ಮ್ಯುಟೇಷನ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಡಿಸಿ ಸೂಚನೆ
ಹಾಸನ

ಮ್ಯುಟೇಷನ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಡಿಸಿ ಸೂಚನೆ

June 30, 2018

ಹಾಸನ; ಬಾಕಿ ಇರುವ ವಿವಾದಗಳಿಲ್ಲದ ಎಲ್ಲಾ ಮ್ಯುಟೇಷನ್‍ಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಧಿಕಾರಿ ರೋಹಿಣಿ ಸಿಂಧೂರಿ ಸೂಚಿಸಿದರು.ತಮ್ಮ ಕಚೇರಿಯಲ್ಲಿ ಕಂದಾಯ ಅಧಿಕಾರಿ ಗಳ ಸಭೆ ನಡೆಸಿದ ಅವರು, ಅರ್ಜಿ ಹಾಗೂ ಪ್ರಕರಣಗಳ ವಿಲೇವಾರಿಯಲ್ಲಿ ಆಗುತ್ತಿ ರುವ ವಿಳಂಬ ಧೋರಣೆ ಸಹಿಸಲಾಗದು ಎಂದು ಅಸಮಾಧಾನ ವ್ಯಕ್ತಪಡಿಸಿದರು

ಕೆಲಸ ಚುರುಕುಗೊಳಿಸಿ: ಭೂಮಿ ಹಾಗೂ ಸಕಾಲ ಯೋಜನೆಯಡಿ ಸ್ವೀಕರಿಸುವ ಅರ್ಜಿಗಳು ಕಾಲಮಿತಿಯೊಳಗೆ ವಿಲೇವಾರಿ ಯಾಗಬೇಕು. ತಕರಾರು ಇರದ ಪ್ರಕರಣ ಗಳು ನಿಯಮಿತವಾಗಿ ಮುಕ್ತಾಯಗೊಳ್ಳ ಬೇಕು. ಈ ಬಗ್ಗೆ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ಪರಿವೀಕ್ಷಕರು ತಮ್ಮ ಕೆಲಸ ವನ್ನು ಚುರುಕುಗೊಳಿಸಬೇಕು. ನಿರ್ಲಕ್ಷ್ಯ ಮಾಡುವವರ ವಿರುದ್ಧ ಶಿಸ್ತು ಕ್ರಮ ಜರುಗಿ ಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಪೋಡಿ ಪ್ರಕರಣ ವಿಲೇವಾರಿ: ಬಾಕಿ ಇರುವ ಪೋಡಿ ಪ್ರಕರಣಗಳು ಸಹ ತ್ವರಿತ ವಾಗಿ ವಿಲೇವಾರಿಯಾಗಬೇಕು. ಹಾಸನದಲ್ಲಿ ಮ್ಯುಟೇಷನ್ ಅರ್ಜಿ ಮುಕ್ತಾಯ ಪ್ರಕ್ರಿಯೆ ಇತರ ಜಿಲ್ಲೆಗಳಿಗಿಂತ ಬೇಗನೆ ಆಗುವಂತಾ ಗಬೇಕು ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನ ಹರಿಸಬೇಕು ಎಂದರು.

ದೂರು ದಾಖಲಿಸಿ:ಭೂ ನೋಂದಣಿ ರಾಜಸ್ವ ಸ್ವೀಕಾರದಲ್ಲಿನ ವ್ಯತ್ಯಾಸ ಸೇರಿದಂತೆ ಸಾವಿರಕ್ಕೂ ಅಧಿಕ ಬಾಕಿ ವಸೂಲಿ ಪ್ರಕರಣಗಳಿದ್ದು, ಮುಂದಿನ 3 ತಿಂಗಳೊಳಗೆ 3 ವರ್ಷಗಳಿಗೆ ಮೇಲ್ಪಟ್ಟ ಪ್ರಕರಣಗಳನ್ನು ಸಂಪೂರ್ಣವಾಗಿ ಇತ್ಯರ್ಥ ಪಡಿಸಬೇಕು. ಅಲ್ಲದೆ ಇನ್ನಷ್ಟು ಹೊಸ ಪ್ರಕರಣಗಳನ್ನು ಪತ್ತೆಹಚ್ಚಿ ದೂರು ದಾಖಲಿಸಿಕೊಳ್ಳುವಂತೆ ಜಿಲ್ಲಾ ನೋಂದಣಾಧಿಕಾರಿಯವರಿಗೆ ನಿರ್ದೇಶನ ನೀಡಿದರು.

ಪರಿಹಾರ, ವಿಮೆ ಒದಗಿಸಿ:ಜಿಲ್ಲೆಯಲ್ಲಿ ಈ ವರ್ಷ ಸರಾಸರಿಗಿಂತ ಹೆಚ್ಚಿನ ಮಳೆ ಯಾಗಿದ್ದು, ಹಲವೆಡೆ ಬೆಳೆ ಹಾಗೂ ಮನೆಗಳಿಗೆ ಹಾನಿ ಸಂಭವಿಸಿದೆ. ಅವುಗಳಿಗೆ ಶೀಘ್ರವಾಗಿ ಪರಿಹಾರ ವಿತರಣೆಯಾಗಬೇಕು. ಆಲೂಗೆಡ್ಡೆ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ಕಂದಾಯ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಜಂಟಿ ಸಮೀಕ್ಷೆ ನಡೆಸಿ ನಿಖರ ವರದಿ ಸಲ್ಲಿಸಿ, ಪರಿಹಾರ ಹಾಗೂ ವಿಮೆ ಸೌಲಭ್ಯ ಕಲ್ಪಿಸಿ. ಎಲ್ಲಾ ತಾಲೂಕುಗಳಲ್ಲಿ ಕಂದಾಯ ಅದಾಲತ್ ನಡೆಯಬೇಕಿದ್ದು, ತಾಲೂಕು ಕಚೇರಿಗಳು ಜನಪರವಾಗಿ ಹೆಚ್ಚು ಸಾರ್ವಜನಿಕ ಸ್ಪಂದನೆ ಯೊಂದಿಗೆ ಕೆಲಸ ಮಾಡಬೇಕು ಎಂದರು.

ಪಿಂಚಣಿ ಬಗ್ಗೆ ಗಮನ ಹರಿಸಿ: ಸಾಮಾ ಜಿಕ ಭದ್ರತಾ ಯೋಜನೆ ಸೌಲಭ್ಯ ನೀಡುವು ದರಲ್ಲಿ ವಿಳಂಬವಾಗುತ್ತಿದೆ ಎಂದು ದೂರು ಗಳಿವೆ. ಅದನ್ನು ಸರಿಪಡಿಸಿ ಜಿಲ್ಲಾ ಅಂಗ ವಿಕಲ ಕಲ್ಯಾಣ ಅಧಿಕಾರಿಯಿಂದ ವಿಕಲ ಚೇತನರ ಬಗ್ಗೆ ವಿವರ ಪಡೆದು ಎಲ್ಲಾ ಅರ್ಹ ಫಲಾನುಭವಿಗಳಿಗೆ ಶೀಘ್ರವೇ ಪಿಂಚಣಿ ಸೌಲಭ್ಯ ವಿತರಿಸುವಂತಾಗಬೇಕು. ಯಾರೂ ಸೌಲತ್ತಿನಿಂದ ವಂಚಿತರಾಗುವಂತಾಗ ಬಾರದು ಎಂದು ಇದೇ ವೇಳೆ ತಿಳಿಸಿದರು.

ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವ ಅರ್ಹರ ಬಗ್ಗೆ ಪರಿಶೀಲನೆಯಾಗಬೇಕು. ಮರಣ ಹೊಂದಿದವರ ನಿಖರ ಮಾಹಿತಿ ಸಂಗ್ರಹಿಸಿ, ಅವರ ಹೆಸರನ್ನು ಮತದಾರರ ಪಟ್ಟಿ, ಪಡಿತರ ಚೀಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ಪಟ್ಟಿ ಯಿಂದ ಕೈ ಬಿಡಬೇಕಿದೆ. ಈ ಬಗ್ಗೆ ಎಲ್ಲಾ ಕಂದಾಯ ಅಧಿಕಾರಿಗಳು ಗಮನ ಹರಿಸ ಬೇಕು ಎಂದರು.

ಹೆಚ್‍ಆರ್‍ಪಿ ಪ್ರಕರಣ ಬಹರಿಸಿ: ಜಿಲ್ಲೆ ಯಲ್ಲಿ ಬಾಕಿ ಇರುವ ಹೇಮಾವತಿ ಯೋಜನಾ ನಿರಾಶ್ರಿತರ ಪುನರ್ ವಸತಿ ಪ್ರಕರಣಗಳು ತ್ವರಿತವಾಗಿ ಮುಗಿಯಬೇಕು. ಮುಂದಿನ 2 ತಿಂಗಳಲ್ಲಿ ಎಲ್ಲವನ್ನೂ ಇತ್ಯರ್ಥ ಮಾಡುವ ಅಗತ್ಯವಿದ್ದು, ಹೆಚ್ಚಿನ ಸರ್ವೆಯರ್‍ಗಳನ್ನು ನಿಯೋಜನೆಯಾಗಬೇಕು. ಇದಕ್ಕೆ ಪೂರಕ ವಾಗಿ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಹಾಗೂ ಭೂ ದಾಖಲೆಗಳ ಉಪ ನಿರ್ದೇ ಶಕರು ಜಂಟಿ ಯೋಜನೆ ಸಿದ್ಧಪಡಿಸಿ ಅಗತ್ಯ ಕ್ರಮವಹಿಸಲು ಸೂಚಿಸಿದರು.

ಒತ್ತುವರಿ ತೆರವು: ಜಿಲ್ಲೆಯಲ್ಲಿ ದಾಖಲೆಗಳ ಪ್ರಕಾರ 2800 ಎಕರೆ ಒತ್ತುವರಿ ತೆರವು ಪ್ರಕರಣ ಬಾಕಿ ಇದ್ದು, ಈ ಬಗರ್ ಹುಕುಂ ನಲ್ಲಿ ವಿಲೇವಾರಿಯಾಗಿರುವ ಅರ್ಜಿ ಹಾಗೂ ಭೂ ಪ್ರಮಾಣ ಪರಿಶೀಲಿಸಿ ನೈಜ್ಯ ವಿವರ ಸಿದ್ಧಪಡಿಸಿ. ಭೂ ಕಂದಾಯ ವಸೂಲಾತಿ ಚುರುಕುಗಳಿಸಿ ಪ್ರತಿದಿನ ಭೂಮಿ ಹಾಗೂ ಸಕಾಲ ಪ್ರಕರಣಗಳನ್ನು ತ್ವರಿತ ವಾಗಿ ವಿಲೇವಾರಿ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸೇವೆ ಒದಗಿಸಿ ಎಂದು ಜಿಲ್ಲಾಧಿಕಾರಿ ಕಂದಾಯ ಅಧಿಕಾರಿಗಳಿಗೆ ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಡಾ.ಹೆಚ್.ಎಲ್. ನಾಗರಾಜ್ ಸರ್ವೆ ಕಾರ್ಯಗಳಿಗೆ ಸಂಬಂಧಿಸಿದಂತೆ ಇರುವ ಅಡೆತಡೆಗಳು ಪೋಡಿ ಹಾಗೂ ದರಖಾಸ್ತು ಪ್ರಕರಣ ವಿಲೇವಾರಿಗಳ ಬಗ್ಗೆ ವಿವರಿಸಿದರು.

ವಿಶೇಷ ಭೂಸ್ವಾಧೀನಾಧಿಕಾರಿ ಜಗದೀಶ್, ಭೂ ದಾಖಲೆಗಳ ಇಲಾಖೆ ಉಪನಿರ್ದೇ ಶಕ ಕೃಷ್ಣಪ್ರಸಾದ್, ಜಂಟಿ ಕೃಷಿ ನಿರ್ದೇ ಶಕ ಮಧುಸೂಧನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಸಂಜಯ್ ಸೇರಿದಂತೆ ವಿವಿಧ ತಾಲೂಕುಗಳ ತಹಶೀ ಲ್ದಾರ್ ಮತ್ತಿತರರು ಸಭೆಯಲ್ಲಿದ್ದರು.

Translate »