ಟಿಪ್ಪು ನೆನಪಿಸುವ ಕುಶಾಲನಗರ ಹೆಸರು ಬದಲಾವಣೆಗೆ ಸಿಎನ್‍ಸಿ ಆಗ್ರಹ
ಕೊಡಗು

ಟಿಪ್ಪು ನೆನಪಿಸುವ ಕುಶಾಲನಗರ ಹೆಸರು ಬದಲಾವಣೆಗೆ ಸಿಎನ್‍ಸಿ ಆಗ್ರಹ

June 30, 2018

ಮಡಿಕೇರಿ:  ‘ಟಿಪ್ಪು’ ಜನಿ ಸಿದ ಸುವಾರ್ತೆ ದೊರೆತ ಹಿನ್ನೆಲೆಯಲ್ಲಿ ಕಾವೇರಿ ನದಿತಟದಲ್ಲಿರುವ ದಂಡಿನಪೇಟೆ ಯಲ್ಲಿ ತನ್ನ ಸೇನಾ ತುಕ್ಕಡಿಯೊಂದಿಗೆ ಬೀಡು ಬಿಟ್ಟಿದ್ದ ‘ಹೈದರಾಲಿ’, ಸಂಭ್ರಮ ದಿಂದ ಆ ಪ್ರದೇಶವನ್ನು ಕುಶಾಲನಗರ ವೆಂದು ನಾಮಕರಣ ಮಾಡಿದ್ದು, “ಕುಷ್” ಎಂದರೆ ಪರ್ಷಿಯನ್ ಭಾಷೆಯಲ್ಲಿ ಸಂಭ್ರಮ ಎಂದರ್ಥ ಎಂದು ಅಭಿಪ್ರಾಯ ಪಟ್ಟಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ, ಕುಶಾಲನಗರ ಪಟ್ಟಣದ ಹೆಸ ರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ.

ಈ ಸಂಬಂಧ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ದೇವಟ್‍ಪರಂಬುವಿನ ನರಮೇಧಕ್ಕೆ ಕಾರಣನಾದ ಟಿಪ್ಪು ಸುಲ್ತಾನ ನನ್ನು ನೆನಪಿಸುವ, ‘ಕುಶಾಲನಗರ’ ಪಟ್ಟ ಣದ ಹೆಸರನ್ನು ತೆಗೆದುಹಾಕಿ, ಫ್ರೇಜರ್ ಪೇಟೆ ಅಥವಾ ಸಮರವೀರ ಕುಲ್ಲೇಟಿರ ಪೊನ್ನಣ್ಣನವರ ಹೆಸರನ್ನು ಮರುನಾಮ ಕರಣ ಮಾಡಬೇಕೆಂದು ಆಗ್ರಹಿಸಿದರು.

ಕೊಡಗಿನ ರಾಜರ ಆಳ್ವಿಕೆಗೆ ಕೊನೆ ಹಾಡಿ, ಕೊಡವ ಬುಡಕಟ್ಟು ಕುಲದ ಆತ್ಮ ಗೌರವವನ್ನು ಕಾಪಾಡಿದ ಹಾಗೂ 1835 ರಲ್ಲಿ ರಾಷ್ಟ್ರದಲ್ಲೆ ಪ್ರಥಮ ಬಾರಿಗೆ ಕೊಡ ಗಿನಲ್ಲಿ ಕೊಡವರ ಧಾರ್ಮಿಕ ಭಾವನೆ ಗಳಿಗೆ ಪೂರಕವಾದ ಗೋವುಗಳ ವಧೆ ಯನ್ನು ನಿಷೇಧಿಸುವ ಕಾಯ್ದೆಯನ್ನು ಜಾರಿ ಮಾಡಿದ ಜೆ.ಎಸ್.ಫ್ರೇಜರ್ ಅವರ ಹೆಸರನ್ನು ಈ ಪ್ರದೇಶಕ್ಕೆ ಇಡಲಾಗಿತ್ತು. ಆದರೆ, 1956 ರಲ್ಲಿ ವಿಶಾಲ ಮೈಸೂರು ಕರ್ನಾಟಕದೊಂದಿಗೆ ವಿಲೀನಗೊಂಡ ಬಳಿಕ ಫ್ರೇಜರ್‍ಪೇಟೆ ಹೆಸರನ್ನು ಕುಶಾಲ ನಗರವೆಂದು ಬದಲಾಯಿಸಲಾಯಿತೆಂದು ಬೇಸರ ವ್ಯಕ್ತಪಡಿಸಿದರು.

ಟಿಪ್ಪುವನ್ನು ನೆನಪಿಸುವ ಕುಶಾಲನಗರ ಹೆಸರಿಗೆ ಬದಲಾಗಿ ಬ್ರಿಟಿಷ್ ಅಧಿಕಾರಿ ಫ್ರೇಜರ್ ಹೆಸರನ್ನು ಇಡುವುದು ಒಪ್ಪಿತ ವಾಗದಿದ್ದಲ್ಲಿ, ಕೊಡಗಿನ ಮೇಲೆ ನಿರಂತರ ದಾಳಿ ನಡೆಸಿದ್ದ ಹೈದರ್ ಮತ್ತು ಟಿಪ್ಪು ವನ್ನು ತಮ್ಮ ಸೈನ್ಯದ ಮೂಲಕ ಹಿಮ್ಮೆಟ್ಟಿ ಸಿದ್ದ, ಅಂದಿನ ಕೊಡಗು ರಾಜ್ಯದ ದಂಡ ನಾಯಕ ಕುಲ್ಲೇಟಿರ ಪೊನ್ನಣ್ಣ ಅವರ ಹೆಸರನ್ನು ಮರು ನಾಮಕರಣ ಮಾಡು ವಂತೆ ನಾಚಪ್ಪ ಒತ್ತಾಯಿಸಿದರು. ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿನ ಔರಂಗ ಜೇಬ್ ರಸ್ತೆಯನ್ನು ಮಾರ್ಪಡಿಸಿ ಡಾ. ಅಬ್ದುಲ್ ಕಲಾಂ ರಸ್ತೆಯೆಂದು ಹಾಗೂ ಅಕ್ಬರ್ ರಸ್ತೆಯನ್ನು ಬದಲಿಸಿ ಮಹಾ ರಾಣಾ ಪ್ರತಾಪ ರಸ್ತೆಯೆಂದು ಪ್ರಧಾನಿ ನರೇಂದ್ರಮೋದಿ ಅವರ ನೇತೃತ್ವದ ಸರ್ಕಾರ ಮಾರ್ಪಡಿಸಿರುವುದು ಸ್ವಾಗ ತಾರ್ಹ. ಅದೇ ರೀತಿ ಕೊಡಗಿನಲ್ಲಿ ಟಿಪ್ಪು ವಿನ ದುಷ್ಕೃತ್ಯಗಳನ್ನು ನೆನಪಿಸುವ ಕುಶಾಲ ನಗರ ಹೆಸರನ್ನು ತೆಗೆದು ಮರು ನಾಮಕರಣ ಮಾಡುವುದು ಸೂಕ್ತವೆಂದು ತಿಳಿಸಿದರು.

ತಮ್ಮ ಬೇಡಿಕೆಯ ಮನವಿ ಪತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರ ಪತಿ ರಾಮನಾಥ ಕೋವಿಂದ್ ಸೇರಿ ದಂತೆ ಹಲವು ಪ್ರಮುಖರಿಗೆ ಕಳುಹಿಸಿ ಕೊಟ್ಟಿರುವುದಾಗಿ ನಾಚಪ್ಪ ತಿಳಿಸಿದರು. ಕುಶಾಲನಗರ ಪಟ್ಟಣದ ಹೆಸರು ಬದ ಲಾವಣೆ ಆಗದೇ ಇದ್ದಲ್ಲಿ ಶಾಂತಿ ಯುತ ಹೋರಾಟವನ್ನು ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು, ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸುವ ಸಂದರ್ಭ ಕಲಿ ಯಂಡ ಪ್ರಕಾಶ್, ಮೂಕೊಂಡ ದಿಲೀಪ್, ಮಂದಪಂಡ ಮನೋಜ್, ಕಿರಿಯಮಾಡ ಶರೀನ್, ಚಂಬಾಂಡ ಜನತ್ ಹಾಗೂ ಅರೆಯಡ ಗಿರೀಶ್ ಉಪಸ್ಥಿತರಿದ್ದರು.

Translate »