ಮೈಸೂರು: ಜೂಜಾಡುತ್ತಿದ್ದ ಅಡ್ಡೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, 10 ಮಂದಿ ಯನ್ನು ಬಂಧಿಸಿ, 12.580 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಹಿನಕಲ್ ನಿವಾಸಿಗಳಾದ ಮಹೇಶ್ ಬಿನ್ ಶಂಕರಪ್ಪ(26), ಮನು ಬಿನ್ ಶ್ರೀನಿ ವಾಸ(23), ರಾಮು ಬಿನ್ ಬಸವ ರಾಜು (30), ಹೇಮಂತ್ ಬಿನ್ ಸ್ವಾಮಿ (19), ಸೋಮನಾಯಕ ಬಿನ್ ಚಂದ್ರ ನಾಯಕ (24), ಟಿ.ಮಹೇಶ ಬಿನ್ ತಿಮ್ಮ ನಾಯಕ (23), ಕಿರಣ್ ಬಿನ್ ಗೋವಿಂದ ನಾಯಕ(22), ದೇವ ಬಿನ್ ಶಿವಲಿಂಗ (23), ರಾಕೇಶ್ ಬಿನ್ ಸ್ವಾಮಿ ನಾಯಕ (22) ಹಾಗೂ ವಿಜಯನಗರನಗರ 3ನೇ ಹಂತದ ನಿವಾಸಿ ಮಹೇಶ್ ಬಿನ್ ಚಿಕ್ಕನಾಯಕ (21) ಬಂಧಿತರು. ವಿಜಯ ನಗರ 3ನೇ ಹಂತದ ಉದ್ಯಾನವನದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಹಾಗೂ ವಿಜಯನಗರ ಪೊಲೀಸರು ದಾಳಿ ನಡೆಸಿದ್ದರು. ಈ ಸಂಬಂಧ ವಿಜಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.