ಆಟೋಗೆ ಬಸ್ ಡಿಕ್ಕಿ: ಮೂವರಿಗೆ ಗಾಯ
ಹಾಸನ

ಆಟೋಗೆ ಬಸ್ ಡಿಕ್ಕಿ: ಮೂವರಿಗೆ ಗಾಯ

July 13, 2018

ಹಾಸನ:  ಕೆಎಸ್ ಆರ್‍ಟಿಸಿ ಬಸ್‍ವೊಂದು ಪ್ರಯಾಣಿಕರ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಮೂವರಿಗೆ ಗಂಭೀರ ಗಾಯವಾಗಿರುವ ಘಟನೆ ನಗರದ ಸಮೀಪ ವರ್ತುಲ ರಸ್ತೆಯ ರಾಜೀವ್ ಕಾಲೇಜಿನ ಸಮೀಪ ಗುರು ವಾರ ನಡೆದಿದೆ.

ಹಾಸನ-ಅರಸೀಕೆರೆ ನಾಮ ಫಲಕವುಳ್ಳ ಬಸ್ಸೊಂದು ವರ್ತುಲ ರಸ್ತೆಯಲ್ಲಿ ಹೋಗುತ್ತಿದ್ದಾಗ ಆಟೋ ನಡುವೆ ಮುಖಮುಖಿಯಾಗಿ ಅಪಘಾತ ಸಂಭವಿಸಿದೆ.

ಈ ಸಂದರ್ಭದಲ್ಲಿ ಆಟೋದಲ್ಲಿದ್ದ ಮೂವರಿಗೆ ಹೆಚ್ಚಿನ ಗಾಯಗಳಾಗಿದ್ದು, ತಕ್ಷಣ ತುರ್ತು ವಾಹನದಲ್ಲಿ ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ಈ ಸಂಬಂಧ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »