ಮೈಸೂರಲ್ಲಿ ಮತ್ತೆ ಸರ ಕಳವು
ಮೈಸೂರು

ಮೈಸೂರಲ್ಲಿ ಮತ್ತೆ ಸರ ಕಳವು

July 5, 2018

ಮೈಸೂರು: ಬೈಕ್‍ನಲ್ಲಿ ಬಂದ ಖದೀಮರು ಮಹಿಳೆಯ ಸರ ಕಸಿದು ಪರಾರಿ ಯಾಗಿರುವ ಘಟನೆ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದ ಬಳಿ ಬುಧವಾರ ರಾತ್ರಿ ನಡೆದಿದೆ.

ಕುಂಬಾರಕೊಪ್ಪಲು ನಿವಾಸಿ ಗೌರಮ್ಮ (60) ಸರ ಕಳೆದುಕೊಂಡ ವರು. ಗೌರಮ್ಮ ಅವರು ಸಹೋದರಿಯೊಂದಿಗೆ ಬೃಂದಾವನ ಬಡಾವಣೆಯಲ್ಲಿನ ಕೆಂಪೇಗೌಡ ಛತ್ರದಲ್ಲಿ ನಡೆಯುತ್ತಿದ್ದ ಮದುವೆಗೆ ಹೋಗಿದ್ದರು. ರಾತ್ರಿ 9 ಗಂಟೆ ವೇಳೆಗೆ ಮನೆಗೆ ಸಹೋದರಿಯೊಂದಿಗೆ ಬೃಂದಾವನ ಬಡಾವಣೆಯ ಗಣಪತಿ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಕೆಟಿಎಂ ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಗೌರಮ್ಮ ರವರ ಕತ್ತಿನಲ್ಲಿದ್ದ 30 ಗ್ರಾಂನ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿ ದ್ದಾರೆ. ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »