತ್ತಿದ್ದರೆ, ಪೆÇನ್ನಂಪೇಟೆ 66 ಕೆ.ವಿ.ಉಪಕೇಂದ್ರಕ್ಕೆ ಹೂಟಗಳ್ಳಿ-ಹುಣ ಸೂರು-ಪಿರಿಯಾಪಟ್ಟಣ-ಅಳ್ಳೂರು-ಆನೆ ಚೌಕೂರು ಮಾರ್ಗ ವಿದ್ಯುತ್ ಸರಬರಾಜಾ ಗುತ್ತಿದೆ. ಆನೆಚೌಕೂರು ಹಾಗೂ ತಿತಿಮತಿ ವ್ಯಾಪ್ತಿಯ ಕಾಫಿ ತೋಟ ಪ್ರದೇಶದಲ್ಲಿ ಮಳೆ ಗಾಳಿಗೆ ವಿದ್ಯುತ್ ಲೇನ್ ಮೇಲೆ ಮರ ಉರುಳಿ ಬಿದ್ದಲ್ಲಿ ಇಡೀ ದಕ್ಷಿಣ ಕೊಡಗು ಕತ್ತಲೆ ಯಲ್ಲಿ ಮುಳುಗುವ ಸ್ಥಿತಿ ಈಗಲೂ ಮುಂದು ವರಿದಿದೆ. ಇಂತಹ ಪರಿಸ್ಥಿತಿಯಲ್ಲಿ ವೀರಾಜ ಪೇಟೆ-ಮಡಿಕೇರಿ 66 ಕೆ.ವಿ.ವಿದ್ಯುತ್ ಮಾರ್ಗ ಪೂರ್ಣಗೊಂಡಿದ್ದೇ ಆದಲ್ಲಿ ಕುಶಾಲನಗರ-ಮಡಿಕೇರಿ ಮಾರ್ಗ ವೀರಾ ಜಪೇಟೆ ಉಪಕೇಂದ್ರಕ್ಕೆ ವಿದ್ಯುತ್ ಹರಿ ಯಲು ಸಾಧ್ಯವಿತ್ತು. ಇದೀಗ ಕೆಪಿಟಿಸಿ ಎಲ್ ಶ್ರೀಮಂಗಲ, ನಾಪೆÇೀಕ್ಲು ಒಳಗೊಂ ಡಂತೆ ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ 66 ಕೆ.ವಿ.ವಿದ್ಯುತ್ ಉಪಕೇಂದ್ರ ಆರಂಭಿಸಲು ಯೋಜನೆ ಹಾಕಿ ಕೊಂಡಿದೆ. ಆದರೆ, ಉದ್ಧೇಶಿತ ವೀರಾಜ ಪೇಟೆ-ಮಡಿಕೇರಿ ನಡುವೆ 172 ವಿದ್ಯುತ್ ಗೋಪುರ ಅಳವಡಿಕೆ ಮೂಲಕ 66 ಕೆ.ವಿ.ವಿದ್ಯುತ್ ಲೇನ್ ಕಾಮಗಾರಿ ಪೂರ್ಣ ಗೊಳ್ಳದಿದ್ದಲ್ಲಿ ‘ಪವರ್ ಕಟ್’ ತೊಂದರೆ ನಿರಂತರವಾಗಿ ಕಾಡಲಿದೆ.

ಈ ಹಿಂದೆ ಕೊಡಗು ಜಿಲ್ಲೆಗೆ ಕೆ.ಜೆ. ಜಾರ್ಜ್ ಉಸ್ತುವಾರಿ ಸಚಿವರಾಗಿದ್ದ ಸಂದರ್ಭವೂ ವಿದ್ಯುತ್ ಮಾರ್ಗ ಕಾಮ ಗಾರಿ ನಡೆಸುವಂತೆ ಮನವಿ ಮಾಡಲಾ ಗಿತ್ತು. ಆದರೆ, ಪ್ರಯೋಜನವಾಗಿರಲಿಲ್ಲ. ಇದೀಗ ಮತ್ತೆ ಕೆ.ಜೆ.ಜಾರ್ಜ್ ಕೊಡಗು ಉಸ್ತುವಾರಿ ಸಚಿವರಾಗಿ ನೇಮಕವಾಗುವ ಸಾಧ್ಯತೆ ಇದ್ದು ಈ ಬಾರಿಯಾದರೂ ಆಸಕ್ತಿ ತೋರಬಹುದೇ ಎಂಬ ನಿರೀಕ್ಷೆ ಸಾರ್ವಜನಿಕ ವಲಯದಲ್ಲಿದೆ. ಕೊಡಗಿನ ವಿದ್ಯುತ್ ಬಳಕೆದಾರರು, ಉದ್ಯಮಿಗಳು, ಕೃಷಿಕರು ಪ್ರಾಮಾಣಿಕವಾಗಿ ವಿದ್ಯುತ್ ಬಿಲ್ ಪಾವತಿಸುತ್ತಿದ್ದು ಇದಕ್ಕೆ ಪ್ರತಿಫಲ ಮಾತ್ರ ಇಂದಿಗೂ ದೊರೆತ್ತಿಲ್ಲ.

Translate »