ಗೋಣಿಕೊಪ್ಪಲು: ತಿತಿಮತಿ ಸುತ್ತ ಮುತ್ತ ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿ ಕೇಡ್ ಅಳವಡಿಕೆಯಲ್ಲಿ ಮಾರ್ಗ ಬದಲಾ ಯಿಸಿರುವ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ತಿತಿಮತಿಯ ಜಂಗಲಾಡಿಯ ಅರಣ್ಯದಂಚಿನಲ್ಲಿ ಪ್ರತಿಭಟನೆ ನಡೆಸಿದರು.
ತಿತಿಮತಿ ಭಾಗದ ಚಾಮುಂಡಿ ದೇವ ಸ್ಥಾನದಿಂದ ಶ್ರೀರಾಮನ ಕಟ್ಟೆಗಾಗಿ ಜಂಗ ಲಾಡಿ ಕಾಲೋನಿ ಮುಖಾಂತರ ತಿತಿಮತಿ ಕೋಣನಕಟ್ಟೆ ಮುಖ್ಯ ರಸ್ತೆವರೆಗೆ ವನ್ಯ ಜೀವಿಗಳು ಸಮೀಪದ ಗ್ರಾಮಕ್ಕೆ ಬಾರ ದಂತೆ ರೈಲ್ವೇ ಬ್ಯಾರಿಕೇಡ್ ಅಳವಡಿಸುವಂತೆ ಇತ್ತೀಚೆಗೆ ತಿತಿಮತಿ ಅರಣ್ಯ ವಸತಿ ಗೃಹ ದಲ್ಲಿ ರೈತ ಸಂಘ ನಡೆಸಿದ ಪ್ರತಿಭಟನೆಯಲ್ಲಿ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದರು.
ಆದರೆ ಅಧಿಕಾರಿಗಳು ಸೂಚಿಸಿರುವ ಮಾರ್ಗವನ್ನು ಹೊರತುಪಡಿಸಿ ತಮಗೆ ಇಷ್ಟ ಬಂದ ರೀತಿಯಲ್ಲಿ ಬ್ಯಾರಿಕೇಡ್ ಅಳವಡಿಸು ತ್ತಿರುವುದರಿಂದ ಈ ಭಾಗದ ರೈತರ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ. ಅಲ್ಲದೆ ಸರ್ಕಾರದಿಂದ ಬಂದಿರುವ ಕೋಟ್ಯಾಂ ತರ ಅನುದಾನವು ಪೋಲಾಗುತ್ತಿದೆ. ಇವು ಗಳ ಮಾರ್ಗವನ್ನು ತಕ್ಷಣ ಬದಲಾಯಿಸಿ ಕಾಡಾನೆಗಳು ಬರುವ ಮಾರ್ಗದಲ್ಲೇ ರೈಲ್ವೆ ಬ್ಯಾರಿಕೇಡ್ ಅಳವಡಿಸಬೇಕು. ಇದರಿಂದ ರೈತರಿಗೆ ಹಾಗೂ ಗ್ರಾಮಸ್ಥರಿಗೆ ಅನು ಕೂಲವಾಗುತ್ತದೆ. ಇದೇ ಮಾರ್ಗದಲ್ಲಿ ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಮುಂದೆ ಪ್ರಾಣ ಹಾನಿಯಂತಹ ಅನಾಹುತಗಳು ಸಂಭವಿಸಿ ದಲ್ಲಿ ಇದರ ಹೊಣೆಯನ್ನು ಅರಣ್ಯ ಇಲಾ ಖೆಯ ಅಧಿಕಾರಿಗಳೇ ಹೊರಬೇಕಾಗು ತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗ ಮಿಸಿದ ಹುಣಸೂರು ವನ್ಯ ಜೀವಿ ವಿಭಾ ಗದ ಎಸಿಎಫ್ ಪ್ರಸನ್ನ ಕುಮಾರ್ ರೈತ ರೊಂದಿಗೆ ಅರಣ್ಯದಲ್ಲಿ ಅಳವಡಿಸಲಾಗು ತ್ತಿದ್ದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪರಿ ಶೀಲನೆ ನಡೆಸಿದರು. ನೈಜ ಸಮಸ್ಯೆಗಳ ಮಾಹಿತಿಗಳನ್ನು ಅರಣ್ಯ ಅಧಿಕಾರಿಗಳು ರೈತ ಪಡೆದುಕೊಂಡರು.
ಈ ಸಂದರ್ಭ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಶುಭಾಶ್‍ಸುಬ್ಬಯ್ಯ, ಪ್ರಧಾನ ಕಾರ್ಯ ದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಹಾಗೂ ವಕ್ತಾರ ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಕೆಲವು ಅರಣ್ಯ ಇಲಾಖಾ ಧಿಕಾರಿಗಳ ಬೇಜವಾಬ್ದಾರಿತನದÀ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ರೈತರ ಮಾತಿಗೆ ಉತ್ತರಿಸಿದ ಎಸಿಎಫ್ ಪ್ರಸನ್ನಕುಮಾರ್ ರೈತರಿಗೆ, ಗ್ರಾಮಸ್ಥರಿಗೆ ಅನುಕೂಲವಾ ಗುವ ರೀತಿಯಲ್ಲಿ ಕಾಮಗಾರಿ ಕೈಗೆತ್ತಿ ಕೊಳ್ಳಲಾಗುವುದು. ಇದರಲ್ಲಿ ಯಾವುದೇ ಸಂಶಯಬೇಡ ಎಂದು ಪ್ರತಿಭಟನಕಾ ರರಿಗೆ ಭರವಸೆ ನೀಡಿದರು.
ಮುಂದೆ ಇದು ಸರಿಯಾಗದಿದ್ದಲ್ಲಿ ರೈತ ಸಂಘದಿಂದ ಪ್ರತಿಭಟನೆಯ ಹಾದಿ ಹಿಡಿ ಯಬೇಕಾಗುತ್ತದೆಂದು ಪ್ರಧಾನ ಕಾರ್ಯ ದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ತಿಳಿಸಿದರು. ಅಂತಿಮವಾಗಿ ರೈತರ ಮನವಿ ಯನ್ನು ಸ್ವೀಕರಿಸಿದ ಎಸಿಎಫ್ ಪ್ರಸನ್ನ ಕುಮಾರ್ ಸಮಸ್ಯೆಯನ್ನು ಶೀಘ್ರ ಬಗೆಹರಿ ಸುವ ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪ್ರತಿಭಟ ನೆಯಲ್ಲಿ ರೈತ ಮುಖಂಡರಾದ ಪುಚ್ಚಿಮಾಡ ಅಶೋಕ್, ಸಿ.ಎಂ.ಬೆಳ್ಳಿಯಪ್ಪ, ಸಿ.ಎಂ. ಚಂಗಪ್ಪ, ಜೋಶ್, ರವಿ, ಸನ್ನಿ ಚಂಗಪ್ಪ, ಸಿ.ಪಿ. ಸೋಮಣ್ಣ, ಮಹೇಶ್, ಉಮೇಶ್, ಕಿರಣ್, ಪುಚ್ಚಿಮಾಡ ಸುನೀಲ್, ವನ್ಯಜೀವಿ ವಿಭಾಗದ ಆರ್‍ಎಫ್‍ಓ ಶಿವಾನಂದ, ಡಿಆರ್ ಎಫ್‍ನ ಸತೀಶ್, ಶಿವಲಿಂಗಯ್ಯ ಇತರರಿದ್ದರು.