ಚೆಂಬು ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ
ಕೊಡಗು

ಚೆಂಬು ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ಉದ್ಘಾಟನೆ

January 29, 2019

ಮಡಿಕೇರಿ: ಚೆಂಬು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ 32.37 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ನೂತನ ಕಟ್ಟಡವನ್ನು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಉದ್ಘಾಟಿಸಿದರು.
ನಂತರ ಮಾತನಾಡಿದ ಸಂಸದ ಪ್ರತಾಪ ಸಿಂಹ, ಶಿಕ್ಷಣ ಎಲ್ಲಾ ಆಸ್ತಿಗಳಿಗಿಂತಲೂ ಮಿಗಿಲು. ಅದನ್ನು ಯಾರು ಕದಿಯಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮೆಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿ ಹಾರ. ತಮ್ಮ ಸ್ವಂತ ಬದುಕಿನ ಅನುಭವ ಹಂಚಿಕೊಂಡ ಪ್ರತಾಪ್ ಸಿಂಹ, ಸರಕಾರಿ ಶಾಲೆಯಲ್ಲಿಯೇ ಓದಿದೆ. ಹಾಗೆಯೇ ರಜೆ ದಿನಗಳಲ್ಲಿ ಹಾಲು ಮಾರುವ ಮತ್ತು ದನ ಮೇಯಿಸುವುದನ್ನು ಮಾಡುತ್ತಿದ್ದೆ ಎಂದು ತಮ್ಮ ಬಾಲ್ಯದ ನೆನಪಿನ ಬುತ್ತಿ ಬಿಚ್ಚಿಟ್ಟರು.

ಉತ್ತಮ ಶಿಕ್ಷಣದಿಂದ ಮಾತ್ರ ರಾಷ್ಟ್ರ ವನ್ನು ನಿರ್ಮಿಸಲು ಸಾಧ್ಯ ಇದಕ್ಕೆ ಶಿಕ್ಷಕರ ಸಹಕಾರ ತುಂಬಾ ಅಗತ್ಯ. ಶಿಕ್ಷಕರನ್ನು ವಿದ್ಯಾ ರ್ಥಿಗಳು ಗೌರವಿಸಬೇಕು. ಸರ್ಕಾರದ ಯೋಜ ನೆಗಳನ್ನು ಸರಿಯಾಗಿ ಬಳಸಿಕೊಂಡು ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಸಾಧನೆ ಮಾಡಿ ರುವ ಈ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ಮುಂತಾದವರು ಸರ್ಕಾರಿ ಶಾಲೆ ಯಲ್ಲಿಯೇ ಓದಿ ಸಾಧನೆ ಮಾಡಿರುವುದು, ಹಾಗೆಯೇ ನೀವುಗಳು ಆಗಬೇಕು ಎಂದು ಹೇಳುವ ಮೂಲಕ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ತಾಪಂ ಸದಸ್ಯರಾದ ನಾಗೇಶ್ ಕುಂದ ಲ್ಪಾಡಿ, ದಿನೇಶ್ ಕುಮಾರ್ ಯು.ಕೆ. ಮಾತ ನಾಡಿದರು. ಅಧ್ಯಕ್ಷತೆಯನ್ನು ಬೋಪಯ್ಯ ಕೆ.ಜಿ. ವಹಿಸಿದ್ದರು.
ಚೆಂಬು ಗ್ರಾಪಂ ಉಪಾಧ್ಯಕ್ಷರಾದ ವನಿತಾ ವಿಜಯ, ಸದಸ್ಯರಾದ ರೇಖಾ ಬಿ.ಸಿ, ಚೆಂಬು ಸರ್ಕಾರಿ ಪ್ರೌಢಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ತೇಜೇಶ್ವರ ಪಿ.ಜಿ, ಮಡಿಕೇರಿ ಎಪಿಎಂಸಿ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಉಪಾಧ್ಯಾಯ, ಆರ್‍ಎಂಎಸ್‍ಎ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಬೆಟ್ಟನಾಯಕ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಟಿ.ಎನ್ ಹಾಗೂ ಚೆಂಬು ಗ್ರಾಪಂ ಪಿಡಿಓ ಎಸ್.ಎಸ್ ಹೇಮಂತ್, ಸಂಪಾಜೆ ಲಯನ್ಸ್ ಕ್ಲಬ್ ಹಾಗೂ ಎಸ್‍ಡಿ ಎಂಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ದೇಜಮ್ಮ ಅವರು ಪ್ರಾಸ್ತವಿಕ ನುಡಿಯೊಂದಿಗೆ ಸರ್ವರನ್ನು ಸ್ವಾಗತಿಸಿದರು. ಮಮತಾ ವಿ. ನಿರೂಪಿಸಿದರು, ಜ್ಯೋತಿ ಶೆಟ್ಟಿ ಕೆ. ವಂದಿಸಿದರು.

Translate »