ದಕ್ಷ ಅಧಿಕಾರಿ ವಿರುದ್ಧ ಪ್ರತಿಭಟನೆ ಸಲ್ಲದು
ಕೊಡಗು

ದಕ್ಷ ಅಧಿಕಾರಿ ವಿರುದ್ಧ ಪ್ರತಿಭಟನೆ ಸಲ್ಲದು

January 29, 2019

ವಿರಾಜಪೇಟೆ: ಸಂಘಟನೆಯೊಂದರ ಹೆಸರಿನಲ್ಲಿ ಕೆಲವು ವ್ಯಕ್ತಿಗಳು ಒಬ್ಬ ದಕ್ಷ, ಪ್ರಾಮಾಣಿಕ ಅಧಿಕಾರಿ ವಿರುದ್ಧ ತಾಲೂಕು ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿರುವುದು ಖಂಡನೀಯ ಎಂದು ಜಾಗೃತ ನಾಗರಿಕರ ವೇದಿಕೆಯ ಸಂಚಾ ಲಕ ಕೆ.ಸಿ.ಶಬರೀಶ್ ಶೆಟ್ಟಿ ಹೇಳಿದರು.

ಜಾಗೃತ ನಾಗರಿಕರ ವೇದಿಕೆಯ ವತಿಯಿಂದ ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಬರೀಶ್‍ಶೆಟ್ಟಿ, ತಾಲೂಕು ಕಚೇರಿಯಲ್ಲಿ ಭೂಮಾಪನ ಸಹಾಯಕ ನಿರ್ದೇ ಶಕನಾಗಿ ಕಾರ್ಯನಿರ್ವಹಿಸುತ್ತಿರುವ ಸಂಶುದ್ಧಿನ್ ಉತ್ತಮ ದಕ್ಷ ಅಧಿಕಾರಿಯಾಗಿದ್ದು, ಅವರಿಗೆ ಸಾರ್ವಜನಿಕರು ತುಂಬಾ ಸಹಕಾರ ನೀಡುವ ಮೂಲಕ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಸಂಘಟನೆಯೊಂದರ ಹೆಸರು ಹೇಳಿಕೊಂಡು ಬಂದ ಕೆಲವರು ಅಧಿಕಾರಿಗಳಿಗೆ ಬೆದರಿಕೆ ಹಾಕುವುದು, ಕಿರುಕುಳ ನೀಡು ತ್ತಿದ್ದಾರೆ ಎಂದು ಆಪಾದಿಸಿದ್ದಾರೆ. ಎ.ಡಿ.ಎಲ್.ಆರ್. ಅಧಿಕಾರಿ ಸಂಶುದ್ಧಿನ್ ಅವರನ್ನು ಜಿಲ್ಲಾ ಆಡಳಿತ ಮತ್ತು ಸರಕಾರ ಮತ್ತೊ ಬ್ಬರ ಮಾತಿಗೆ ಮಣಿದು ಸಂಶುದ್ಧಿನ್ ಅವರನ್ನು ವರ್ಗಾವಣೆ ಮಾಡ ಬಾರದು. ರೈತರ ಹಿತಕಾಯುವ ಅಧಿಕಾರಿಗಳು ಮತ್ತು ಗ್ರಾಮೀಣ ಪ್ರದೇ ಶದ ಕೃಷಿಕರಿಗೆ ಸರಕಾರದ ಸೌಲಭ್ಯಗಳನ್ನು ಜನರಿಗೆ ಒದಗಿಸು ವಂತ ಅಧಿಕಾರಿಗಳು ತಾಲೂಕು ಕಛೇರಿಯಲ್ಲಿ ಅವಶ್ಯವಿದೆ ಎಂದರು.

ಜಾಗೃತ ನಾಗರಿಕ ವೇದಿಕೆಯ ಅಧ್ಯಕ್ಷ ಬಿ.ಬಿ.ನಾಗರಾಜು ಮಾತನಾಡಿ, ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಎ.ಡಿ.ಎಲ್.ಆರ್. ಅಧಿಕಾರಿ ಸಂಶುದ್ಧಿನ್ ಪ್ರಾಮಾಣಿಕ ಅಧಿಕಾರಿಯಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಕೆಲವರು ಈ ಅಧಿಕಾರಿಗೆ ಕಿರುಕುಳ ನೀಡುವುದು ಸರಿಯಲ್ಲ. ಸಾರ್ವಜನಿಕರು ಅಧಿಕಾರಿಗಳಿಂದ ಕೆಲಸ ಮಾಡಿಸಿ ಕೊಳ್ಳಬೇಕೇ ವಿನಃ ಬಂದ ಅಧಿಕಾರಿಗಳನೆಲ್ಲ ವರ್ಗಾವಣೆ ಮಾಡಿಸು ವುದು ಇವರ ದೊಡ್ಡತನವಲ್ಲ ಎಂದು ಜರಿದರು. ಗೋಷ್ಠಿಯಲ್ಲಿ ಜಾಗೃತ ವೇದಿಕೆಯ ಮಂಡೇಟಿರ ಅನಿಲ್ ಅಯ್ಯಪ್ಪ, ಪಟ್ಟಡ ರಂಜಿ ಪೂಣಚ್ಚ, ಕುಂಞÂರ ಸುನು ಸುಬ್ಬಯ್ಯ ಇತರರು ಉಪಸ್ಥಿತರಿದ್ದರು.

Translate »