ಅಲಿಯಾ ಫೆಲ್ಪ್ಸ್‍ರವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೆದ ಪತ್ರದ ಸಾರಾಂಶ
ಮೈಸೂರು

ಅಲಿಯಾ ಫೆಲ್ಪ್ಸ್‍ರವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೆದ ಪತ್ರದ ಸಾರಾಂಶ

July 30, 2018

ಮಾನ್ಯ ಮುಖ್ಯಮಂತ್ರಿಯವರೇ,

ಸುಪ್ರಸಿದ್ಧ ಬೃಂದಾವನ ಉದ್ಯಾನವನವನ್ನು ಅಮೇರಿಕಾದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂಬ ವರದಿಯನ್ನು ನಾನು ಇಂದು ಓದಿದಾಗ ನನಗೆ ಸಬೇದಾಶ್ಚರ್ಯವಾಯಿತು.

ಅಂದಿನ ಮೈಸೂರು ಮಹರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ಜನರ ಅನುಕೂಲಕ್ಕಾಗಿ ಕಾವೇರಿ ನದಿಗೆ ಒಂದು ಅಣೆಕಟ್ಟು ಕಟ್ಟುವ ಕನಸು ಹೊಂದಿದ್ದರು. ಅದಕ್ಕಾಗಿ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರನ್ನು ಮುಖ್ಯ ಇಂಜಿನಿಯರ್ ಆಗಿ ನೇಮಿಸಿದರು. ಅಣೆಕಟ್ಟಿನ ಒಂದು ಹಂತದ ಕೆಳಗೆ ಸುಂದರವಾದ ಬೃಂದಾವನ ಉದ್ಯಾನವನವನ್ನು ನಿರ್ಮಿಸಲಾಯಿತು ಮತ್ತು ಅದನ್ನು ಆಗ ಕೃಷ್ಣರಾಜ ಟೆರೆಸ್ ಗಾರ್ಡನ್ ಎಂದು ಕರೆಯಲಾಗುತಿತ್ತು. ನಂತರ ಅದನ್ನು ‘ದಿ ಶಾಲಿಮರ್ ಗಾರ್ಡನ್’ ಎಂದೇ ಕರೆಯಲಾಗುವ ಕಾಶ್ಮೀರದ ‘ಮೊಘಲ್ ಗಾರ್ಡನ್’ ನಿಂದ ಸ್ಫೂರ್ತಿಗೊಂಡ ಅಂದಿನ ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ರವರು ನನ್ನ ಮುತ್ತಾತನವರಾದ ಜಿ.ಹೆಚ್. ಕ್ರುಂಬಿಗೆಲ್‍ ರೊಡಗೂಡಿ ಈ ಸುಂದರ ಬೃಂದಾವನ ಉದ್ಯಾನವನವನ್ನು ರೂಪಿಸಿದರು. ಅಂದಹಾಗೆ ಜಿ.ಹೆಚ್ ಕ್ರುಂಬಿಗೆಲ್ ಅವರು ಅಂದು ಮೈಸೂರು ಪ್ರಾಂತ್ಯದ ಉದ್ಯಾನವನಗಳ ಹಾಗೂ ತೋಟಗಳ Superintetendent ಆಗಿದ್ದರು. ಬೆಂಗಳೂರಿನ ಲಾಲ್‍ಭಾಗ್‍ನ ರೂವಾರಿಯಾಗಿ, ಬೆಂಗಳೂರು ಉದ್ಯಾನನಗರಿ ಎಂಬ ಬಿರುದು ಪಡೆದುಕೊಳ್ಳಲು ಕಾರಣೀಭೂತರಾದವರು.

5 ವರ್ಷಗಳ ಅವಧಿಯಲ್ಲಿ (1927-1932) 60 ಎಕರೆ ಪ್ರದೇಶದಲ್ಲಿ ಈ ಸುಂದರ ಬೃಂದಾವನ ಉದ್ಯಾನವನವನ್ನು ನಿರ್ಮಿಸಿದರು. ಬೃಂದಾವನದ ಶ್ರೇಷ್ಠತೆಯ ಬಗ್ಗೆ ಈ ಸಂಕ್ಷಿಪ್ತ ಐತಿಹಾಸಿಕ ಉಲ್ಲೇಖನ ಸಾಲುವುದಿಲ್ಲವೇ? ಅಮೆರಿಕದ ಡಿಸ್ನಿ ಲ್ಯಾಂಡ್ ಈ ಸುಂದರ ಬೃಂದಾವನದೊಟ್ಟಿಗೆ ಸ್ಫರ್ಧಿಸಬಲ್ಲದೇ? ಬಹುಶಃ ಅಲ್ಪಾವಧಿಯ ಮಟ್ಟಿಗೆ ಇದು ಸಾಧ್ಯವಾಗಬಹುದೇನೋ!

ಇತಿಹಾಸ ಪ್ರಸಿದ್ಧ ಮೈಸೂರಿನ ದಸರಾದ ಸಮಯದಲ್ಲಿ ಅಂತರಾಷ್ಟ್ರೀಯ ಪ್ರವಾಸಿಗರನ್ನು ಮೈಸೂರಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ರಾಜ್ಯದ ಪ್ರವಾಸೋದ್ಯಮ ಸಚಿವರು ಹೆಚ್ಚು ಉತ್ಸುಕರಾಗಿರಬಹುದೇನೋ. ಅಂದ ಹಾಗೆ, ಮೈಸೂರಿನ ಈ ಐತಿಹಾಸಿಕ ದಸರಾವನ್ನು ಅಂದಿನ ಮೈಸೂರು ಮಹಾರಾಜರು ತಾಯಿ ಚಾಮುಂಡೇಶ್ವರಿಯ ಆರಾಧನೆಯಾಗಿ 1610ರಲ್ಲಿ ಪ್ರಾರಂಭಿಸಿದರು.

ಮೈಸೂರಿಗೆ ಬರುವ ಬಹಳಷ್ಟು ಅಂತರಾಷ್ಟ್ರೀಯ ಪ್ರವಾಸಿಗರು ಮೈಸೂರಿನ ಶ್ರೀಮಂತ ಪರಂಪರೆಯನ್ನು ಅರಿಯಲು ಬರುತ್ತಾರೆ. ಈ ಪ್ರವಾಸಿಗಳು ತಮ್ಮದೇ ದೇಶಗಳಲ್ಲಿ ಇಂತಹ Theme Park ಗಳಿರುವಾಗ ಭೂಗೋಲದ ಅರ್ಧದಷ್ಟು ಸುತ್ತಾಡಿ ಅದನ್ನು ನೋಡಲು ಇಲ್ಲಿಗೆ ಯಾಕೆ ಬರುತ್ತಾರೆ?

ಭಾರತವು ಅತ್ಯಂತ ಶ್ರೀಮಂತ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಪಾರಂಪರಿಕ ಇತಿಹಾಸವನ್ನು ಹೊಂದಿದೆ. ಈ ಶ್ರೀಮಂತ ಪರಂಪರೆಯೇ ಪ್ರವಾಸಿಗರನ್ನು ಮೈಸೂರಿನತ್ತ ಆಕರ್ಷಿಸುತ್ತಿರುವುದು ಮತ್ತು ಅದುವೇ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಯ ದ್ಯೋತಕನನ್ನಾಗಿ ಮಾಡುವುದು. ಬೃಂದಾವನ ಉದ್ಯಾನವನವು ಬಹಳಷ್ಟು ಅಂತರರಾಷ್ಟ್ರೀಯ ಮೌಲ್ಯವುಳ್ಳದ್ದಾಗಿದ್ದು, ಅದನ್ನು ICOMOS ಮಾರ್ಗದರ್ಶಿ ಸೂತ್ರಗಳ ಪ್ರಕಾರವಾಗಿಯೇ ಕಾಪಾಡಿಕೊಂಡು ಬರಬೇಕು.

ಬೃಂದಾವನ ಉದ್ಯಾನವನವು ಪ್ರತಿಯೊಬ್ಬರಿಗೂ ಸ್ಫೂರ್ತಿಯ ಚಿಲುಮೆಯಾಗಿದ್ದು ಅದನ್ನು ಹಾಗೆಯೇ ಕಾಪಾಡಿಕೊಂಡು ಬರಬೇಕಾಗಿದೆ.

“Genius Loci” ಎಂದು ಹೇಳಲಾದ ಡಿಸ್ನಿಲ್ಯಾಂಡ್‍ನ ಈ ಚಿಂತನೆಯು, ಚರಿತ್ರೆಯ ಐತಿಹಾಸಿಕ ನಿರ್ಲಕ್ಷಕ್ಕೆ ಸಾಕ್ಷಿಯಾಗಲಿದೆ.

ನಾನು ಈ ಐಸಿಮಿಕ್ ಲಾಂಡ್‍ಮಾರ್ಕ್‍ನ್ನು ತನ್ನ ಮೂಲಸ್ವರೂಪದಲ್ಲಿ ಉಳಿಸಿಕೊಂಡು, ಕೆಆರ್‌ಎಸ್‌ನ ಪುನಶ್ಚೇತನಕ್ಕಾಗಿ ಇನ್ನಿತರ ಮಾರ್ಗಗಳನ್ನು ನಿಮ್ಮೊಂದಿಗೆ ಚರ್ಚಿಸಲು ನಾನು ಬಹಳ ಉತ್ಸುಕಳಾಗಿದ್ದೇನೆ ಎಂದು ತಿಳಿಸಲು ಇಚ್ಛಿಸುತ್ತೇನೆ.

ಇಂತಿ,

ಆಲಿಯಾ ಫೆಲ್ಪ್ಸ್ ಗಾರ್ಡಿನರ್ ಕ್ರುಂಬಿಗೆಲ್

ONE COMMENT ON THIS POST To “ಅಲಿಯಾ ಫೆಲ್ಪ್ಸ್‍ರವರು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಬರೆದ ಪತ್ರದ ಸಾರಾಂಶ”

Translate »