ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!
ಮಂಡ್ಯ

ಎಟಿಎಂನಲ್ಲಿ ಹರಿದ, ಕಪ್ಪು ಮಸಿಯುಳ್ಳ 2 ಸಾವಿರ ನೋಟು.!

June 30, 2018

ಮಂಡ್ಯ: ಬ್ಯಾಂಕ್‍ಗಳಲ್ಲಿ ಸಾಮಾನ್ಯವಾಗಿ ಹರಿದ ಮತ್ತು ವಿರೂಪ ಗೊಂಡ ನೋಟುಗಳನ್ನು ತಿರಸ್ಕರಿಸುವುದನ್ನು ನಾವು ನೋಡಿದ್ದೇವೆ. ಆದರೆ ಹರಿದ ಮತ್ತು ಕಪ್ಪು ಮಸಿ ಮೆತ್ತ್ತಿದ 2 ಸಾವಿರ ರೂ. ಮುಖ ಬೆಲೆಯ ನೋಟುಗಳು ಬ್ಯಾಂಕ್ ಎಟಿಎಂ ನಿಂದಲೇ ಗ್ರಾಹಕರೊಬ್ಬರ ಕೈಗೆ ಬಂದಿ ರುವ ಘಟನೆ ಕೆ.ಆರ್.ಪೇಟೆ ಪಟ್ಟಣದ ವಿಜಯಾ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ.
ಗ್ರಾಹಕರಾದ ಸುನೀಲ್ ಹಾಗೂ ಭರತ್ ಎಂಬುವವರು ಎಟಿಎಂನಲ್ಲಿ ಹಣ ಡ್ರಾ ಮಾಡಿ ದಾಗ ಈ ಘಟನೆ ಬೆಳಕಿಗೆ ಬಂದಿದೆ.

ಪ್ರಕರಣದ ಹಿನ್ನೆಲೆ: ಗ್ರಾಹಕರಾದ ಸುನೀಲ್ ಹಾಗೂ ಭರತ್ ಎಟಿಎಂನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಹಣ ಡ್ರಾ ಮಾಡುವ ವೇಳೆ 2 ಸಾವಿರ ಮುಖಬೆಲೆಯ ಹರಿದ ಹಾಗೂ ಕಪ್ಪು ಮಸಿ ಮೆತ್ತಿದ ನೋಟು ಗಳನ್ನು ನೋಡಿ ಇಬ್ಬರು ಕಕ್ಕಾಬಿಕ್ಕಿಯಾಗಿ ದ್ದಾರೆ. ನೋಟ್ ಬದಲಿಸಿ ಕೊಡುವಂತೆ ಬ್ಯಾಂಕ್ ಸಿಬ್ಬಂದಿ ಜೊತೆ ಮಾತನಾಡಿದ್ದಾರೆ. ಆದರೆ ಬ್ಯಾಂಕ್ ಸಿಬ್ಬಂದಿ ಇದಕ್ಕೆ ನಿರಾಕರಿ ಸಿದ್ದಾರೆ. ಆಗ ಗ್ರಾಹಕರಾದ ಸುನೀಲ್ ಹಾಗೂ ಭರತ್ ಮತ್ತು ಬ್ಯಾಂಕ್ ಸಿಬ್ಬಂದಿಯ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬ್ಯಾಂಕ್ ಸಿಬ್ಬಂದಿ ನೀವು ನಮ್ಮ ಬ್ಯಾಂಕ್‍ನ ಎಟಿಎಂ ನಿಂದ ಹಣ ಡ್ರಾ ಮಾಡಿದ್ದರೆ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿರುತ್ತದೆ. ಅದನ್ನು ಪರಿ ಶೀಲನೆ ಮಾಡಿ ಬ್ಯಾಂಕ್‍ನ ಹಿರಿಯ ಅಧಿಕಾರಿ ಗಳ ಗಮನಕ್ಕೆ ತರುತ್ತೇವೆ. ನಂತರ ಹಣ ಬದಲಾವಣೆ ಮಾಡಿಕೊಡುತ್ತೇವೆ. ಅಲ್ಲದೇ ಈಗ ಬ್ಯಾಂಕ್‍ನಲ್ಲಿ ಹಣ ಇಲ್ಲ ಎಂದು ಸಿಬ್ಬಂದಿ ಗ್ರಾಹಕರ ಮನಸನ್ನು ಒಲಿಸಲು ಮುಂದಾಗಿ ದ್ದಾರೆ. ಈ ಎಲ್ಲಾ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ವೇಳೆ ಚಿತ್ರೀಕರಣ ಮಾಡು ತ್ತಿದ್ದ ಸ್ಥಳೀಯ ಪತ್ರಕರ್ತರಿಗೂ ಬ್ಯಾಂಕ್ ಸಿಬ್ಬಂದಿ ಆವಾಜ್ ಹಾಕಿದ್ದಾರೆ. ಅಲ್ಲದೇ ಸ್ಥಳೀಯ ಪತ್ರಕರ್ತರೊಬ್ಬರು ವಿಡಿಯೋ ಮಾಡಿ ಕೊಂಡಿದ್ದಾರೆ.

ಗ್ರಾಹಕರು ನಾವು ನಿಮ್ಮ ಜೊತೆ ಜಗಳಕ್ಕೆ ಬಂದಿಲ್ಲ. ನಮ್ಮ ಹಣವನ್ನು ನಮಗೆ ಬದಲಿಸಿ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. ಈ ಎಲ್ಲಾ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದೆ.

ಹಣ ಡ್ರಾ ಮಾಡಿದಾಗ 2 ಸಾವಿರ ರೂ. ಮುಖಬೆಲೆಯ ಹರಿದ ಹಾಗೂ ನೀಲಿ, ಕಪ್ಪು ಮಸಿ ಹತ್ತಿದ ನೋಟುಗಳು ಪತ್ತೆಯಾಗಿ ರುವುದನ್ನು ಗ್ರಾಹಕರು ಮೊಬೈಲ್‍ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

Translate »