ಜೂಜುಕೋರರ ಬಂಧನ: 22,300ರೂ. ನಗದು ವಶ
ಹಾಸನ

ಜೂಜುಕೋರರ ಬಂಧನ: 22,300ರೂ. ನಗದು ವಶ

July 13, 2018

ಹಾಸನ: ತಾಲೂಕಿನ ಬಿಟ್ಟ ಗೌಡನಹಳ್ಳಿಯ ಎಚ್‍ಪಿ ಪೆಟ್ರೋಲ್ ಬಂಕ್ ಹಿಂಭಾಗದ ಜಿಲ್ಲಾ ಅಂಗವಿಕಲರ ಚೇತನ ಕ್ಲಬ್‍ನಲ್ಲಿ ಜೂಜಾಡುತ್ತಿದ್ದ 18 ಮಂದಿ ಯನ್ನು ಪೊಲೀಸರು ಬಂಧಿಸಿ, 22,300ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ವಿಷ್ಣುವರ್ಧನ ಬಿನ್ ವೆಂಕಟ ರಮಾನುಜಯ್ಯ (35), ಸ್ವಾಮಿ ಬಿನ್ ದೇವರಾಜೇಗೌಡ (33), ಜಯರಾಂ ಬಿನ್ ರಾಮೇಗೌಡ (36), ಪರ್ವೀಜ್ ಬಿನ್ ಬಾಬಾಸಾಬ್ (41), ಆಲೂರು ಶಿವಣ್ಣ ಬಿನ್ ರಂಗಸ್ವಾಮಿ (32), ಹರೀಶ್ ಬಿನ್ ಪದ್ಮರಾಜ್ (36), ಮಧು ಬಿನ್ ಮಂಜೇಗೌಡ (31), ರಾಜು ಬಿನ್ ಅಮರ್ ಶೇಖರ್ (38), ನಸ್ರವುಲ್ಲಾ ಷರೀಫ್ ಬಿನ್ ಮಹಮದ್ ಷರೀಫ್ (48), ಪಾಪೇಗೌಡ ಬಿನ್ ನರಸಿಂಹೇಗೌಡ (51), ಹನುಮೇಗೌಡ ಬಿನ್ ರಂಗೇಗೌಡ (33), ಸ್ವಾಮಿ ಬಿನ್ ರಾಜೇಗೌಡ(41), ಮಹೇಶ್ ಬಿನ್ ನಂಜೇಗೌಡ (34), ಉದಯ್‍ಕುಮಾರ್ ಬಿನ್ ಲೇಟ್ ಪರಮೇಶ್, ಯೋಗೇಶ್ ಬಿನ್ ಡಿ.ಆರ್. ವೆಂಕಟೇಶ್ (43), ದೀಪು ಬಿನ್ ರುದ್ರಾಚಾರಿ (38), ಪದ್ಮರಾಜು ಬಿನ್ ಕೃಷ್ಣೇಗೌಡ (39), ಮಂಜುನಾಥ ಬಿನ್ ಮಲ್ಲೇಶಗೌಡ (32) ಬಂಧಿತರು.

ಜೂಜಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಪಿಐ ಸತ್ಯನಾರಾಯಣ ಮತ್ತು ಸಿಬ್ಬಂದಿ ಆರೋಪಿ ಗಳನ್ನು ಬಂಧಿಸಿ, ನಗದು ವಶಪಡಿಸಿ ಕೊಂಡಿದ್ದಾರೆ. ಈ ಸಂಬಂಧ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »