ಕೆ.ಆರ್. ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಅಳವಡಿಕೆ
ಮೈಸೂರು

ಕೆ.ಆರ್. ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಅಳವಡಿಕೆ

November 6, 2018

ಮೈಸೂರು: ಮೈಸೂರು ನಗರದ ನೂರು ವರ್ಷ ಹಳೆಯದಾದ ಹಾಗೂ ರಾಜ್ಯ ಸರ್ಕಾರ ನಡೆಸುತ್ತಿರುವ ಗ್ರಾಮೀಣ ಜನರಲ್ಲಿ ದೊಡ್ಡಾಸ್ಪತ್ರೆ ಎಂದು ಖ್ಯಾತಿ ಪಡೆದಿ ರುವ ಕೃಷ್ಣರಾಜೇಂದ್ರ ಆಸ್ಪತ್ರೆಗೆ ನೂತನ ಅಲ್ಟ್ರಾ ಮಾಡರ್ನ್ ಸಿಟಿ ಸ್ಕ್ಯಾನರ್ ಯಂತ್ರ ಅಳವಡಿಸಿದೆ. ಆ ಮೂಲಕ ನವದೆಹಲಿಯ ಅಖಿಲ ಭಾರತ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಸಂಸ್ಥೆ ನಂತರ ಈ ಸವಲತ್ತು ಪಡೆದಿರುವ ಎರಡನೇ ಸರ್ಕಾರಿ ಆಸ್ಪತ್ರೆ ಎಂಬ ಹೆಗ್ಗಳಿ ಕೆಗೆ ಕೆ.ಆರ್. ಆಸ್ಪತ್ರೆ ಪಾತ್ರವಾಗಿದೆ.

ಈ ಯಂತ್ರವು, ಸೀಮನ್ಸ್ ಸೊಮಾಟಮ್ ಡೆಫಿನಿಷನ್ ಡ್ಯೂಯಲ್ ಸೋರ್ಸ್‍ಸ್ 128 ಸ್ಲೈಸ್ ಸಿಟಿ ಸ್ಕ್ಯಾನರ್ ಸೌಲಭ್ಯ ಹೊಂದಿದೆ. ಅತೀ ಹೆಚ್ಚು ಅಡ್ವಾನ್ಸ್ಡ್ ಸಿಟಿ ಸ್ಕ್ಯಾನರ್ಸ್‍ಗಳಲ್ಲಿ ಒಂದಾದ ಇದನ್ನು ಈಗ ಇಲ್ಲಿ ಅಳವಡಿಸಲಾಗುತ್ತಿದೆ. ಉಚಿತ ಅಬ್‍ಸ್ಟ್ಯಾಕಲ್ ತಪಾ ಸಣೆ ಜೊತೆಗೆ ಪ್ರತಿನಿತ್ಯ ಆಸ್ಪತ್ರೆಗೆ ಬರುವ ನೂರಾರು ಬಡ ರೋಗಿಗಳಿಗೆ ಅಲ್ಟ್ರಾ ಮಾಡ್ರನ್ ಸಿಟಿ ಸ್ಕ್ಯಾನರ್ ವ್ಯವಸ್ಥೆಯನ್ನೂ ಪೂರೈಸಿದಂತಾಗಿದೆ. ಈ ಯಂತ್ರ ಡ್ಯೂಯಲ್ ಸೋರ್ಸಸ್ ಟೆಕ್ನಾಲಜಿ ಮೂಲಕ ವೇಗವಾಗಿ ಸಿಟಿ ಇಮೇಜ್ ಅನ್ನು ಪಡೆಯ ಬಹುದು. ಶೇ.100ರಷ್ಟು ನಿಖರತೆಯೊಂದಿಗೆ ಫಾಸ್ಟ್ ಡೇಟಾ ಟ್ರಾನ್ಸ್‍ಮಿಷನ್ ಪಡೆಯಬಹುದು. ಸ್ಕ್ಯಾನಿಂಗ್ ವೇಗವನ್ನು ಗಮನಿಸಿದಾಗ ಇದು ನಿಜವಾಗಿಯೂ ಅಪ್ರತಿಮವಾಗಿದೆ. ನವದೆಹಲಿಯ ಎಐಐಎಂಎಸ್ ಆಸ್ಪತ್ರೆಯ ನಂತರ ಪ್ರಪ್ರಥಮವಾಗಿ ಸಿಟಿ ಸ್ಕ್ಯಾನರ್ ಸೌಲಭ್ಯವನ್ನು 2ನೇ ಶ್ರೇಣಿ ನಗರವಾದ ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆ (ದೊಡ್ಡಾಸ್ಪತ್ರೆ)ಯಲ್ಲಿ ಅಳವಡಿಸಲಾಗಿದೆ.

ಈ ಸಿಟಿ ಸ್ಕ್ಯಾನರ್ ಯಂತ್ರವನ್ನು ಜರ್ಮನಿ ಯಲ್ಲಿ ತಯಾರಿಸಿದ್ದು, ವಿಶೇಷವಾಗಿ ಅಲ್ಲಿಂದ ವಿಮಾನದ ಮೂಲಕ ತಂದು ಕೆ.ಆರ್. ಆಸ್ಪತ್ರೆಯ ರೇಡಿಯಾಲಜಿ ವಿಭಾಗದಲ್ಲಿ ಅಳವಡಿಸಲಾಗಿದೆ. ಆಸ್ಪತ್ರೆಯಲ್ಲಿ ಇಲ್ಲಿಯ ವರೆಗೆ ಅಪಘಾತ, ಪಾಶ್ರ್ವವಾಯು, ಕಿಡ್ನಿ, ಲಿವರ್, ಹೃದಯ ಸಂಬಂಧಿ ಕಾಯಿಲೆ ಗಳು, ನರ ದೌರ್ಬಲ್ಯ (ನ್ಯೂರೋ ಸಮಸ್ಯೆ) ಮತ್ತು ಮೂತ್ರ ಪಿಂಡ (ನೆಪ್ರೋಲಜಿ)ದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿ ಗಳನ್ನು ಸಿಟಿ ಸ್ಕ್ಯಾನಿಂಗ್ ಮಾಡಿಸಲು ಖಾಸಗಿ ಆಸ್ಪತ್ರೆಗಳಿಗೆ ಸೂಚಿಸಲಾಗುತ್ತಿತ್ತು. ರೋಗಿಗಳಿಗೆ ಕೆಮ್ಮು ಬಂದಿದೆ ಎಂದರೆ ಬಡ ರೋಗಿ ಗಳು ಸಿಟಿ ಸ್ಕ್ಯಾನಿಂಗ್ ಮಾಡಿಸಲು ಸಾವಿ ರಾರು ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು. ಈಗ ಈ ಸೌಲಭ್ಯ ವನ್ನು ಕೆ.ಆರ್. ಆಸ್ಪತ್ರೆಯಲ್ಲಿ ಅಳವಡಿಸಿರುವುದರಿಂದ ರೋಗಿಗಳು ತಮ್ಮ ಬಿಪಿಎಲ್ ಕಾರ್ಡ್ ಅನ್ನು ತೋರಿಸಿ ಉಚಿತ ಸಿಟಿ ಸ್ಕ್ಯಾನಿಂಗ್ ಮಾಡಿಸಬಹುದು.

ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಮತ್ತು ಡೈರೆಕ್ಟರ್ ಡಾ. ಸಿ.ಪಿ. ನಂಜರಾಜ ಅವರು `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಅಲ್ಟ್ರಾ ಮಾಡ್ರನ್ ಸಿಟಿ ಸ್ಕ್ಯಾನರ್ ಯಂತ್ರದ ಅಳವಡಿಕೆ ಕಾರ್ಯ ಸಂಪೂರ್ಣಗೊಂ ಡಿದ್ದು, ತಜ್ಞರು ಪ್ರಾಯೋಗಿಕವಾಗಿ ಚಾಲನೆ (ಟ್ರೈಯಲ್ ರನ್ಸ್) ನಡೆಸುತ್ತಿದ್ದಾರೆ ಎಂದರು.

“ಸಿಟಿ ಸ್ಕ್ಯಾನರ್ 128 ಸ್ಲೈಸಸ್ ನಿದ್ರೆ ಇಲ್ಲದೆ ರೋಗಿಗಳನ್ನು ನಿಖರವಾಗಿ ಸ್ಕ್ಯಾನ್ ಮಾಡು ತ್ತದೆ ಹಾಗೂ ಸ್ಕ್ಯಾನ್ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ರೋಗಿಗಳು ಉಸಿರು ಹಿಡಿದಿಟ್ಟುಕೊಳ್ಳುವ ಅಗತ್ಯವಿಲ್ಲ. ವಿಶೇಷ ವಾಗಿ ಶಿಶುಗಳ ಎದೆ ತಪಾಸಣೆ ಮಾಡು ವಾಗ ಇದು ಹೆಚ್ಚು ಸಹಾಯ ಮಾಡುತ್ತದೆ. ಪ್ರಸ್ತುತ ಈ ಸೌಲಭ್ಯ ಪರೀಕ್ಷಾರ್ಥವಾಗಿ ಎಲ್ಲಾ ರೋಗಿಗಳಿಗೂ ದೊರೆಯುತ್ತದೆ ಎಂದೂ ಅವರು ತಿಳಿಸಿದರು.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಲ್ಟ್ರಾ ಮಾಡ್ರನ್ ಸಿಟಿ ಸ್ಕ್ಯಾನರ್ ಯಂತ್ರ ಉದ್ಘಾಟನೆ ಮಾಡುವ ನಿರೀಕ್ಷೆ ಇದ್ದು, ಅವರ ಬರುವಿಕೆಯ ಖಾತರಿಯನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ನಿರೀಕ್ಷಿಸುತ್ತಿದ್ದೇವೆ ಎಂದರು. ಇದಕ್ಕೂ ಮೊದಲು, ಕೃಷ್ಣ ರಾಜೇಂದ್ರ ಆಸ್ಪತ್ರೆಯಲ್ಲಿ 64 ಸ್ಲೈಸ್ ಸಿಟಿ ಸ್ಕ್ಯಾನರ್ ಅಳವಡಿಸಲಾಗಿತ್ತು. ಆದರೆ ರೋಗಿಗಳ ಬೇಡಿಕೆಯನ್ನು ಈಡೇರಿಸುವಲ್ಲಿ ನಾವು ಹೆಣಗಾಡುತ್ತಿದ್ದೆವು. ಈ ಜನಸಂದಣಿ ಯನ್ನು ನಿರ್ವಹಿಸಲು ನಾವು ತುರ್ತು ಚಿಕಿತ್ಸೆ, ಅಪಘಾತ, ಪಾಶ್ರ್ವವಾಯು ಮತ್ತು ಇತರೆ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳು ಹಿಸಲಾಗುತ್ತಿತ್ತು. ಆದರೆ ಈಗ ಹಳೇ ಸ್ಕ್ಯಾನರ್ ಬದಲಾಗಿ ಅಡ್ವಾನ್ಸ್ಡ್ ಸಿಟಿ ಸ್ಕ್ಯಾನರ್ ಅಳ ವಡಿಸಲಾಗಿದೆ. ಈ ಯಂತ್ರವು 128 ಸ್ಲೈಸ್ ಸಿಟಿ ಸ್ಕ್ಯಾನರ್ ವೈದ್ಯಕೀಯ ಅಗತ್ಯತೆಗೆ ಅನುಸಾರ 256 ಸ್ಲೈಸ್ ಸಾಮಥ್ರ್ಯವನ್ನು ಹೊಂದಿದೆ ಎಂದು ಕೆ.ಆರ್. ಆಸ್ಪತ್ರೆಯ ವೈದ್ಯ ಕೀಯ ಅಧೀಕ್ಷಕ ಡಾ. ಶ್ರೀನಿವಾಸ್ ತಿಳಿಸಿದ್ದಾರೆ. ಅಲ್ಲದೆ, ಅಲ್ಟ್ರಾ ಮಾಡ್ರನ್ ಸಿಟಿ ಸ್ಕ್ಯಾನರ್ ಅಳವಡಿಕೆಗೆ ರಾಜ್ಯ ಸರ್ಕಾರ 6.6 ಕೋಟಿ ರೂ. ಅನುದಾನ ನೀಡಿದೆ ಎಂದರು.
ಸುಮಾರು 142 ವರ್ಷ ಹಳೆಯದಾದ ಕೆ.ಆರ್. ಆಸ್ಪತ್ರೆಯು 1876ರಲ್ಲಿ ಆರಂಭ ಗೊಂಡು, ಮಂಡ್ಯ, ಮೈಸೂರು, ಕೊಡಗು, ಹಾಸನ, ಚಾಮರಾಜನಗರ ಜಿಲ್ಲೆಗಳಲ್ಲದೆ ತುಮಕೂರು ಜಿಲ್ಲೆಯಿಂದಲೂ ರೋಗಿ ಗಳು ಬರುತ್ತಾರೆ ಎಂದರು.

ರೇಡಿಯಾಲಜಿಸ್ಟ್ ಡಾ. ಸಂಜಯ್ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ರೇಡಿಯಾಲಜಿ ವಿಭಾಗವು ಎಲ್ಲಾ ಕೆಲಸದ ದಿನಗಳಲ್ಲಿ 1000 ಕ್ಕೂ ಹೆಚ್ಚು ರೋಗಿಗಳ ಸ್ಕ್ರೀನಿಂಗ್, ಪ್ರತಿದಿನ 500 ರಿಂದ 600 ಎಕ್ಸ್‍ರೇ, 250ರಿಂದ 300 ಅಲ್ಟ್ರಾ ಸೌಂಡ್ ರೋಗಿಗಳು ಮತ್ತು 100 ರಿಂದ 150 ಸಿಟಿ ಸ್ಕ್ಯಾನ್ ರೋಗಿಗಳನ್ನು ತಪಾಸಣೆ ಮಾಡ ಲಾಗುತ್ತದೆ. ಅಲ್ಟ್ರಾ ಸಿಟಿ ಸ್ಕ್ಯಾನರ್ ಯಂತ್ರ ಅಳವಡಿಕೆಯಿಂದ ಸಿಟಿ ಸ್ಕ್ಯಾನ್ ಮೇಲ್ದರ್ಜೆ ಗೇರಿಸಲಾಗಿದ್ದು ಸಾವಿರಾರು ಬಡ ರೋಗಿಗಳಿಗೆ ಅನುಕೂಲವಾಗಲಿದೆ. ಇನ್ನು ಮುಂದೆ, ಡಯಾಗ್ನೋಸಿಸ್ ಕಾಂಪ್ಲೆಕ್ಸ್ ಪ್ರಕರಣಗಳಾದ ಕಿಡ್ನಿ, ಲಿವರ್ ಸಂಬಂಧಿ ಕಾಯಿಲೆಗಳು, ಆಂಜಿಯೋಗ್ರಾಂ, ಕಾರ್ಡಿಯಾಕ್ ಕಾಯಿಲೆಗಳು, ಪಾಶ್ರ್ವವಾಯು ಮತ್ತು ನೆಪ್ರೋಲಜಿ ಕಾಯಿಲೆಗಳ ರೋಗಿಗಳಿಗೆ ಸ್ಕ್ಯಾನ್ ಮಾಡಲಾಗುವುದು ಎಂದರು.

`ಕಿಡ್ನಿ ಕಾಯಿಲೆಗಳು, ಲಿವರ್, ಹೃದಯ, ಉದರ, ಮೆದಳು ಮತ್ತು ಇನ್ನಿತರ ಕಾಯಿಲೆಗಳಿಗೆ ನಿಖರವಾದ ಕಾರಣಗಳನ್ನು ಸುಲಭವಾಗಿ ಕಂಡು ಹಿಡಿಯಬಹುದು. ಇದರಿಂದ ವೈದ್ಯರು ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. ಪಾಶ್ರ್ವವಾಯು ಮತ್ತು ವೆಸೆಲ್ ಬ್ಲಾಕ್ ಅನ್ನು ಸಿಟಿ ಸ್ಕ್ಯಾನರ್ ಮೂಲಕ 1 ನಿಮಿಷದಲ್ಲಿ ಪತ್ತೆ ಹಚ್ಚಬಹುದು’’ ಎಂದರು.

ರೇಡಿಯಾಲಜಿ ವಿಭಾಗವು ಈ ಹೈಯರ್ ಎಂಡ್ ಸಿಟಿ ಸ್ಕ್ಯಾನರ್ ಅಳವಡಿಸಲು ಅಟಾಮಿಕ್ ಎನರ್ಜಿ ರೆಗ್ಯುಲೇಟರ್ ಬೋರ್ಡ್ (ಎಇಆರ್‍ಬಿ)ನಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಂಡಿದೆ. “ತಾಂತ್ರಿಕವಾಗಿ, ಈ ಯಂತ್ರವು 128 ಸ್ಲೈಸ್ ಸಿಟಿ ಸ್ಕ್ಯಾನರ್ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಈ ಯಂತ್ರವು ಅತ್ಯುತ್ತಮ ಚಿತ್ರವನ್ನು ಕಡಿಮೆ ಅವಧಿಯಲ್ಲಿ ನೀಡಲಿದೆ. ಸಾಕಷ್ಟು ವೇಳೆ ಉಳಿತಾಯವಾಗು ವುದರಿಂದ ಇನ್ನೂ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು. ಈ ಯಂತ್ರವು ಇಂಧನ ಸಾಮಥ್ರ್ಯವನ್ನು ಸಹ ಹೊಂದಿದೆ ಎಂದು ಡಾ. ಸಂಜಯ್ ತಿಳಿಸಿದರು.

– ರಮೇಶ್ ಕೆಬ್ಬೆಹುಂಡಿ

Translate »