ಸಿದ್ದಾಪುರ ಮಾರುಕಟ್ಟೆಯಲ್ಲಿ ಶೌಚಾಲಯವಿಲ್ಲದೆ ಪರದಾಟ
ಕೊಡಗು

ಸಿದ್ದಾಪುರ ಮಾರುಕಟ್ಟೆಯಲ್ಲಿ ಶೌಚಾಲಯವಿಲ್ಲದೆ ಪರದಾಟ

January 29, 2019

ಸಿದ್ದಾಪುರ: ಹೆಚ್ಚು ಆದಾಯ ಇರುವ ಸಿದ್ದಾಪುರ ಗ್ರಾಪಂ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪಂಚಾಯಿತಿ ಸಮೀಪದಲ್ಲಿಯೇ ಪ್ರತಿ ವಾರ ನಡೆಯುವ ಸಂತೆಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ವ್ಯಾಪಾರಿಗಳು, ಗ್ರಾಹಕರು ಆಗ ಮಿಸುತ್ತಿದ್ದಾರೆ. ಆದರೆ, ಶೌಚಾಲಯದ ವ್ಯವಸ್ಥೆ ಇಲ್ಲದೆ ಮಹಿಳೆಯರು-ಪುರು ಷರು ಪರದಾಡುವಂತಾಗಿದೆ.

ಪ್ರತಿ ವರ್ಷ ಸಂತೆ ಮಾರುಕಟ್ಟೆ ಶುಲ್ಕದ ಹರಾಜು ಪ್ರಕ್ರಿಯೆ ನಡೆಸಿ ಅಂದಾಜು ಐದು ಲಕ್ಷ ಆದಾಯ ಗಳಿಸುತ್ತಿರುವ ಗ್ರಾಪಂ ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲ ವಾಗಿದೆ ಎಂದು ಪಂಚಾಯಿತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ನಡೆಯುವ ಸಂತೆಗೆ ಐದು ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸು ತ್ತಿದ್ದು, ತುರ್ತು ಸಂದರ್ಭದಲ್ಲಿ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿ ಬಸ್ ನಿಲ್ದಾ ಣದಲ್ಲಿರುವ ಶೌಚಾಲಯಕ್ಕೆ ತೆರಳು ವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆ ಆವರಣದಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿದ್ದು ದುರ್ವಾಸನೆಯೊಂದಿಗೆ ವ್ಯಾಪಾರ ಮಾಡಬೇಕಾಗಿದ್ದು, ತ್ಯಾಜ್ಯ ವಿಲೇ ವಾರಿಗೆ ಶಾಶ್ವತ ಜಾಗ ಕಂಡುಕೊಳ್ಳಲು ವಿಫಲವಾಗಿರುವ ಗ್ರಾಪಂ ವ್ಯವಸ್ಥೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆ ಸುವವರಿಂದ ರೂ.10 ರಿಂದ 100ವರಗೆ ಸಂತೆ ಶುಲ್ಕ ವಸೂಲಾತಿ ಮಾಡುತ್ತಿದ್ದರೂ ಸಂತೆ ಮಾರುಕಟ್ಟೆ ಒಳಗೆ ಶುಚಿತ್ವವೂ ಇಲ್ಲದೆ, ಶೌಚಾಲಯವೂ ಇಲ್ಲದೆ ಸಂಕ ಷ್ಟದಲ್ಲಿ ವ್ಯಾಪಾರ ಮಾಡಬೇಕಾದ ಪರಿ ಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಾಪಾರಿ ರಾಜಣ್ಣ ದೂರಿದ್ದಾರೆ.

Translate »