Tag: KRS

ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುಗಡೆ: ನದಿ ತೀರದ ಜನರಿಗೆ ಮುನ್ನೆಚ್ಚರಿಕೆ
ಮಂಡ್ಯ

ಯಾವುದೇ ಕ್ಷಣದಲ್ಲಿ ನದಿಗೆ ನೀರು ಬಿಡುಗಡೆ: ನದಿ ತೀರದ ಜನರಿಗೆ ಮುನ್ನೆಚ್ಚರಿಕೆ

July 14, 2018

ಮಂಡ್ಯ: ಡ್ಯಾಂ ಮತ್ತು ನದಿಗಳ ಸನಿಹದಲ್ಲಿರುವ ಜನರೆ ಎಚ್ಚರವಾಗಿರಿ. ನಿರಂತರ ಭಾರೀ ಮಳೆಯಿಂದಾಗಿ ಕಾವೇರಿ ನದಿ ಹರಿಯುವ ಡ್ಯಾಂಗಳು ಭರ್ತಿಯಾಗಿದೆ. ಶನಿವಾರ ಅಥವಾ ಭಾನುವಾರ ಜಲಾಶಯಗಳ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ. ಈಗಾಗಲೇ ಕೆಆರ್‌ಎಸ್‌, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಯಾವುದೇ ಸಮಯದಲ್ಲಿ ಡ್ಯಾಂ ನಿಂದ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ. ನದಿ ಪಾತ್ರದಲ್ಲಿ ಪ್ರವಾಹ ಉಂಟಾಗಲಿದ್ದು, ವಿಶೇಷವಾಗಿ ರಾಮನಗರ, ಮಂಡ್ಯ, ಹಾಸನ ಹಾಗೂ ಮೈಸೂರಿನ ಕೆಲ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ….

3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್
ಮಂಡ್ಯ

3 ವರ್ಷಗಳ ಬಳಿಕ ಭರ್ತಿಯತ್ತ ಕೆಆರ್‌ಎಸ್‌ ತಂದಿದೆ ರೈತರಿಗೆ ದಿಲ್ ಖುಷ್

July 13, 2018

ಮಂಡ್ಯ:  ಜೀವನದಿ ಕಾವೇರಿ ಉಗಮತಾಣ ಕೊಡಗಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಇನ್ನೆರಡು ದಿನಗಳಲ್ಲೇ ಅಣೆಕಟ್ಟೆ ಭರ್ತಿಯಾಗುವ ಸಾಧ್ಯತೆ ಇದೆ.! ಕಳೆದ 3 ವರ್ಷಗಳಿಂದ ಬರದಿಂದಾಗಿ ಜಲಾಶಯ ಭರ್ತಿಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ಬಾರಿ ಜುಲೈ ತಿಂಗಳಲ್ಲೇ ಜಲಾಶಯ ಭರ್ತಿಯಾಗುತ್ತಿರುವುದು ಕಾವೇರಿಕೊಳ್ಳದ ರೈತರಲ್ಲಿ ಸಂತಸ ತಂದಿದೆ. ಇದರಿಂದಾಗಿ ಜಲಾಶಯ ತುಂಬುವ ಶುಭ ಘಳಿಗೆಗಾಗಿ ಜನರು ಕಾತರರಾಗಿದ್ದಾರೆ. 124.80 ಅಡಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿರುವ ಕೆಆರ್‌ಎಸ್‌ ಜಲಾಶಯದಲ್ಲಿ ಸದ್ಯ…

ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ
ಮಂಡ್ಯ

ಜು.22 ರಿಂದ ನೀರು ಬಿಡಲು ಸಿಎಸ್‍ಪಿ ಸೂಚನೆ: ಕೆಆರ್‌ಎಸ್‌ ಭರ್ತಿಗೆ 8 ಅಡಿ ಬಾಕಿ

July 12, 2018

ಮಂಡ್ಯ: ‘ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯ ಪ್ರದೇಶದಲ್ಲಿರುವ ಎಲ್ಲಾ ಕೆರೆಗಳಿಗೆ ನಾಲೆಗಳ ನೇರ ಸಂಪರ್ಕ ಕಲ್ಪಿಸುವ ಯೋಜನೆಯನ್ನು ಅಧಿಕಾರಿ ಗಳು ಶೀಘ್ರವೇ ಸಿದ್ಧಪಡಿಸಿ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಸಣ್ಣ ನೀರಾವರಿ ಸಚಿವರು ಹಾಗೂ ಕಾವೇರಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಸಿ.ಎಸ್. ಪುಟ್ಟರಾಜು ಹೇಳಿದರು. ಬೆಂಗಳೂರಿನ ವಿಧಾನ ಸೌಧದ ಕೊಠಡಿ ಸಂಖ್ಯೆ 303ರಲ್ಲಿ ಬುಧವಾರ ನಡೆದ ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರ ವ್ಯವಸಾಯಕ್ಕೆ ಸಹಕಾರಿಯಾಗು ವಂತಹ ಬಹಳಷ್ಟು…

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರವ…
ಮಂಡ್ಯ

ಕೆಆರ್‌ಎಸ್‌ನಲ್ಲಿ ಕಾವೇರಿ ಕಲರವ…

July 10, 2018

ಮಂಡ್ಯ: ಕೊಡಗಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ ನೀರಿನ ಮಟ್ಟ ಸೋಮವಾರ 111.50 ಅಡಿ ತಲುಪಿದೆ. ಕಳೆದ ವರ್ಷ ಇದೇ ಸಂದರ್ಭದಲ್ಲಿ 78.05 ಅಡಿ ನೀರು ಸಂಗ್ರಹವಾಗಿತ್ತು. ಈಗಾಗಲೇ ಹಾರಂಗಿ ಜಲಾಶಯ ತುಂಬಿರುವುದರಿಂದ ಅಲ್ಲಿಂದ ಹೊರ ಬಿಡಲಾದ ನೀರು ಸಹ ಕೆಆರ್‌ಎಸ್‌ಗೆ ಹರಿದು ಬರುತ್ತಿದೆ.

ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್‌ ಅಭಿವೃದ್ಧಿ
ಮೈಸೂರು

ಡಿಸ್ನಿಲ್ಯಾಂಡ್ ಮಾದರಿ ಕೆಆರ್‌ಎಸ್‌ ಅಭಿವೃದ್ಧಿ

July 6, 2018

ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ಭರವಸೆ ಮಂಡ್ಯಕ್ಕೆ 50 ಕೋಟಿ ವಿಶೇಷ ಪ್ಯಾಕೇಜ್ ಗಗನಚುಕ್ಕಿ ಭರಚುಕ್ಕಿಯಲ್ಲಿ ಮೂಲ ಸೌಕರ್ಯಕ್ಕೆ 5 ಕೋಟಿ ಮೈಸೂರಲ್ಲಿ ರೇಷ್ಮೆಗೂಡು ಮಾರುಕಟ್ಟೆ ಬೆಂಗಳೂರು:  ಕೃಷ್ಣರಾಜಸಾಗರ ಅಣೆಕಟ್ಟೆಗೆ ಪರ್ಯಾಯವಾಗಿ ಮೇಕೆದಾಟು ಸಮೀಪ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣಕ್ಕೆ ಚಾಲನೆ ನೀಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಹಣಕಾಸು ಇಲಾಖೆ ಹೊಣೆ ಹೊತ್ತಿರುವ ಮುಖ್ಯಮಂತ್ರಿಯವರು 2018-19ನೇ ಸಾಲಿನ ಚೊಚ್ಚಲ ಮುಂಗಡ ಪತ್ರ ಮಂಡಿಸಿ, ಪ್ರಸ್ತುತ ಮೇಕೆದಾಟು ಕುರಿತಂತೆ ಪೂರ್ವಕಾರ್ಯ ಸಾಧ್ಯತಾ ವರದಿ ಪ್ರಸ್ತಾವನೆಗೆ ಪ್ರಾಧಿಕಾರದ…

ಜುಲೈ ಮೊದಲ ವಾರದೊಳಗೆ ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ ಪ್ರತಿಭಟನೆ
ಮೈಸೂರು

ಜುಲೈ ಮೊದಲ ವಾರದೊಳಗೆ ಕೆಆರ್‌ಎಸ್‌, ಕಬಿನಿ ಜಲಾಶಯದಿಂದ ನಾಲೆಗೆ ನೀರು ಹರಿಸದಿದ್ದರೆ ಪ್ರತಿಭಟನೆ

June 19, 2018

ಮೈಸೂರು: ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯದಿಂದ ಜುಲೈ ಮೊದಲ ವಾರದೊಳಗೆ ನಾಲೆಗಳಿಗೆ ನೀರು ಬಿಡದಿದ್ದರೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಸರ್ವಜನಾಂಗ ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ವೇಣುಗೋಪಾಲ್ ಎಚ್ಚರಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ ಹಾಗೂ ಕೊಡಗಿನ ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಹಾಗೂ ಕೆಆರ್‌ಎಸ್‌ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ನಡುವೆ ಕಳೆದ ನಾಲ್ಕೈದು ದಿನಗಳಿಂದ ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ. ಕಪಿಲಾ…

ನೂರರ ಗಡಿ ತಲುಪಿದ ಕೆಆರ್‍ಎಸ್ ನೀರಿನ ಮಟ್ಟ
ಮೈಸೂರು

ನೂರರ ಗಡಿ ತಲುಪಿದ ಕೆಆರ್‍ಎಸ್ ನೀರಿನ ಮಟ್ಟ

June 17, 2018

ಮಂಡ್ಯ:  ಜೀವನಾಡಿ ಕೃಷ್ಣರಾಜ ಸಾಗರ(ಕೆಆರ್‍ಎಸ್) ಜಲಾಶಯದ ನೀರಿನ ಮಟ್ಟ ನೂರರ ಗಡಿ ತಲುಪಿದೆ. ಹಾಗೆಯೇ ಇನ್ನಿತರೆ ಜಲಾಶಯಗಳ ನೀರಿನ ಮಟ್ಟವೂ ಹೆಚ್ಚು ತ್ತಿದ್ದು ರೈತರಲ್ಲಿ ಸಂತಸ ಮೂಡಿಸಿದೆ.ಕೊಡಗಿನ ಭಾಗಮಂಡಲ ಸೇರಿದಂತೆ ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆ ಉತ್ತಮವಾಗಿರು ವುದರಿಂದ ಕೆಆರ್‍ಎಸ್ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗುವುದ ರೊಂದಿಗೆ ನೀರಿನ ಮಟ್ಟ ನೂರಡಿ ತಲುಪಿದೆ. ಸದ್ಯ 28,132 ಕ್ಯೂಸೆಕ್ ಒಳ ಹರಿವಿದ್ದು ಜಲಾ ಶಯ ಮೈದುಂಬುತ್ತಿದೆ. ಹಾಗೆಯೇ 451 ಕ್ಯೂಸೆಕ್ಸ್ ನೀರನ್ನು ನದಿಗೆ ಹರಿಯ ಬಿಡಲಾಗುತ್ತಿದೆ….

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಜೀವ ಕಳೆ
ಮೈಸೂರು

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆ: ಕೆಆರ್‌ಎಸ್‌ಗೆ ಜೀವ ಕಳೆ

June 11, 2018

ರೈತ ಸಮುದಾಯದಲ್ಲಿ ಸಂತಸ ಕೆಆರ್‌ಎಸ್‌ ನೀರಿನ ಮಟ್ಟದಲ್ಲಿ ಹೆಚ್ಚಳ ಮಂಡ್ಯ: ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ಕೊಡಗು ಜಿಲ್ಲಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೃಷ್ಣರಾಜಸಾಗರ ಅಣೆಕಟ್ಟೆಗೆ ಹರಿದು ಬರುತ್ತಿರುವ ನೀರಿನ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಅಲ್ಲದೇ ಪ್ರಸ್ತುತ ಅಣೆಕಟ್ಟೆಯಲ್ಲಿ 78 ಅಡಿಯಷ್ಟು ನೀರು ಸಂಗ್ರಹವಾಗಿರುವುದು ರೈತ ಸಮುದಾಯದಲ್ಲಿ ಸಂತಸ ಮನೆ ಮಾಡಿದೆ. ಗರಿಷ್ಠ 124.80ಅಡಿ ಸಾಮಥ್ರ್ಯದ ಕೆಆರ್‌ಎಸ್‌ನಲ್ಲಿ ಭಾನುವಾರ ಸಂಜೆ ವೇಳೆಗೆ 78.50 ಅಡಿ ನೀರು ಸಂಗ್ರಹವಾಗಿತ್ತು. ಕೆಆರ್‍ಎಸ್‍ಗೆ 4470 ಕ್ಯೂಸೆಕ್ಸ್…

1 5 6 7
Translate »