Tag: KRS

ತಮಿಳ್ನಾಡಿಗೆ ನಿಗದಿಗಿಂತ 80 ಟಿಎಂಸಿ ಅಧಿಕ ನೀರು
ಮೈಸೂರು

ತಮಿಳ್ನಾಡಿಗೆ ನಿಗದಿಗಿಂತ 80 ಟಿಎಂಸಿ ಅಧಿಕ ನೀರು

August 10, 2018

ಬೆಂಗಳೂರು: ಕಾವೇರಿ ಜಲಾನಯನ ಪ್ರದೇಶದ ಕೆಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುತ್ತಿದ್ದರೂ, ತಮಿಳುನಾಡಿಗೆ ರಾಜ್ಯದಿಂದ ನಿಗದಿ ಪಡಿಸಿದ್ದಕ್ಕಿಂತ 80 ಟಿಎಂಸಿ ಹೆಚ್ಚು ನೀರು ಹರಿದಿದೆ. ಪ್ರಾಧಿಕಾರದ ಆದೇಶದಂತೆ ಜೂನ್‍ನಿಂದ ನವೆಂಬರ್ ಅಂತ್ಯದವರೆಗೂ 156 ಟಿಎಂಸಿ ನೀರು ತಮಿಳುನಾಡಿಗೆ ನಮ್ಮ ಜಲಾನಯನ ಭಾಗದಿಂದ ಹರಿಸಬೇಕು. ಆದರೆ ಇಂದಿಗೆ ಆ ಪ್ರಮಾಣ ಪೂರ್ಣಗೊಂಡಿದೆ. ನಾವು ಆಗಸ್ಟ್ ಅಂತ್ಯಕ್ಕೆ ನೀಡಬೇಕಾಗಿ ದ್ದಕ್ಕಿಂತ ಹೆಚ್ಚುವರಿಯಾಗಿ 80 ಟಿಎಂಸಿಯಷ್ಟು ನೀರು ಹರಿದಿದೆ. ಈಗಾಗಲೇ ಉಭಯ ರಾಜ್ಯಗಳ ಜಲಾನಯನ ಭಾಗದಲ್ಲಿ ಬರುವ ಕೆಆರ್‌ಎಸ್‌,…

ಕೆಆರ್‌ಎಸ್‌ ಜಲಾಶಯದಿಂದ ಅಧಿಕ ನೀರು ಬಿಡುಗಡೆ ರಂಗನತಿಟ್ಟು ಪಕ್ಷಿಧಾಮ ಧ್ವಂಸ
ಮೈಸೂರು

ಕೆಆರ್‌ಎಸ್‌ ಜಲಾಶಯದಿಂದ ಅಧಿಕ ನೀರು ಬಿಡುಗಡೆ ರಂಗನತಿಟ್ಟು ಪಕ್ಷಿಧಾಮ ಧ್ವಂಸ

August 8, 2018

ಮೈಸೂರು: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಭಾರೀ ಪ್ರಮಾಣದ ನೀರನ್ನು ಹೊರಗೆ ಬಿಟ್ಟ ಪರಿಣಾಮ ಕಾವೇರಿ ನದಿಯಲ್ಲಿ ಉಂಟಾದ ಪ್ರವಾಹ ದಿಂದ ಶ್ರೀರಂಗಪಟ್ಟಣ ಬಳಿಯ ವಿಶ್ವ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಅಪಾರ ಹಾನಿ ಉಂಟಾಗಿದೆ. ಕೊಡಗು ಭಾಗದಲ್ಲಿ ಈ ಬಾರಿ ಮಳೆ ಪ್ರಮಾಣ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಒಳಹರಿವು ಅಧಿಕವಾಗಿದ್ದರಿಂದ ಕಳೆದ 20 ದಿನಗಳಿಂದ ಕೆಆರ್‌ಎಸ್‌ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಕ್ರಸ್ಟ್‍ಗೇಟ್‍ಗಳ ಮೂಲಕ ಹೊರ ಬಿಡಲಾಗುತ್ತಿದ್ದು, ಇದರಿಂದ ಪಕ್ಷಿಧಾಮ ತತ್ತರಿಸಿದೆ. ದೇಶದಲ್ಲೇ ಖ್ಯಾತ ಪ್ರವಾಸಿ ಕೇಂದ್ರವೂ ಆಗಿರುವ ರಂಗನತಿಟ್ಟು…

ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ
ಮೈಸೂರು

ಜಲಾಶಯ ಭರ್ತಿ ಹಿನ್ನೆಲೆ ಜೂನ್, ಜುಲೈನಲ್ಲಿ ಕೆ.ಆರ್.ಎಸ್.  ಪ್ರವೇಶದಿಂದ 1,00,52,000 ರೂ. ಆದಾಯ

August 2, 2018

ಮೈಸೂರು: ಕಾವೇರಿ ಕಣಿವೆಯಲ್ಲಿ ಅಧಿಕ ಮಳೆಯಾದ ಪರಿಣಾಮ ಕೃಷ್ಣರಾಜಸಾಗರ ಅಣೆಕಟ್ಟೆ ಅತೀ ಬೇಗ ತುಂಬಿದ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿದೆ. ಕಳೆದ ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿ ಕೆಆರ್‍ಎಸ್ ಜಲಾಶಯ ಮೈದುಂಬಿದ ಹಿನ್ನೆಲೆಯಲ್ಲಿ ನೈಸರ್ಗಿಕ ಸೌಂದರ್ಯ ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರ ದಂಡೇ ಧಾವಿಸಿದ್ದು, ಅಣೆಕಟ್ಟೆಯಲ್ಲಿ ನೀರು ಗರಿಷ್ಟ ಮಟ್ಟ ತಲುಪಿದ ನಂತರ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಟ್ಟು ನಂತರವಂತೂ ಬೋರ್ಗರೆಯುವ ಜಲಧಾರೆಯನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಕೆಆರ್‍ಎಸ್‍ನತ್ತ ಮುಗಿಬಿದ್ದಿದ್ದರು. ಕ್ರಸ್ಟ್…

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಚಿಂತನೆ !
ಮೈಸೂರು

ಕೆಆರ್‌ಎಸ್‌ನಲ್ಲಿ ಡಿಸ್ನಿಲ್ಯಾಂಡ್ ಚಿಂತನೆ !

July 30, 2018

ಬೃಂದಾವನದ ವಿನ್ಯಾಸಗಾರ ಜರ್ಮನಿಯ ತೋಟಗಾರಿಕಾ ಪಿತಾಮಹ ಜಿ.ಹೆಚ್.ಕ್ರುಂಬೀಗೆಲ್‍ರವರ ಮರಿಮೊಮ್ಮಗಳಿಂದ ವಿರೋಧ ಕೆಆರ್‌ಎಸ್‌ನ ಬೃಂದಾವನ ಗಾರ್ಡನ್‍ನ ರೂವಾರಿ ಮೈಸೂರು: ಜರ್ಮನಿಯ ತೋಟಗಾರಿಕಾ ಪಿತಾಮಹರಾಗಿದ್ದ ದಿ. ಗುಸ್ತಾವ್ ಹೆರ್ಮನ್ ಕ್ರುಂಬಿಗೆಲ್‍ರ ಮೊಮ್ಮಗಳಾದ ಅಲಿಯಾ ಫೆಲ್ಲ್ ಗಾರ್ಡಿನರ್ ಕ್ರುಂಬಿಗೆಲ್‍ರವರು ಬೃಂದಾವನ ಉದ್ಯಾನವನವನ್ನು ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಪರಿವರ್ತಿಸುವ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಗುಸ್ತಾವ್ ಹೆರ್ಮನ್ ಕ್ರುಂಬಿಗೆಲ್‍ರವರು ಬೆಂಗಳೂರಿನ laalbagh botanical gardens ನಲ್ಲಿ ವೈವಿದ್ಯಮಯ ಗಿಡಗಳನ್ನು ನೆಟ್ಟು ಅದರ ಶ್ರೀಮಂತ ಹೆಸರಿನ ಹೊದಿಕೆಯ ರೂವಾರಿಯಾಗಿದ್ದಾರೆ. ಅಂದಿನ ಮೈಸೂರು ಮಹಾರಾಜರಾಗಿದ್ದ…

ಅಲಿಯಾ ಫೆಲ್ಪ್ಸ್‍ರವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೆದ ಪತ್ರದ ಸಾರಾಂಶ
ಮೈಸೂರು

ಅಲಿಯಾ ಫೆಲ್ಪ್ಸ್‍ರವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೆದ ಪತ್ರದ ಸಾರಾಂಶ

July 30, 2018

ಮಾನ್ಯ ಮುಖ್ಯಮಂತ್ರಿಯವರೇ, ಸುಪ್ರಸಿದ್ಧ ಬೃಂದಾವನ ಉದ್ಯಾನವನವನ್ನು ಅಮೇರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂಬ ವರದಿಯನ್ನು ನಾನು ಇಂದು ಓದಿದಾಗ ನನಗೆ ಸಬೇದಾಶ್ಚರ್ಯವಾಯಿತು. ಅಂದಿನ ಮೈಸೂರು ಮಹರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ಜನರ ಅನುಕೂಲಕ್ಕಾಗಿ ಕಾವೇರಿ ನದಿಗೆ ಒಂದು ಅಣೆಕಟ್ಟು ಕಟ್ಟುವ ಕನಸು ಹೊಂದಿದ್ದರು. ಅದಕ್ಕಾಗಿ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಮುಖ್ಯ ಇಂಜಿನಿಯರ್ ಆಗಿ ನೇಮಿಸಿದರು. ಅಣೆಕಟ್ಟಿನ ಒಂದು ಹಂತದ ಕೆಳಗೆ ಸುಂದರವಾದ ಬೃಂದಾವನ ಉದ್ಯಾನವನವನ್ನು ನಿರ್ಮಿಸಲಾಯಿತು ಮತ್ತು ಅದನ್ನು ಆಗ ಕೃಷ್ಣರಾಜ ಟೆರೆಸ್ ಗಾರ್ಡನ್…

`ಡಿಸ್ನಿಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ
ಮಂಡ್ಯ

`ಡಿಸ್ನಿಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಾಣ

July 26, 2018

ಮಂಡ್ಯ:  ವಿಶ್ವವಿಖ್ಯಾತ ಕೆಆರ್‌ಎಸ್‌ನಲ್ಲಿ ‘ಡಿಸ್ನಿ ಲ್ಯಾಂಡ್’ ಮಾದರಿ ಮನರಂಜನಾ ಪಾರ್ಕ್ ನಿರ್ಮಿಸಲು ಸರ್ಕಾರ ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಕೆಆರ್‌ಎಸ್‌ಗೆ ಭೇಟಿ ಪರಿಶೀಲನೆ ನಡೆಸಿದರು. ಅಮೆರಿಕಾದ ಡಿಸ್ನಿಲ್ಯಾಂಡ್ ಮಾದರಿ ಯಲ್ಲೇ ಕೆಆರ್‌ಎಸ್‌ ಬೃಂದಾವನವನ್ನು ಅಭಿವೃದ್ಧಿಪಡಿಸಲು ಬಜೆಟ್‍ನಲ್ಲಿ ಘೋಷಣೆ ಯಾಗಿದೆ, ಇದಕ್ಕಾಗಿ 5 ಕೋಟಿ ರೂ. ಗಳನ್ನೂ ಸಹ ಘೋಷಣೆ ಮಾಡಲಾಗಿದೆ, ಈ ಹಿನ್ನೆಲೆಯಲ್ಲಿ ಯೋಜನೆ ಜಾರಿಗೊಳಿಸಲು ಸಿದ್ದತೆ ನಡೆದಿದೆ ಎಂದು ಅಧಿಕಾರಿಗಳ ಸಭೆಯ ಬಳಿಕ ಸಚಿವರು ಸುದ್ದಿಗಾರರಿಗೆ ತಿಳಿಸಿದರು. ನೀಲನಕ್ಷೆ ತಯಾರಿಗೆ…

ಕೆಆರ್‌ಎಸ್‌ ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರ ದಂಡು
ಮೈಸೂರು

ಕೆಆರ್‌ಎಸ್‌ ಹಿನ್ನೀರಿನ ವೇಣು ಗೋಪಾಲಸ್ವಾಮಿ ದೇವಸ್ಥಾನಕ್ಕೂ ಪ್ರವಾಸಿಗರ ದಂಡು

July 24, 2018

ಮೈಸೂರು:  ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿರುವ ವೇಣು ಗೋಪಾಲಸ್ವಾಮಿ ದೇವಾಲಯ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸಾಗರದಂತೆ ಕಾಣುವ ಕೆಆರ್‌ಎಸ್‌ ಹಿನ್ನೀರು ಪ್ರದೇಶದಲ್ಲಿರುವ ಐತಿಹಾಸಿಕ ವೇಣುಗೋಪಾಲಸ್ವಾಮಿ ದೇವಾಲಯ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಿಂದೆ ಹಿನ್ನೀರಿನ ಮಟ್ಟ ಇಳಿದಿದ್ದಾಗ ಈ ದೇವಾಲಯ ಗೋಚರವಾಗಿತ್ತು. ನಂತರ ದಡಕ್ಕೆ ಸ್ಥಳಾಂತರಿಸಲಾಗಿದೆ. ದೇವಾಲಯದ ಜೊತೆಗೆ ವಿಸ್ತಾರವಾದ ಆವರಣದಲ್ಲಿ ನಿಂತು ಹಿನ್ನೀರಿನ ದೃಶ್ಯವನ್ನು ಕಣ್ತುಂಬಿಕೊಳ್ಳಲು ಇದೀಗ ಜನ ಸಾಗರವೇ ಹರಿದು ಬರುತ್ತಿದೆ. ಕೆಆರ್‌ಎಸ್‌ ಅಣೆಕಟ್ಟೆ ವೀಕ್ಷಣೆಗೆ ಬರುವ ಪ್ರವಾಸಿಗರು, ಹಿನ್ನೀರು ಪ್ರದೇಶದಲ್ಲಿರುವ…

ವರ್ಣರಂಜಿತ ಕೆಆರ್‌ಎಸ್‌ ಜಲವೈಭವ ಕಣ್ತುಂಬಿಕೊಂಡ ಜನಸಾಗರ
ಮೈಸೂರು

ವರ್ಣರಂಜಿತ ಕೆಆರ್‌ಎಸ್‌ ಜಲವೈಭವ ಕಣ್ತುಂಬಿಕೊಂಡ ಜನಸಾಗರ

July 23, 2018

ಮೈಸೂರು:  ಕೃಷ್ಣರಾಜ ಸಾಗರ(ಕೆಆರ್‌ಎಸ್‌) ಅಣೆಕಟ್ಟೆ ಕಣ್ತುಂಬಿಕೊಳ್ಳಲು ರಜಾ ದಿನವಾದ ಭಾನುವಾರ ಜನ ಸಾಗರವೇ ಹರಿದು ಬಂದಿತ್ತು.ಇಂದು ಬೆಳಿಗ್ಗೆ ಸುಮಾರು 8.30 ರಿಂದಲೇ ಪ್ರವಾಸಿಗರು ಕೆಆರ್‌ಎಸ್‌ಗೆ ಆಗಮಿಸಿ, ಜಲವೈಭವವನ್ನು ಸವಿದರು. ಅಣೆಕಟ್ಟೆಯಿಂದ ಗೇಟ್‍ಗಳ ಮೂಲಕ ಹರಿಬಿಡುವ ನೀರಿಗೂ ಬಣ್ಣ ಬಣ್ಣದ ಬೆಳಕಿನ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಸಂಜೆ ವೇಳೆ ಗಂತೂ ಜನ ಸಾಗರೋಪಾದಿಯಲ್ಲಿ ಹರಿದು ಬಂದರು. 300ಕ್ಕೂ ಹೆಚ್ಚು ಎಲ್‍ಇಡಿ ಲೈಟ್ ಗಳಿಂದ ರಾಷ್ಟ್ರ ಧ್ವಜದ ತ್ರಿವರ್ಣವನ್ನು ಧುಮ್ಮಿ ಕ್ಕುವ ನೀರಿನಲ್ಲಿ ಸಮ್ಮಿಳಿತಗೊಳಿಸಿರುವ ಸೊಬಗು ಸವಿದು ಸಂಭ್ರಮಿಸಿದರು. ತಮ್ಮ…

ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಕುಮಾರಸ್ವಾಮಿ ಬಾಗಿನ ಸಮರ್ಪಣೆ
ಮಂಡ್ಯ, ಮೈಸೂರು

ಕೆಆರ್‌ಎಸ್‌ ಜಲಾಶಯಕ್ಕೆ ಸಿಎಂ ಕುಮಾರಸ್ವಾಮಿ ಬಾಗಿನ ಸಮರ್ಪಣೆ

July 21, 2018

ಮೈಸೂರು: ನಾಲ್ಕು ವರ್ಷಗಳ ನಂತರ ತುಂಬಿ ತುಳುಕುತ್ತಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್‌) ಜಲಾಶಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಸಂಜೆ ತಮ್ಮ ಸಚಿವ ಸಹೊದ್ಯೋಗಿಗಳು ಹಾಗೂ ಶಾಸಕರೊಂದಿಗೆ ಸಾಂಪ್ರದಾಯಿಕವಾಗಿ ಬಾಗಿನ ಸಮರ್ಪಣೆ ಮಾಡಿದರು. ಕಬಿನಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಸಂಜೆ 4 ಗಂಟೆಗೆ ಹೆಲಿಕಾಪ್ಟರ್‍ನಲ್ಲಿ ಕೆಆರ್‌ಎಸ್‌ ಹೆಲಿಪ್ಯಾಡ್‍ಗೆ ಬಂದಿಳಿದ ಕುಮಾರಸ್ವಾಮಿ ಅವರು, ಸಂಜೆ 4.30 ಗಂಟೆಗೆ ಗೋಧೂಳಿ ಶುಭಲಗ್ನದಲ್ಲಿ ಪತ್ನಿ ಶ್ರೀಮತಿ ಅನಿತಾ ಅವರೊಂದಿಗೆ ಕೆಆರ್‌ಎಸ್‌ನ ಕಾವೇರಿ ಮಾತೆಗೆ ಬಾಗಿನ ಸಮರ್ಪಿಸಿದರು. ಶ್ರೀರಂಗಪಟ್ಟಣದ ಖ್ಯಾತ…

ಇಂದು ಕಾವೇರಿಗೆ ಸಿಎಂ ಬಾಗೀನ
ಮಂಡ್ಯ

ಇಂದು ಕಾವೇರಿಗೆ ಸಿಎಂ ಬಾಗೀನ

July 20, 2018

ಮಂಡ್ಯ: ಜಿಲ್ಲೆಯ ಜೀವ ನಾಡಿ ಕೃಷ್ಣರಾಜ ಸಾಗರ ಜಲಾಶಯ ಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ (ಜು.20) ಬಾಗೀನ ಅರ್ಪಿಸಲಿದ್ದು, ಸಕಲ ಸಿದ್ಧತೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 1.30ಕ್ಕೆ ಕೊಡಗು ಜಿಲ್ಲೆಯಿಂದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಅವರು ಅಣೆಕಟ್ಟೆ ಯಲ್ಲಿರುವ ಕಾವೇರಿ ಮಾತೆಯ ಪ್ರತಿಮೆಗೆ ಪೂಜೆ ಸಲ್ಲಿಸಿ, ತರುವಾಯ ಬಾಗೀನ ಅರ್ಪಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಇಂಧನ ಸಚಿವ…

1 3 4 5 6 7
Translate »