ಐದು ವರ್ಷದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ
ಹಾಸನ

ಐದು ವರ್ಷದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

July 22, 2018

ಅರಸೀಕೆರೆ: ಐದು ವರ್ಷಗಳ ಅವಧಿಯಲ್ಲಿ ನಗರದಲ್ಲಿ ಸಾಕಷ್ಟು ಮೂಲ ಸೌಲಭ್ಯ ಸಮಸ್ಯೆಗಳನ್ನು ಗರಿಷ್ಠ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸಿದ್ದೇವೆ ಎಂದು ನಗರ ಸಭಾಧ್ಯಕ್ಷ ಎಂ.ಸಮೀವುಲ್ಲಾ ಹೇಳಿದರು.

ಇಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರಸಭೆ ಆಡಳಿತವು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಅನು ಷ್ಠಾನಕ್ಕೆ ತರುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸಿದೆ ಎಂದ ಅಧ್ಯಕ್ಷರು, ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಗಳಿದ್ದು, ಆ ನಿಟ್ಟಿನಲ್ಲಿ ಆಗಿರುವ ಮತ್ತು ಆಗ ಬೇಕಾಗಿರುವ ಕೆಲಸ ಕಾರ್ಯಗಳಿಗೆ ಅನುಮೋದನೆ ಪಡೆಯಲು ಈ ಸಭೆ ಕರೆಯಲಾಗಿದೆ ಎಂದರು.

ನಾಮಿನಿ ಸದಸ್ಯ ಜಮೀಲ್ ಆಹ್ಮದ್ ಮಾತ ನಾಡಿ, ನಗರದ ಎಪಿಎಂಸಿ ಹಮಾಲಿ ಕೂಲಿ ಕಾರ್ಮಿಕರಿಗೆ ಯಾದಪುರ ರಸ್ತೆಯಲ್ಲಿ ನೂರಕ್ಕೂ ಹೆಚ್ಚು ವಸತಿ ಗೃಹಗಳನ್ನು ಕೃಷಿ ಉತ್ಪನ್ನ ಸಮಿತಿಯವರು ನೀಡಿದ್ದಾರೆ. ಸೂಕ್ತ ವಿದ್ಯುತ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕೂಡಲೇ ನಗರ ಸಭೆಯು ಈ ಪ್ರದೇಶದಲ್ಲಿರುವ ನಿವಾಸಿಗಳ ವಸತಿ ಗೃಹಗಳನ್ನು ಗ್ರಾಪಂನಿಂದ ನಗರಸಭೆ ವ್ಯಾಪ್ತಿಗೆ ಪಡೆದು ಮಾನವೀಯತೆ ಮೆರೆಯಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷರು., ಯಾದಾಪುರ ರಸ್ತೆಯಲ್ಲಿರುವ ಎಪಿಎಂಸಿ ಹಮಾಲಿಗಳ ವಸತಿ ಗೃಹಗಳನ್ನು ನಗರಸಭೆ ವ್ಯಾಪ್ತಿಗೆ ಪಡೆದು ಖಾತೆ ಮಾಡಿಕೊಡಲಾಗುವುದು. ಸದ್ಯ ವಸತಿ ಗೃಹಗಳ ಖಾತೆಗಳು ಜಾಜೂರು ಗ್ರಾಮ ಪಂಚಾಯಿತಿ ವ್ತಾಪ್ತಿಯಲ್ಲಿದ್ದು, ಸದ್ಯ ಇರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ನಗರಸಭೆ ವ್ಯಾಪ್ತಿಗೆ ವರ್ಗಾಯಿ ಸಿಕೊಳ್ಳಲಾಗುವುದು. ಮಾನವೀಯತೆ ದೃಷ್ಟಿಯ ಮೇರೆಗೆ ಈ ಪ್ರದೇಶದ ವಸತಿ ಗಳಿಗೆ ಕುಡಿಯುವ ನೀರು ಸರಬರಾಜು ಮಾಡಲು ನಗರಸಭೆ ಕಾರ್ಯ ಪ್ರವೃತ್ತ ವಾಗಲಿದೆ ಎಂದು ಭರವಸೆ ನೀಡಿದರು.

ನಗರಸಭೆ ಸದಸ್ಯೆ ಗೀತಾ ವಿಶ್ವನಾಥ್ ಮಾತನಾಡಿ, ನಗರಸಭೆಯಿಂದ ನೀಡ ಲಾಗುವ ವಿದ್ಯಾರ್ಥಿ ವೇತನಗಳನ್ನು ಪಡೆ ಯಲು ಶಾಲಾ ಕಾಲೇಜು ವಿದ್ಯಾರ್ಥಿಗಳು ನಗರಸಭೆ ಕಚೇರಿಗೆ ಸಾಕಷ್ಟು ಅಲೆದಾಡಿ ದರೂ ಹಣ ಬಿಡುಗಡೆ ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ, ನಗರದಲ್ಲಿ ಅಳವಡಿಸಿ ರುವ ಹೈ ಮಾಸ್ಕ್ ವಿದ್ಯುತ್ ದೀಪಗಳಿಗೆ ಯಾವುದೇ ಮೀಟರ್‍ಗಳನ್ನು ಅಳವಡಿ ಸಿಲ್ಲ. ಕೂಡಲೇ ಮೀಟರ್‍ಗಳನ್ನು ಅಳವಡಿ ಸಬೇಕು ಎಂದು ಸಭೆಯ ಗಮನ ಸೆಳೆದರು.

ಅಧ್ಯಕ್ಷ ಸಮೀವುಲ್ಲಾ ಮಾತನಾಡಿ, ಸಭೆಯಲ್ಲಿದ್ದ ಅಭಿಯಂತರ ಸುನೀಲ್‍ಗೆ ಬಾಕಿ ಇರುವ ಹೈ ಮಾಸ್ಕ್ ಬೀದಿ ದೀಪಗಳಿಗೆ ಕೂಡಲೇ ಅಂದಾಜು ವೆಚ್ಚ ಪಟ್ಟಿ ತಯಾರಿಸಿ ಚೆಸ್ಕಾಂ ಮೂಲಕ ಮೀಟರ್ ಗಳನ್ನು ಆಳವಡಿಸಬೇಕೆಂದು ಸೂಚಿಸಿದರು.

ಸದಸ್ಯ ಮನುಕುಮಾರ್ ಮಾತನಾಡಿ, ನಗರ ಸೇರಿದಂತೆ ನೂತನ ಬಡಾವಣೆಗಳಲ್ಲಿ ಬೀದಿನಾಯಿ, ಬಿಡಾಡಿ ದನಗಳು, ಹಂದಿಗಳ ಹಾವಳಿ ಹೆಚ್ಚಾಗಿದೆ. ಇದನ್ನು ನಿಯಂತ್ರಣ ಮಾಡಲು ನಗರಸಭೆ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸಾರ್ವ ಜನಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿಸಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಒಟ್ಟು 25 ಅಂಶಗಳಿಗೆ ಸಂಬಂ ಧಿಸಿದಂತೆ ನಿರ್ಣಯಗಳನ್ನು ಕೈಗೊಂಡು ಅನುಮೋದಿಸಲಾಯಿತು. ಸದಸ್ಯರಾದ ಶ್ರೀನಿ ವಾಸಗೌಡ, ಬಾಲಮುರುಗನ್, ವಿದ್ಯಾಧರ ಇನ್ನಿತರರು ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಗರಸಭೆ ಉಪಾಧ್ಯಕ್ಷ ಪಾರ್ಥಸಾರಥಿ, ಪೌರಾಯುಕ್ತಾ ಪರಮೇ ಶ್ವರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ರಮೇಶ್, ವ್ಯವಸ್ಥಾಪಕ ಮಹಾತ್ಮ ಉಪಸ್ಥಿತರಿದ್ದರು.

Translate »