ಭೇರ್ಯ: ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರ ಹರದನಹಳ್ಳಿ ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕಾಗಿ ಕೈಗೊಂಡಿರುವ ಸಿದ್ಧತೆಯನ್ನು ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶಿವಶಂಕರ್ ಪರಿಶೀಲಿಸಿದರು.
ಹರದನಹಳ್ಳಿಗೆ ಬುಧವಾರ ಭೇಟಿ ನೀಡಿದ್ದ ಅವರು, ಸಚಿವರ ವಾಸ್ತವ್ಯಕ್ಕಾಗಿ ಅಂದು ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾದ ಸಿದ್ದತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಧಿಕಾರಿಗಳ ವಾಸ್ತವ್ಯ ಹಾಗೂ ಊಟೋಪಚಾರ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಅಲ್ಲದೆ ಹರದನಹಳ್ಳಿ ಹಾಗು ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪರಿಹರಿಸಿರುವ ಸಮಸ್ಯೆಗಳು ಹಾಗು ಪರಿಹರಿಸಬೇಕಾದ ಸಮಸ್ಯೆಗಳ ಕುರಿತು ಪಟ್ಟಿ ಮಾಡಿರುವ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಭದ್ರಶೆಟ್ಟಿ ಸಿಇಒಗೆ ಮಾಹಿತಿ ನೀಡಿದರು.
ಜಿ.ಪಂ. ಉಪಕಾರ್ಯದರ್ಶಿ ಶಿವಕುಮಾರ್, ಗ್ರಾ.ಪಂ. ಅಧ್ಯಕ್ಷ ಮಂಜು, ತಾಪಂ ಇಒ ಲಕ್ಷ್ಮೀಮೋಹನ್, ಸಿಡಿಪಿಒ ಸುಮಿತ್ರಾ, ಸ್ವಚ್ಛ ಭಾರತ್ ಮಿಷನ್ ತಾಲೂಕು ಸಂಯೋಜಕ ಅಂಕನಹಳ್ಳಿ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ವಿಭಾಗದ ಇಇ ವೆಂಕಟೇಶ್, ಉಪವಿಭಾಗದ ಎಇಇ ರಮೇಶ್, ಜೆಇ ಸುಭಾಷ್, ಜಿ.ಪಂ. ಎಇಇ ಸತ್ಯನಾರಾಯಣ್, ಎಇ ಸ್ವಾಮಿ, ಪಿಡಿಒಗಳಾದ ಪಾಂಡು, ನಾಗರಾಜ್, ಎನ್‍ಆರ್‍ಇಜಿ ಅಭಿಯಂತರ ಅವಿನಾಶ್, ಗ್ರಾ.ಪಂ. ಸದಸ್ಯ ಸತೀಶ್ ಇತರೆ ಅಧಿಕಾರಿಗಳು ಇದ್ದರು.