ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರಿಗೆ `ಭಾರತ ರತ್ನ’ ನೀಡಲು ಮೈಸೂರಿಗರ ಆಗ್ರಹ
ಮೈಸೂರು

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರಿಗೆ `ಭಾರತ ರತ್ನ’ ನೀಡಲು ಮೈಸೂರಿಗರ ಆಗ್ರಹ

January 29, 2019

ಮೈಸೂರು: ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ವೃತ್ತ (ಮೆಟ್ರೊಪೋಲ್ ವೃತ್ತ)ದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಕೊಡವ ಸಮಾಜದವರು ಸೋಮವಾರ ವೀರಯೋಧನ 120ನೇ ಜನ್ಮದಿನ ಆಚರಿಸಿದರು.

ದೇಶಕ್ಕಾಗಿ ತಮ್ಮ ಇಡೀ ಜೀವಮಾನ ವನ್ನು ಮುಡಿಪಾಗಿಟ್ಟಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಧೈರ್ಯ, ಶೌರ್ಯ, ಸಾಧನೆಗಾಗಿ ಅವರಿಗೆ ಸರ್ಕಾರ `ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.
ಮುಖ್ಯ ಅತಿಥಿಯಾಗಿದ್ದ ಮೈಸೂರಿನ ಮಾಜಿ ಮೇಯರ್ ಎಂ.ಜೆ.ರವಿಕು ಮಾರ್, ಕೆ.ಎಂ.ಕಾರಿಯಪ್ಪನವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಮತ್ತು ಸಿದ್ಧಗಂಗಾ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿ ದರು. ಕೇಂದ್ರ ಸರ್ಕಾರ ಕೊಡವ ಸಮಾಜ ದವರ ಈ ಭಾವನೆಯನ್ನು ಅರ್ಥ ಮಾಡಿ ಕೊಂಡು `ಭಾರತ ರತ್ನ’ ಪ್ರಶಸ್ತಿ ನೀಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ತಾವು ಮೇಯರ್ ಆಗಿದ್ದ ಅವಧಿ ಯಲ್ಲಿ ಕೊಡವ ಸಮಾಜದ ಮನವಿ ಮೇರೆಗೆ ಮೆಟ್ರೊಪೋಲ್ ವೃತ್ತದಲ್ಲಿ ಪೀಲ್ಡ್ ಮಾರ್ಷಲ್ ಕಾರಿಯಪ್ಪನವರ ಪುತ್ಥಳಿ ಸ್ಥಾಪಿಸಿದ್ದಾಗಿ ತಿಳಿಸಿದರು.

ಮೈಸೂರು ಕೊಡವ ಸಮಾಜದ ಸಾಂಸ್ಕøತಿಕ ಮತ್ತು ಕ್ರೀಡಾ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಎನ್.ಎಂ.ತಿಮ್ಮಯ್ಯ ಮಾತನಾಡಿ, ವೃತ್ತದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪರ ಆಳೆತ್ತರದ ಕಂಚಿನ ಪ್ರತಿಮೆ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಜೊತೆಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆಯೂ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಲ್ ಕೆ.ಸಿ. ಕರುಂಬಯ್ಯ, ನಗರಪಾಲಿಕೆ ಸದಸ್ಯರಾದ ಪ್ರಮೀಳಾ, ಎಂ.ಎ.ಸುಬ್ಬಯ್ಯ, ಮಾಜಿ ಮೇಯರ್ ಶ್ರೀಕಂಠಯ್ಯ, ಕೊಡವ ಸಮಾ ಜದ ಉಪಾಧ್ಯಕ್ಷ ಕೆ.ಸಿ.ಬೆಳ್ಳಿಯಪ್ಪ, ಕಾರ್ಯ ದರ್ಶಿ ಎಂ.ಎಂ.ಪೊನ್ನಪ್ಪ, ಮಾಜಿ ಅಧ್ಯಕ್ಷ ರಾದ ಕೆ.ಕಾರಿಯಪ್ಪ, ಎ.ಎ.ಕುಟ್ಟಪ್ಪ, ಸಾಂಸ್ಕøತಿಕ ಮತ್ತು ಕ್ರೀಡಾ ಸಂಸ್ಥೆಯ ಅಧ್ಯಕ್ಷ ಎಂ.ಪಿ.ನಾಣಯ್ಯ, ಪ್ರವೀಣ್ ಚಂಗಪ್ಪ ಇನ್ನಿತರರು ಭಾಗವಹಿಸಿದ್ದರು.

Translate »