ಅಪರಿಚಿತ ವ್ಯಕ್ತಿಯ ಶವ: ವಾರಸುದಾರರ ಪತ್ತೆಗೆ ಮನವಿ
ಮೈಸೂರು

ಅಪರಿಚಿತ ವ್ಯಕ್ತಿಯ ಶವ: ವಾರಸುದಾರರ ಪತ್ತೆಗೆ ಮನವಿ

July 5, 2018

ಮೈಸೂರು:  ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಸುಮಾರು 50 ವರ್ಷದ ಅಪರಿಚಿತ ಗಂಡಸು ಜುಲೈ 3ರಂದು ಮೃತಪಟ್ಟಿದ್ದು, ಮೃತ ದೇಹವು ಕೆ.ಆರ್. ಆಸ್ಪತ್ರೆಯ ಶವಾ ಗಾರದಲ್ಲಿರುತ್ತದೆ.

ಚಹರೆ ಇಂತಿದೆ: ಎತ್ತರ 5.6 ಅಡಿ, ಸಣ್ಣದಾದ ಮೈಕಟ್ಟು, ಕೋಲುಮುಖ, ಗಿಡ್ಡ ಮೂಗು, ಅಗಲವಾದ ಕಿವಿ, ತಲೆಯಲ್ಲಿ 4 ಇಂಚು ಉದ್ದದ ಕಪ್ಪು-ಬಿಳಿ ಕೂದಲು ಇರುತ್ತದೆ. ಮೃತನ ಮೈಮೇಲೆ ಆಸ್ಪತ್ರೆಯ ಒಂದು ಹಸಿರು ಬಟ್ಟೆಯನ್ನು ಹೊರತುಪಡಿಸಿ ಬೇರೆ ಯಾವುದೇ ಬಟ್ಟೆಗಳು ಇರುವುದಿಲ್ಲ.

ಮೃತರ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ್ ಠಾಣೆ ದೂರವಾಣ ಸಂಖ್ಯೆ 0821-2516579 ಅನ್ನು ಸಂಪರ್ಕಿಸಿ.

Translate »