ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹ
ಹಾಸನ

ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಆಗ್ರಹ

June 30, 2018

ಹಾಸನ: ಸ್ಥಳೀಯರಿಗೆ ಉದ್ಯೋಗ ದಲ್ಲಿ ಮೊದಲ ಆದ್ಯತೆ ನೀಡುವಂತೆ ಆಗ್ರಹಿಸಿ ಬಿಯರ್ ಕಂಪನಿ ಎದುರು ಜೆಡಿಎಸ್ ನೇತೃತ್ವ ದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಹೊರ ವಲಯ ಹೊಳೆನರ ಸೀಪುರ ರಸ್ತೆಯಲ್ಲಿರುವ ವುಡ್ಪೇಕರ್ ಡಿಸ್ಟಲರೀಸ್ ಮತ್ತು ಬ್ರೇವರೀನ್ ಪ್ರೈವೇಟ್ ಲಿಮಿಟೆಡ್‍ನಿಂದ ನಿರ್ಮಿಸಿರುವ ಬಿಯರ್ ಕಂಪನಿಯಲ್ಲಿ ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳದೆ, ಹೊರ ರಾಜ್ಯ ಗಳಿಂದ ಕಾರ್ಮಿಕರನ್ನು ಕರೆಯಿಸಿ ದುಡಿಸಿ ಕೊಳ್ಳಲಾಗುತ್ತಿದೆ ಎಂದು ಸ್ಥಳೀಯರು ದೂರಿದರು. ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿ, ಕೌಶಿಕ ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಕಾರ್ಖಾನೆ ತೆರೆದಿದ್ದು, ಸ್ಥಳೀಯ ಗ್ರಾಮಗಳ ಅನೇಕ ಯುವಕ-ಯುವತಿಯರು ಕೆಲಸ ಮಾಡುವ ನೈಪುಣ್ಯತೆ ಹಾಗೂ ಸಾಮಥ್ರ್ಯ ಹೊಂದಿ ದ್ದರೂ ನಿರುದ್ಯೋಗಿಗಳಾದ ಸ್ಥಳೀಯರಿಗೆ ಯಾವುದೇ ರೀತಿಯ ಆದ್ಯತೆ ನೀಡದೆ ಬಿಯರ್ ಕಂಪನಿ ನಿರ್ಲಕ್ಷ್ಯ ತೋರಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಈ ಬಗ್ಗೆ ಪ್ರಶ್ನೆ ಮಾಡಿದರೆ ಸಂಬಂಧ ಪಟ್ಟವರು ಉಡಾಫೆ ಉತ್ತರ ನೀಡುತ್ತಿ ದ್ದಾರೆ. ಕೂಡಲೇ ಸ್ಥಳೀಯರನ್ನು ಗಣನೆಗೆ ತೆಗೆದುಕೊಂಡು ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿ ಕೊಳ್ಳಬೇಕು. ಇಲ್ಲವಾದರೇ ತÀಮ್ಮ ಪ್ರತಿ ಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿ ದರು. ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಅಗಿಲೆ ಗ್ರಾಮದ ನವೀನ್, ಕಾರ್ಲೇ ಇಂದ್ರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಚಂದ್ರ, ರಂಗಶೆಟ್ಟಿ, ಸಣ್ಣಸ್ವಾಮಿ, ವಕೀಲರಾದ ಶೇಷಗಿರಿ ಇತರರಿದ್ದರು.

Translate »