Tag: KR Hospital

ಕೆ.ಆರ್.ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ
ಮೈಸೂರು

ಕೆ.ಆರ್.ಆಸ್ಪತ್ರೆಗೆ ಬೇಕಿದೆ ತುರ್ತು ಚಿಕಿತ್ಸೆ

May 27, 2019

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ ಹಲವು ಗಂಭೀರ ಸಮಸ್ಯೆಗಳಿಂದ ಬಳಲುತ್ತಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ. ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಮಹೋದ್ದೇಶದಿಂದ ಮಹಾರಾಜರು ಸ್ಥಾಪಿಸಿದ ದೊಡ್ಡಾಸ್ಪತ್ರೆ ವ್ಯವಸ್ಥೆಯೇ ಬದಲಾ ದಂತಿದೆ. ಕೆಲ ಗೊಂದಲದಿಂದಾಗಿ ಕೇಂದ್ರದ `ಆಯುಷ್ಮಾನ್ ಭಾರತ್’ ಹಾಗೂ ರಾಜ್ಯದ `ಆರೋಗ್ಯ ಕರ್ನಾಟಕ’ ಆರೋಗ್ಯ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಪಡಿತರ ಚೀಟಿ, ಆಧಾರ್ ಕಾರ್ಡ್ ಹಿಡಿದು ಉಚಿತ ಚಿಕಿತ್ಸೆ ಸಿಗಬಹುದೆಂದು ಇಲ್ಲಿಗೆ ಬರುವ ಬಡ ರೋಗಿಗಳು, ಅಗತ್ಯ ಮಾಹಿತಿ ಲಭ್ಯವಿಲ್ಲದೆ ಕಂಗಾಲಾಗಿದ್ದಾರೆ. ಆರೋಗ್ಯ ಯೋಜನೆಯಡಿ ಯಾವೆಲ್ಲಾ…

ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರು, ಸಂಬಂಧಿಕರ ರೋಧನ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಅಸ್ವಸ್ಥರು, ಸಂಬಂಧಿಕರ ರೋಧನ

December 16, 2018

ಮೈಸೂರು: ಸುಳವಾಡಿ ಘಟನೆಯಿಂದ ಅಸ್ವಸ್ಥ ರಾದವರಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ನಿರತರಾಗಿರು ವುದರಿಂದ 2ನೇ ದಿನವಾದ ಇಂದೂ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಒಳ ಹಾಗೂ ಹೊರ ರೋಗಿಗಳಿಗೆ ತೊಂದರೆಯಾಯಿತು. ಏಕ ಕಾಲದಲ್ಲಿ ಸುಮಾರು 100ಕ್ಕೂ ಹೆಚ್ಚು ಅಸ್ವಸ್ಥರು ಬಂದ ಕಾರಣ ಅವರಿಗೆ ತುರ್ತು ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿರುವುದರಿಂದ ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ (ಕಲ್ಲು ಕಟ್ಟಡ), ಐಪಿಡಿ-ಓಪಿಡಿ ಬ್ಲಾಕ್ (ಜಯದೇವ ಹೃದ್ರೋಗವಿದ್ದ ಕಟ್ಟಡ), ಕಿವಿ-ಮೂಗು-ಗಂಟಲು ವಿಭಾಗಗಳಲ್ಲಿ ಒಳ ರೋಗಿಗಳಾಗಿರುವವರನ್ನು ನೋಡಿ ಕೊಳ್ಳಲು ನರ್ಸ್‍ಗಳಾಗಲೀ, ರೌಂಡ್ಸ್ ಮಾಡುವ ವೈದ್ಯರುಗಳಿಲ್ಲದೇ…

ಕೆ.ಆರ್. ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಅಳವಡಿಕೆ
ಮೈಸೂರು

ಕೆ.ಆರ್. ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಅಳವಡಿಕೆ

November 6, 2018

ಮೈಸೂರು: ಮೈಸೂರು ನಗರದ ನೂರು ವರ್ಷ ಹಳೆಯದಾದ ಹಾಗೂ ರಾಜ್ಯ ಸರ್ಕಾರ ನಡೆಸುತ್ತಿರುವ ಗ್ರಾಮೀಣ ಜನರಲ್ಲಿ ದೊಡ್ಡಾಸ್ಪತ್ರೆ ಎಂದು ಖ್ಯಾತಿ ಪಡೆದಿ ರುವ ಕೃಷ್ಣರಾಜೇಂದ್ರ ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಯಂತ್ರ ಅಳವಡಿಸಿದೆ. ಆ ಮೂಲಕ ನವದೆಹಲಿಯ ಅಖಿಲ ಭಾರತ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಸಂಸ್ಥೆ ನಂತರ ಈ ಸವಲತ್ತು ಪಡೆದಿರುವ ಎರಡನೇ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿ ಕೆಗೆ ಕೆ.ಆರ್. ಆಸ್ಪತ್ರೆ ಪಾತ್ರವಾಗಿದೆ. ಈ ಯಂತ್ರವು, ಸೀಮನ್ಸ್ ಸೊಮಾಟಮ್ ಡೆಫಿನಿಷನ್…

ಕೆ.ಆರ್.ಆಸ್ಪತ್ರೆಯಲ್ಲಿ ಮೂವರು  ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಮೂವರು  ಮಹಿಳಾ ಪೌರಕಾರ್ಮಿಕರಿಗೆ ಸನ್ಮಾನ

October 3, 2018

ಮೈಸೂರು: ಮಹಾತ್ಮ ಗಾಂಧೀಜಿ ಜನ್ಮದಿನದ ಅಂಗವಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಮೂವರು ಮಹಿಳಾ ಪೌರಕಾರ್ಮಿಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಕೆ.ಆರ್.ಚಲುವಾಂಬ, ಪಿಕೆಟಿಬಿ ಆಸ್ಪತ್ರೆ, ಲಯನ್ಸ್ ಸಂಸ್ಥೆಗಳ ವಿವಿಧ ಘಟಕಗಳು ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಇದೇ ವೇಳೆ ಆಸ್ಪತ್ರೆಯಲ್ಲಿ ಅನಾಥ ರೋಗಿಗಳನ್ನು ಆರೈಕೆ ಮಾಡುತ್ತಾ ಬಂದಿರುವ ಪೌರಕಾರ್ಮಿಕರಾದ ಪುಟ್ಟಮ್ಮ, ರತ್ನಮ್ಮ ಹಾಗೂ ಮಂಗಳಮ್ಮ ಅವರನ್ನು ಅಭಿನಂದಿಸಲಾಯಿತು. ಆಸ್ಪತ್ರೆ ಆವರಣ ಸ್ವಚ್ಛಗೊಳಿಸಿದ ವಿವಿಧ ಸಂಘಟನೆಗಳು,…

ಕೆ.ಆರ್.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಬಡ ರೋಗಿಗಳ ಪರದಾಟ
ಮೈಸೂರು

ಕೆ.ಆರ್.ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರಗಳು ಕೆಟ್ಟು ಬಡ ರೋಗಿಗಳ ಪರದಾಟ

August 25, 2018

ಮೈಸೂರು: ಮೈಸೂರಿನ ಕೆ.ಆರ್.ಆಸ್ಪತ್ರೆ ಕಿಡ್ನಿ ರೋಗಿಗಳ ವಿಭಾಗದ ಡಯಾಲಿಸಿಸ್ ಯಂತ್ರಗಳು ಕೆಟ್ಟು, ರೋಗಿಗಳು ಪರದಾಡುವಂತಾಗಿದೆ. ಕೆ.ಆರ್.ಆಸ್ಪತ್ರೆ ಕಿಡ್ನಿ(ಮೂತ್ರಪಿಂಡ) ವಿಭಾಗದಲ್ಲಿ 9 ಡಯಾಲಿಸಿಸ್ ಯಂತ್ರಗಳಿದ್ದು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಬಡ ಕುಟುಂಬದ ಕಿಡ್ನಿ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಮೂಲಕ ಚೈತನ್ಯ ತುಂಬಲಾಗುತ್ತಿತ್ತು. ಈ ಹಿಂದೆ ಜಯದೇವ ಹೃದ್ರೋಗ ಆಸ್ಪತ್ರೆಯಿದ್ದ ಕಟ್ಟಡದಲ್ಲಿಯೇ ಕಿಡ್ನಿ ವಿಭಾಗವಿದ್ದು, ಡಯಾಲಿಸಿಸ್ ಸೇರಿದಂತೆ ಇನ್ನಿತರ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಖಾಸಗಿ ಆಸ್ಪತ್ರೆ ಹಾಗೂ ಡಯಾಲಿಸಿಸ್ ಕೇಂದ್ರಗಳಲ್ಲಿ ಶುಲ್ಕ…

ಅಪರಿಚಿತ ವ್ಯಕ್ತಿಯ ಶವ: ವಾರಸುದಾರರ ಪತ್ತೆಗೆ ಮನವಿ
ಮೈಸೂರು

ಅಪರಿಚಿತ ವ್ಯಕ್ತಿಯ ಶವ: ವಾರಸುದಾರರ ಪತ್ತೆಗೆ ಮನವಿ

July 5, 2018

ಮೈಸೂರು:  ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸುಮಾರು 50 ವರ್ಷದ ಅಪರಿಚಿತ ಗಂಡಸು ಜುಲೈ 3ರಂದು ಮೃತಪಟ್ಟಿದ್ದು, ಮೃತ ದೇಹವು ಕೆ.ಆರ್. ಆಸ್ಪತ್ರೆಯ ಶವಾ ಗಾರದಲ್ಲಿರುತ್ತದೆ. ಚಹರೆ ಇಂತಿದೆ: ಎತ್ತರ 5.6 ಅಡಿ, ಸಣ್ಣದಾದ ಮೈಕಟ್ಟು, ಕೋಲುಮುಖ, ಗಿಡ್ಡ ಮೂಗು, ಅಗಲವಾದ ಕಿವಿ, ತಲೆಯಲ್ಲಿ 4 ಇಂಚು ಉದ್ದದ ಕಪ್ಪು-ಬಿಳಿ ಕೂದಲು ಇರುತ್ತದೆ. ಮೃತನ ಮೈಮೇಲೆ ಆಸ್ಪತ್ರೆಯ ಒಂದು ಹಸಿರು ಬಟ್ಟೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬಟ್ಟೆಗಳು ಇರುವುದಿಲ್ಲ. ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ…

ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವೈದ್ಯರ ದಿನಾಚರಣೆ ವಿಶಿಷ್ಟ ಕಾರ್ಯಕ್ರಮ
ಮೈಸೂರು

ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವೈದ್ಯರ ದಿನಾಚರಣೆ ವಿಶಿಷ್ಟ ಕಾರ್ಯಕ್ರಮ

July 2, 2018

ಪೊರಕೆ ಹಿಡಿದ ವೈದ್ಯರು, ವೈದ್ಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳಿಂದ ಸ್ವಚ್ಛತಾ ಆಂದೋಲನ ಮೈಸೂರು: ಪ್ರತಿ ದಿನ ರೋಗಿಗಳ ಆರೋಗ್ಯ ನೋಡಿಕೊಳ್ಳುವ ಕೆ.ಆರ್.ಆಸ್ಪತ್ರೆ ವೈದ್ಯರು ಇಂದು ಪೊರಕೆ ಹಿಡಿದು ಆಸ್ಪತ್ರೆಯ ಅವರಣವನ್ನು ಸ್ವಚ್ಛಗೊಳಿಸುವ ಮೂಲಕ ಆಸ್ಪತ್ರೆ ಪರಿಸರದ ಆರೋಗ್ಯವನ್ನು ನೋಡಿಕೊಂಡರು. ವೈದ್ಯರ ದಿನಾಚರಣೆ ಪ್ರಯುಕ್ತ ಮೈಸೂರಿನ ಕೆ.ಆರ್.ಆಸ್ಪತ್ರೆಯ ಇಡೀ ಆವರಣದಲ್ಲಿ ಭಾನುವಾರ ವಿಶೇಷ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಡೆಯಿತು. ವೈದ್ಯರು, ವೈದ್ಯ ವಿದ್ಯಾರ್ಥಿಗಳು, ಲಯನ್ಸ್ ಸಂಸ್ಥೆ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ನೂರಾರು ಮಂದಿ ಪೊರಕೆ ಹಿಡಿದು…

Translate »