Tag: Kodagu

ಗುಡ್ಡೆಹೊಸೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ
ಕೊಡಗು

ಗುಡ್ಡೆಹೊಸೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

January 31, 2019

ಗುಡ್ಡೆಹೊಸೂರು: ಇಲ್ಲಿನ ಬೊಳ್ಳ್ಳೂರು ಶ್ರೀಬಸವೇಶ್ವರ ದೇವ ಸ್ಥಾನದಲ್ಲಿ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮಿಗಳ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸ್ವಾಮಿಗಳ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲಾಯಿತು. ಗ್ರಾಮದ ಅಧಿಕ ಮಂದಿ ಭಾಗವಹಿಸಿದ್ದರು. ಮಧ್ಯಾಹ್ನ ಸರ್ವರಿಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಗ್ರಾಮಸ್ಥರಾದ ಬಿ.ಸಿ. ಮಲ್ಲಿಕಾರ್ಜನ, ಶುಭಶೇಖರ್, ಬಿ.ಎಸ್.ದಿನೇಶ್, ಬಿ.ಎಸ್.ಗುರುಸ್ವಾಮಿ, ಪಾಪಣ್ಣ, ಗಿರೀಶ್, ಮಂಡೆಪಂಡಸೋಮಯ್ಯ(ರಘು), ಕಡ್ಯದ ಬಾಲ ಕೃಷ್ಣ, ಭರತ್, ಲಿಂಗರಾಜ್, ಬಿ.ಜಿ.ಸುರೇಶ್ ಇತರರಿದ್ದರು.

ವಿರಾಜಪೇಟೆ ಅರಮೇರಿ ಬಳಿ ಮಹಿಳೆ ಶವ ಪತ್ತೆ: ಪ್ರಕರಣ ಆರೋಪಿ ಪತಿ ಉಸ್ಮಾನ್ ಅಲಿ ಬಂಧನ
ಕೊಡಗು

ವಿರಾಜಪೇಟೆ ಅರಮೇರಿ ಬಳಿ ಮಹಿಳೆ ಶವ ಪತ್ತೆ: ಪ್ರಕರಣ ಆರೋಪಿ ಪತಿ ಉಸ್ಮಾನ್ ಅಲಿ ಬಂಧನ

January 31, 2019

ಮಡಿಕೇರಿ: ವಿರಾಜಪೇಟೆ ಅರ ಮೇರಿ ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆಯ ಮೃತದೇಹ ಪ್ರಕರಣ ಬೆಳಕಿಗೆ ಬಂದ 3 ದಿನದಲ್ಲಿ ಕೊಲೆ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ. ಅರ ಮೇರಿ ಬಳಿಯ ಮಲ್ಲಮಟ್ಟಿ ಗ್ರಾಮದಲ್ಲಿ ಕೊಲೆಯಾದ ಮಹಿಳೆಯನ್ನು ಅಸ್ಸಾಂ ಮೂಲದ ಮರ್ಜೀನಾ ಖಾತುನ್(20) ಎಂದು ಗುರುತಿಸಲಾಗಿದ್ದು, ಮೃತೆಯ ಪತಿ ಅಸ್ಸಾಂ ಮೂಲದ ಉಸ್ಮಾನ್ ಅಲಿ (40) ಎಂಬಾತನೇ ಕೊಲೆಗೈದ ಆರೋಪಿಯಾಗಿದ್ದಾನೆ. ಘಟನೆ ವಿವರ: ಅಸ್ಸಾಂ ರಾಜ್ಯದ ಬಾಯ್ಬೆ ರಿಬೀಲ್ ಗ್ರಾಮದ ದೋರಾಂಗ್ ಜಿಲ್ಲೆಯ…

ಕೊಡಗಿಗೆ ನೂತನ ಜಿಲ್ಲಾಧಿಕಾರಿ ನೇಮಕ
ಕೊಡಗು

ಕೊಡಗಿಗೆ ನೂತನ ಜಿಲ್ಲಾಧಿಕಾರಿ ನೇಮಕ

January 31, 2019

ಮಡಿಕೇರಿ: ಕೊಡಗಿಗೆ ನೂತನ ಜಿಲ್ಲಾಧಿಕಾರಿ ಯನ್ನಾಗಿ ಶ್ರೀಮತಿ ಅನ್ನೀಸ್ ಕಣ್ಮಣಿ ಜಾಯ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಅನ್ನೀಸ್ ಕಣ್ಮಣಿ ಅವರು ತುಮಕೂರು ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಡಗಿನ ಜಿಲ್ಲಾಧಿಕಾ ರಿಯಾಗಿದ್ದ ಶ್ರೀವಿದ್ಯಾ ಅವರು 2 ತಿಂಗಳ ರಜೆ ತೆರಳಿ ದ್ದರಿಂದ ಸಿಇಓ ಆಗಿದ್ದ ಕೆ.ಲಕ್ಷ್ಮೀಪ್ರಿಯ ಅವರು ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ವೇಳೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿ ನೊಂದವರಿಗೆ ನೆರವಾಗಿದ್ದರು. ಇದರಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಒಳಗಾಗಿದ್ದರು.

ಕುಶಾಲನಗರದಲ್ಲಿ ಕೇಂದ್ರ ಸಚಿವ ಹೆಗಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಕೊಡಗು

ಕುಶಾಲನಗರದಲ್ಲಿ ಕೇಂದ್ರ ಸಚಿವ ಹೆಗಡೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

January 31, 2019

ಕುಶಾಲನಗರ: ಜವಬ್ದಾರಿ ಯುತ ಸ್ಥಾನದಲ್ಲಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ವಿರೋಧಿತನ ಪ್ರದರ್ಶಿಸಿದ್ದು, ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡ ಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯ ಕರ್ತರು ಪಟ್ಟಣದ ಬೈಚನಹಳ್ಳಿ ಮಾರಮ್ಮ ದೇವಸ್ಥಾನದಿಂದ ಕಾರ್ಯಪ್ಪ ವೃತ್ತದವ ರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕ್ರಮ ವೊಂದರ ಪ್ರಚೋದನಕಾರಿ ಭಾಷಣ ಮಾಡುತ್ತ…

ವಿರಾಜಪೇಟೆ ಗಾಂಧಿನಗರದ ಕಾಂಕ್ರೀಟ್ ರಸ್ತೆ ಸಂಚಾರ ಮುಕ್ತ
ಕೊಡಗು

ವಿರಾಜಪೇಟೆ ಗಾಂಧಿನಗರದ ಕಾಂಕ್ರೀಟ್ ರಸ್ತೆ ಸಂಚಾರ ಮುಕ್ತ

January 31, 2019

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರ ನಗರೋತ್ಥಾನ ಯೋಜನೆಯಡಿಯಲ್ಲಿ 2017-18ನೇ ಸಾಲಿಗೆ ಬಂದ ರೂ. 1.70 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮ ಗಾರಿಗಳನ್ನು ಮಾಡಲಾಗುತ್ತಿದೆ ಎಂದು ಸ್ಥಳೀಯ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಪಟ್ಟಣದ ಗಾಂಧಿನಗರದ ಕರ್ನಲ್ ಓಣಿಗೆ ರೂ,13 ಲಕ್ಷದಲ್ಲಿ ನಡೆದ ಕಾಂಕ್ರೀಟ್ ರಸ್ತೆಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ಕೆ.ಜಿ.ಬೋಪಯ್ಯ ಬಳಿಕ ಮಾತನಾಡಿ, ವಿರಾಜಪೇಟೆ ಪಟ್ಟಣದಲ್ಲಿ ಈಗಾಗಲೇ ಎರಡು ರಸ್ತೆಗಳ ಕಾಮಗಾರಿ ಮುಗಿದಿದ್ದು, ಇನ್ನು ಉಳಿದ ಕಾಮಗಾರಿಗಳನ್ನು…

ಅಧಿಕಾರಿ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ
ಕೊಡಗು

ಅಧಿಕಾರಿ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

January 31, 2019

ವಿರಾಜಪೇಟೆ: ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಭೂಮಾಪನ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಸಂಶುದ್ಧಿನ್ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಸಾರ್ವಜನಿಕ ಹಿತ ರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿತು. ಕಚೇರಿಯಲ್ಲಿ ಕೃಷಿಕರ ಕಡತಗಳನ್ನು ಸರಿಯಾಗಿ ವಿಲೇವಾರಿ ಮಾಡದೆ ಉಡಾಫೆ ಯಿಂದ ವರ್ತಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭ ಸಮಿತಿಯ ಅಧ್ಯಕ್ಷ ಕೆ.ಎಂ.ಕುಶಾಲಪ್ಪ ಮಾತನಾಡಿ, ತಾಲೂಕು ಕಚೇರಿಯಲ್ಲಿ ಎ.ಡಿ.ಎಲ್.ಆರ್.ಅಧಿಕಾರಿ ಸಂಶುದ್ಧಿನ್ ಅವರು ರೈತರುಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಹೇಳಿದರು ಅವರಿಗೆ ಕೇಳುವಷ್ಟು ತಾಳ್ಮೆಯೂ ಇಲ್ಲ, ದೂರದ…

ದಾರಿ ಯಾವುದಯ್ಯ ಅಬ್ಬಿಫಾಲ್ಸ್‍ಗೆ…? ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪುತ್ತಿರುವ ಪ್ರವಾಸಿಗರು
ಕೊಡಗು

ದಾರಿ ಯಾವುದಯ್ಯ ಅಬ್ಬಿಫಾಲ್ಸ್‍ಗೆ…? ಗೂಗಲ್ ಮ್ಯಾಪ್ ನಂಬಿ ದಾರಿ ತಪ್ಪುತ್ತಿರುವ ಪ್ರವಾಸಿಗರು

January 29, 2019

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಹಲವು ಗ್ರಾಮಗಳು ಭೌಗೋಳಿಕವಾಗಿ ಕಣ್ಮರೆಯಾಗಿವೆ. ಬೆಟ್ಟ ಶ್ರೇಣಿಗಳು ಕುಸಿದು ನದಿಗಳು ಹರಿಯುವ ದಿಕ್ಕನ್ನೇ ಬದಲಿಸಿವೆ. ಬೆಟ್ಟಗಳಿಂದ ತೊರೆಯಾಗಿ ಹರಿಯುತ್ತಿದ್ದ ಜಲಧಾರೆಗಳು ಭೂ ಕುಸಿತಕ್ಕೆ ಸಿಲುಕಿ ಜಲಪಾತಗಳಾಗಿ ಮಾರ್ಪಟ್ಟಿವೆ. ಇವು ಪ್ರಕೃತಿ ವಿಕೋಪಕ್ಕೆ ಸಿಲುಕಿ ತತ್ತರಿಸಿದ ಕೆಲವು ಗ್ರಾಮಗಳ ವಾಸ್ತವ ಸ್ಥಿತಿ. ಆದರೆ ಮಡಿಕೇರಿಯಿಂದ 18ಕಿ.ಮೀ. ದೂರದಲ್ಲಿರುವ ಮರಗೋಡು ಹೊಸ್ಕೇರಿ ಗ್ರಾಮದಲ್ಲಿ ಯಾವುದೇ ಪ್ರಕೃತಿ ವಿಕೋಪ ಘಟಿಸಿಲ್ಲ. ಯಾವುದೇ ಬೆಟ್ಟ ಶ್ರೇಣಿಗಳೂ ಕುಸಿದು ಬಿದ್ದಿಲ್ಲ. ಹೀಗಿದ್ದರೂ…

ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾರ್ಗ ಬದಲು ಆರೋಪ ತಿತಿಮತಿ ಬಳಿ ರೈತ ಸಂಘ ದಿಢೀರ್ ಪ್ರತಿಭಟನೆ
ಕೊಡಗು

ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಮಾರ್ಗ ಬದಲು ಆರೋಪ ತಿತಿಮತಿ ಬಳಿ ರೈತ ಸಂಘ ದಿಢೀರ್ ಪ್ರತಿಭಟನೆ

January 29, 2019

ಗೋಣಿಕೊಪ್ಪಲು: ತಿತಿಮತಿ ಸುತ್ತ ಮುತ್ತ ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿ ಕೇಡ್ ಅಳವಡಿಕೆಯಲ್ಲಿ ಮಾರ್ಗ ಬದಲಾ ಯಿಸಿರುವ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ತಿತಿಮತಿಯ ಜಂಗಲಾಡಿಯ ಅರಣ್ಯದಂಚಿನಲ್ಲಿ ಪ್ರತಿಭಟನೆ ನಡೆಸಿದರು. ತಿತಿಮತಿ ಭಾಗದ ಚಾಮುಂಡಿ ದೇವ ಸ್ಥಾನದಿಂದ ಶ್ರೀರಾಮನ ಕಟ್ಟೆಗಾಗಿ ಜಂಗ ಲಾಡಿ ಕಾಲೋನಿ ಮುಖಾಂತರ ತಿತಿಮತಿ ಕೋಣನಕಟ್ಟೆ ಮುಖ್ಯ ರಸ್ತೆವರೆಗೆ ವನ್ಯ ಜೀವಿಗಳು ಸಮೀಪದ ಗ್ರಾಮಕ್ಕೆ ಬಾರ ದಂತೆ ರೈಲ್ವೇ ಬ್ಯಾರಿಕೇಡ್ ಅಳವಡಿಸುವಂತೆ ಇತ್ತೀಚೆಗೆ ತಿತಿಮತಿ…

ಧರೆಗುರುಳಿದ ಕೋಟೆ ಕಟ್ಟಡದ ಹೆಂಚುಗಳು
ಕೊಡಗು

ಧರೆಗುರುಳಿದ ಕೋಟೆ ಕಟ್ಟಡದ ಹೆಂಚುಗಳು

January 29, 2019

ಮಡಿಕೇರಿ: ಅರಸರ ಆಳ್ವಿಕೆಯ ಕುರುಹು ಆಗಿ ಉಳಿದಿರುವ ಮಡಿಕೇರಿ ಕೋಟೆಯ ಕಟ್ಟಡಗಳು ಮುರಿದು ಬೀಳುತ್ತಿದೆ. ಈ ಬಾರಿಯ ಮಳೆಗಾಲದಲ್ಲಿ ಸುರಿದ ಅತಿಯಾದ ಮಳೆ ಮತ್ತು ಬಿರುಗಾಳಿಗೆ ಕೋಟೆ ವಿಧಾನ ಸಭಾಂಗಣದ ಮೇಲ್ಚಾವಣಿಯ ಹೆಂಚುಗಳು ಹಾರಿಹೋಗಿದ್ದು, ಅಳಿದು ಉಳಿದಿರುವ ಸುಮಾರು 3 ಸಾವಿರಕ್ಕೂ ಹೆಚ್ಚು ಹೆಂಚುಗಳು ಇಂದು ಮಧ್ಯಾಹ್ನ 4 ಗಂಟೆಯ ಸಮಯದಲ್ಲಿ ಭಾರೀ ಸದ್ದಿ ನೊಂದಿಗೆ ಧರೆಗುರುಳಿ ಚೂರು ಚೂರಾಗಿವೆ. ಹೆಂಚುಗಳು ಬಿದ್ದ ಸದ್ದಿಗೆ ಕೋಟೆ ಒಳಗೆ ಕರ್ತವ್ಯ ನಿರತರಾಗಿದ್ದ ವಿವಿಧ ಇಲಾಖೆಗಳ ನೌಕರರು ಮತ್ತು ಕಟ್ಟಡದ…

ಚೆಂಬು ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ
ಕೊಡಗು

ಚೆಂಬು ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ

January 29, 2019

ಮಡಿಕೇರಿ: ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 32.37 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಉದ್ಘಾಟಿಸಿದರು. ನಂತರ ಮಾತನಾಡಿದ ಸಂಸದ ಪ್ರತಾಪ ಸಿಂಹ, ಶಿಕ್ಷಣ ಎಲ್ಲಾ ಆಸ್ತಿಗಳಿಗಿಂತಲೂ ಮಿಗಿಲು. ಅದನ್ನು ಯಾರು ಕದಿಯಲು ಸಾಧ್ಯವಿಲ್ಲ ಎಂದು ಹೇಳಿದರು. ನಮ್ಮೆಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿ ಹಾರ. ತಮ್ಮ ಸ್ವಂತ ಬದುಕಿನ ಅನುಭವ ಹಂಚಿಕೊಂಡ ಪ್ರತಾಪ್ ಸಿಂಹ, ಸರಕಾರಿ ಶಾಲೆಯಲ್ಲಿಯೇ ಓದಿದೆ. ಹಾಗೆಯೇ ರಜೆ ದಿನಗಳಲ್ಲಿ…

1 36 37 38 39 40 84
Translate »