ಮೈಸೂರು: ವಾಯುವಿಹಾರಕ್ಕೆ ತೆರಳಿದ್ದ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.
ಇಲ್ಲಿನ ನಿವಾಸಿ ವಸಂತಕುಮಾರಿ (74) ಸರ ಕಳೆದುಕೊಂಡವರು. ಇವರು ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದು, ವಾಪಸ್ ಮನೆಗೆ ಹೋಗಲು ಅಂಗಡಿಯೊಂದರಲ್ಲಿ ಹಾಲನ್ನು ತೆಗೆದು ಕೊಂಡು ಬ್ಯಾಂಕರ್ಸ್ ಕಾಲೋನಿಯ 13ನೇ ಕ್ರಾಸ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್‍ನಲ್ಲಿ ಬಂದ ಖದೀಮ, ವಸಂತ ಕುಮಾರಿ ಅವರ ಕತ್ತಿನಲ್ಲಿದ್ದ 68 ಗ್ರಾಂ ತೂಕದ ಸರವನ್ನು ಕಿತ್ತುಕೊಂಡು, ಅದೇ ರಸ್ತೆಯಲ್ಲಿ ಮುಂದೆ ನಿಂತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಬೈಕ್‍ಗೆ ಕೂರಿಸಿಕೊಂಡು ಪರಾರಿಯಾಗಿದ್ದಾನೆ. ಇದರ ಮೌಲ್ಯ 1.36 ಲಕ್ಷ ರೂ.ಗಳೆಂದು ಅಂದಾಜಿ ಸಲಾಗಿದೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.